ಅನಾರೋಗ್ಯ ದಿಂದ ಹಾಸಿಗೆ ಹಿಡಿದಿರುವ ಕೆಚ್ಚೆದೆಯ ಕನ್ನಡತಿ ಅನು ಅಕ್ಕ , ಏನಾಗಿದೆ ಗೊತ್ತಾ? ನಿಜಕ್ಕೂ ಕಣ್ಣೀರು ಬರುತ್ತೆ..

ಕೆಚ್ಚೆದೆಯ ಕನ್ನಡತಿ ಅಕ್ಕ ಅನು (Kecchedeya Kannadati Akka Anu) ಈ ಹೆಸರು ಎಲ್ಲರಿಗೂ ಕೂಡ ಚಿರಪರಿಚಿತ. ಕಳೆದ ಕೆಲವು ವರ್ಷಗಳಿಂದ ಸಮಾಜ ಸೇವೆಯ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿರುವ ಕನ್ನಡತಿ ಅಕ್ಕ ಅನು ಅವರಿಗೆ ದೊಡ್ಡ ಸಂಖ್ಯೆಯಲ್ಲಿ ಫ್ಯಾನ್ಸ್ ಬಳಗವಿದೆ. ಸರ್ಕಾರಿ ಶಾಲೆಗಳನ್ನು ಉಳಿಸುವ ದೃಷ್ಟಿಯಿಂದ ಅಂತಹ ಶಾಲೆಗಳಿಗೆ ಬಣ್ಣವನ್ನು ಬಳಿದು ಕನ್ನಡ ಶಾಲೆ ಉಳಿಸಿ ಅಭಿಯಾನ(Save Kannada School Campaign) ವನ್ನು ಮಾಡುತ್ತಿದ್ದಾರೆ.

ಈ ನಿಟ್ಟಿನಲ್ಲಿ ಕನ್ನಡತಿ ಅಕ್ಕ ಅನು ಅವರ ತಂಡವು ನೂರಕ್ಕೂ ಹೆಚ್ಚು ಶಾಲೆಗಳಿಗೆ ಬಣ್ಣ ಬಳಿದು ಈ ಅಭಿಯಾನವನ್ನು ಯಶಸ್ವಿಯಾಗಿ ನಡೆಸುತ್ತಿದೆ. ಆದರೆ ಕನ್ನಡತಿ ಅಕ್ಕ ಅನುರವರ ಈ ಕೆಲಸಕ್ಕೆ ಬ್ರೇಕ್ ಬಿದ್ದಿದೆ. ಅ-ನಾರೋಗ್ಯ ಸಂಬಂಧ ಈ ಕೆಲಸವನ್ನು ನಿಲ್ಲಿಸಿರುವ ಅನುರವರಿಗೆ ಫೋನ್ ಕಾಲ್ ಗಳು ಬರುತ್ತಲೇ ಇದೆ. ಫೋನ್ ಕರೆಗಳಿಗೆ ಸ್ಪಂದಿಸಿರುವ ಕನ್ನಡತಿ ಅಕ್ಕ ಅನುರವರುರು ಅ-ನಾರೋಗ್ಯದ ಹಿನ್ನೆಲೆಯಲ್ಲಿ ಈ ನಿರ್ಧಾರ ಮಾಡಿರುವುದಾಗಿ ಹೇಳಿದ್ದಾರೆ.

ಅಷ್ಟೇ ಅಲ್ಲದೇ ನಿಮ್ಮ ಶಾಲೆಗಳ ಕೆಲಸವನ್ನು ನೀವೇ ಗ್ರಾಮಸ್ಥರು ಸೇರಿ ಮಾಡಿಕೊಳ್ಳಿ ಎಂದಿದ್ದಾರೆ. ಸೋಶಿಯಲ್ ಮೀಡಿಯಾ (Social Media) ದಲ್ಲಿ ಈ ಬಗ್ಗೆ ಸಂಕ್ಷಿಪ್ತವಾಗಿ ಬರೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕನ್ನಡತಿ ಅಕ್ಕ ಅನು ಪೋಸ್ಟ್ ಹಾಕಿದ್ದು, “ನನಗೆ ಕೆಲವು ಆರೋಗ್ಯ ಸಮಸ್ಯೆಯಿಂದ ನಾವು ಕನ್ನಡ ಶಾಲೆ ಉಳಿಸಿ ಅಭಿಯಾನ ಹಾಗೂ ಸಾಮಾಜಿಕ ಕಾರ್ಯಗಳಿಂದ ದೂರ ಉಳಿಯಬೇಕಾಯಿತು. ಸುಮಾರು ಜನ ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ವಿದ್ಯಾರ್ಥಿಗಳ ಜೊತೆಗೆ ಸಾಮಾಜಿಕ ಕಳಕಳಿ ಹೊಂದಿರುವವರು ನನಗೆ ಕರೆ ಮಾಡ್ತಾನೆ ಇದ್ದೀರಿ.

