ಸಮಾಜದಲ್ಲಿನ ಜನರ ಮನಸ್ಥಿತಿಯೂ ಬದಲಾಗಿದೆ. ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಬೇರೆಯವರ ಜೀವ ಹಾಗೂ ಜೀವನದ ಜೊತೆಗೆ ಆಟ ಆಡಲು ಸಿದ್ಧವಿರುತ್ತಾನೆ. ಸ್ವಾರ್ಥಕ್ಕಾಗಿ ಇನ್ನೊಬ್ಬರ ಜೀವದ ಜೊತೆಗೆ ಆಟ ಆಡಿ, ಕೊನೆಗೆ ಇನ್ಯಾವುದೋ ಅನಾ-ಹುತಕ್ಕೆ ದಾರಿ ಮಾಡಿಕೊಡುವ ಪ್ರಕರಣಗಳು ನಡೆಯುತ್ತದೆ. ಅಂದಹಾಗೆ ಪೆರುಮಾಳ್ ಅವರು ಸೇಲಂನ ದಡಕಪಟ್ಟಿ ಗೇಟ್ ಬಳಿಯ ಮೂನಂಗರಾಡ್‌ನ ಕೊಥಡಿಮಾಯಿ ಕಾಲೋನಿಯವರು.
ಇಬ್ಬರೂ ಮಕ್ಕಳಿದ್ದು ಮಗ ಜೀವ ಹಾಗೂ ಬಡಗಿ. ಜೀವಾನ ಹೆಂಡತಿ ಹೆಸರು ಕವಿತಾ, ಜೀವಾಗೆ ಕುಡಿಯುವ ಅಭ್ಯಾಸವಿತ್ತು. ಅಂದು ಆ.16ರಂದು ಅತಿಯಾಗಿ ಕುಡಿದಿದ್ದನು. ಆದರೆ ಆ ದಿನ ರಾತ್ರಿ ಮನೆಯಲ್ಲಿ ನಿಗೂಢವಾಗಿ ಜೀವಾ ಕೊನೆ ಉಸಿರೆಳೆದಿದ್ದನು. ಕವಿತಾ ನೀಡಿದ ಮಾಹಿತಿ ಮೇರೆಗೆ ಅನ್ನದಾನಪಟ್ಟಿ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದರು. ಕುಡಿದ ಅಮಲಿನಲ್ಲಿದ್ದ ಜೀವಾ ಕೆಳಗೆ ಬಿದ್ದು ಸಾ-ವನ್ನಪ್ಪಿದ್ದಾನೆ ಎಂದು ಕವಿತಾ ಪೊಲೀಸರಿಗೆ ತಿಳಿಸಿದ್ದರು.
ತದನಂತರ ಪೊಲೀಸರು ಜೀವಾ ಮೃ-ತದೇಹವನ್ನು ವಶಪಡಿಸಿಕೊಂಡು ಮ-ರಣೋತ್ತರ ಪರೀಕ್ಷೆಗಾಗಿ ಸೇಲಂ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದರು. ಅಲ್ಲದೆ, ಕುಡಿದ ಅ-ಮಲಿನಲ್ಲಿ ಬಿದ್ದು ಸಾ-ವನ್ನಪ್ಪಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದರು. ಆದರೆ ಜೀವಾ ಮ-ರಣೋತ್ತರ ಪರೀಕ್ಷೆಯ ವರದಿಯನ್ನು ಅನ್ನದಾನಪಟ್ಟಿ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು.
ಆದರೆ ಮ-ರಣೋತ್ತರ ಜೀವಾ ಅವರ ಮುಖ, ಬಾಯಿ, ಕತ್ತಿನ ಮೇಲೆ ಗಾಯಗಳಾಗಿವೆ ಎಂಬ ಆ-ಘಾತಕಾರಿ ಮಾಹಿತಿ ನೀಡಲಾಗಿತ್ತು. ಆ ಬಳಿಕ ಅನ್ನದಾನಪಟ್ಟಿ ಪೊಲೀಸ್ ನಿರೀಕ್ಷಕಿ ಚಂದ್ರಕಲಾ ಸಾ-ವಿನ ಪ್ರಕರಣವನ್ನಾಗಿ ಪರಿವರ್ತಿಸಿ ತನಿಖೆ ನಡೆಸಿದ್ದರು. ಆಗ ಕವಿತಾ ಹಾಗೂ ಜೀವಾ ಸ್ನೇಹಿತ ರಾಜಾ(39) ಮೇಲೆ ಪೊಲೀಸರಿಗೆ ಅನುಮಾನ ಬಂದಿತ್ತು. ಹೀಗಿರುವಾಗ ಪೊಲೀಸರು ಕವಿತಾ ಮತ್ತು ರಾಜಾ ಎಂಬ 2 ಮಂದಿಯನ್ನು ಹಿಡಿದು ವಿಚಾರಣೆ ನಡೆಸಿದ್ದರು.