ನಾನು ಎಲ್ಲರಿಗೂ ಕೆಲಸ ಬಿಟ್ಟಿದೀವಿ ಅನಾರೋಗ್ಯ ಅಂತ ಪ್ರತಿಯೊಬ್ಬರಿಗೂ ಹೇಳಲು ಕಷ್ಟವಾಗುತ್ತಿದೆ. ಆದ್ದರಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಇದೊಂದು ವಿಷಯವನ್ನು ಹೇಳಲೇ ಬೇಕಾಯಿತು.ಮುಂದೊಂದು ದಿನ ನಮ್ಮ ಆರೋಗ್ಯ ಹಾಗೂ ನಮ್ಮ ಜೀವನ ಉತ್ತಮ ಮಟ್ಟದಲ್ಲಿ ಸಾಗಿದ್ರೆ ಖಂಡಿತ ನಾವೂ ಹಾಗೂ ನಮ್ಮ ತಂಡ ಮುಂದಿನ ಕೆಲವು ವರ್ಷಗಳಲ್ಲಿ ಎಲ್ಲವೂ ಸರಿಹೊಂದಿದರೆ ನೋಡೋಣ. ಆಗಂತ ನಿಮ್ಮ ಊರಿನ ಶಾಲೆಗಳಿಗೆ ನಾವೇ ಬರ್ತೀವಿ ಅಂತ ಭಾವಿಸಬೇಡಿ.

ಯಾಕೆಂದ್ರೆ ಈಗಾಗಲೇ ನಮ್ಮ ಲಿಸ್ಟ್ ನಲ್ಲಿ 75ಕ್ಕೂ ಹೆಚ್ಚು ಶಾಲೆಗಳು ಪೆಂಡಿಂಗ್ ನಲ್ಲಿ ಇವೆ. ದಯವಿಟ್ಟು ನಿಮ್ಮ ಊರಿನ ಸಮಸ್ಯೆಗಳಿಗೆ ಕೆಲಸಗಳಿಗೆ ನಾವೇ ಬಂದು ಕೆಲಸ ಮಾಡಬೇಕು ಅಂತ ಏನಿಲ್ಲ. ನಿಮ್ಮ ಊರಿನ ಶಾಲೆಗಳ ಕೆಲ್ಸಗಳನ್ನ ನೀವೇ ಮುಗಿಸಿಕೊಂಡ್ರೆ ತುಂಬಾನೇ ಒಳ್ಳೇದು.ಯಾಕೆಂದ್ರೆ ಸುಮಾರು ಜನ ನಾವು ಇಂದಲ್ಲ ನಾಳೆ ಬರ್ತಿವಿ ನಿಮ್ಮ ಊರಿಗೆ ಅಂತ ದಿನಗಳನ್ನ ಮುಂದೂಡುತ್ತಲೇ ಇದ್ದೀರಿ. ಆದ್ರೆ ನಮ್ಮ ಸಮಸ್ಯೆಗಳಿಂದ ನಾವು ಯಾರಿಗೂ ಸ್ಪಂದಿಸಲು ಆಗುತ್ತಿಲ್ಲ.

ಕ್ಷಮಿಸಬೇಕು ನೀವೆಲ್ಲಾ. ತೊಂದರೆ ಆದ್ರೆ ಈ ನಂಬರ್ ಆಫ್ ಮಾಡಿ ಅಂತ ಕೆಲವರು ಹೇಳ್ತ ಇದಿರಿ. ಕೆಲವು ದಾಖಲಾತಿಗಳಿಗೆ ಇದೇ ನಂಬರ್ ಇರುವುದರಿಂದ ನಂಬರ್ ಚೇಂಜ್ ಮಾಡಲು ಆಗುತ್ತಿಲ್ಲ. ಕೆಲವು ಕಮಿಟ್ಮೆಂಟ್ ಹಾಗೂ ಮುಖ್ಯವಾದ ಆತ್ಮೀಯರ ಸಲುವಾಗಿ ಮೊಬೈಲ್ ನಂಬರ್ ನ ಚಾಲ್ತಿಯಲ್ಲಿ ಇಡಬೇಕಾಯಿತು. ನಿಮ್ಮಿಂದ ನಂಗೆ ಸಹಾಯವೇನೆಂದರೆ ನಿಮ್ಮ ಊರಿನ ಸಮಸ್ಯೆಗಳನ್ನ ನೀವೇ ಬಗೆಹರಿಸಿಕೊಂಡರೆ ತುಂಬಾ ಒಳ್ಳೇದು. ಯಾಕೆಂದ್ರೆ ನಾನು ಈ ಕಾರ್ಯವನ್ನ ಏನೋ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿ, ಹೆಸರು ಮಾಡಬೇಕು ಅನ್ನೋ ಉದ್ದೇಶವಿಲ್ಲ.

ನನ್ನ ಜೀವನದಲ್ಲಿ ನಡೆದ ಒಂದಿಷ್ಟು ಘಟನೆಗಳಿಂದ ಪ್ರೇರಿತಳಾಗಿ ಒಂದು ಚಿಕ್ಕ ಬದಲಾವಣೆ ತರ್ಬೇಕು ಅಂದ್ರೆ ಶಿಕ್ಷಣ ಮುಖ್ಯ. ಅದೇ ರೀತಿ ಆರೋಗ್ಯವಾಗಿ ಜನಗಳು ಬದುಕೋಕೆ ವೈಯಕ್ತಿಕ ಸ್ವಚ್ಛತೆಯಿಂದ ಹಾಗೂ ಪರಿಸರ ಸ್ವಚ್ಛತೆಯ ಅವಶ್ಯಕತೆ ನನ್ನ ಭಾರತದಲ್ಲಿ ಬಹಳ ಅವಶ್ಯಕ ಇದೆ. ಒಂದೆರಡು ಜನಗಳಿಗೆ ಆದ್ರೂ ನಮ್ಮ ಕಾರ್ಯಗಳು ತಿಳಿಲಿ ಅಂತ ಒಂದಿಷ್ಟು ಅಭಿಯಾನಗಳನ್ನು ಕೈಗೊಂಡೆ ಅಷ್ಟೇ” ಎಂದಿದ್ದಾರೆ.

Leave a Reply

Your email address will not be published. Required fields are marked *