ಆದರೆ ಈ ವೇಳೆಯಲ್ಲಿ ಏನೇನೋ ಉತ್ತರ ನೀಡಿ ಪೊಲೀಸರ ಹಾದಿ ತಪ್ಪಿಸುವ ಪ್ರಯತ್ನ ಮಾಡಿದ್ದರು. ಕೊನೆಗೆ ಹೆಚ್ಚಿನ ತನಿಖೆ ನಡೆಸಿದಾಗ, ನಕಲಿ ದಾಖಲೆಗೆ ಅಡ್ಡಿಪಡಿಸಿದ ಕಾರಣಕ್ಕಾಗಿ ಜೀವಾನ ಕಥೆ ಮುಗಿಸಿರುವುದಾಗಿ ಒಪ್ಪಿಕೊಂಡರು ಅದರಲ್ಲಿ ರಾಜಾನು ಕೊಂಡಲಂಪಟ್ಟಿ ಮುಂದಿನ ಫುಲಾವರಿಯವನು. ಆಟೋ ಚಾಲಕನಾಗಿದ್ದು, ಪತ್ನಿ ಹಾಗೂ 3 ಮಕ್ಕಳಿದ್ದರು. ರಾಜಾ ತನ್ನ ಹೆಂಡತಿಯನ್ನು ಕಳೆದುಕೊಂಡು ದುಃಖದಲ್ಲಿದ್ದಾಗ ಜೀವಾನ ಸ್ನೇಹ ಬೆಳೆಯಿತು.
ತದನಂತರದಲ್ಲಿ ರಾಜಾ ಆಗಾಗ ಜೀವಾಳ ಮನೆಗೆ ಹೋಗುತ್ತಿದ್ದ. ಆ ವೇಳೆಯಲ್ಲಿ ರಾಜಾ ಕವಿತಾಳ ಪರಿಚಯವಾಯಿತು. ಮೊಬೈಲ್ ಸಂಖ್ಯೆಯನ್ನು ವಿನಿಮಯ ಮಾಡಿಕೊಂಡ ಇವರಿಬ್ಬರೂ ಆಗಾಗ ಮಾತನಾಡುತ್ತಿದ್ದರು. ಕೊನೆಗೆ ಇವರಿಬ್ಬರ ನಡುವೆ ಗಾಢವಾದ ಸಂಬಂಧವೊಂದು ಬೆಸೆಯಿತು. ಜೀವಾ ಮನೆಯಲ್ಲಿ ಇಲ್ಲದ ವೇಳೆ ಕವಿತಾ ಮತ್ತು ರಾಜಾ ಸರಸ ಸಲ್ಲಾಪ ನಡೆಯುತ್ತಿತ್ತು.
ಕವಿತಾಳಿಗಾಗಿ ಸೇಲಂ ದಡಗಪಟ್ಟಿ ಷಣ್ಮುಖ ನಗರದಲ್ಲಿ ಬಾಡಿಗೆಗೆ ಮನೆಯನ್ನು ತೆಗೆದುಕೊಂಡು ಅಲ್ಲಿ ಒಬ್ಬನೇ ವಾಸಿಸುತ್ತಿದ್ದನು. ಆ ಬಾಡಿಗೆ ಮನೆಯಲ್ಲಿ ಆಗಾಗ ಭೇಟಿಯಾಗಿ ಮೋಜು ಮಸ್ತಿ ಮಾಡುತ್ತಿದ್ದರು. ಯಾವುದೇ ಅ-ನುಮಾನ ಬಾರದಂತೆ ರಾಜಾ ತನ್ನ ಕವಿತಾ ಹಾಗೂ ಆಕೆಯ ಮಕ್ಕಳ ಫೋಟೋ ತೆಗೆದು ಬಾಡಿಗೆ ಮನೆಯಲ್ಲಿ ನೇತು ಹಾಕಿದ್ದನು.
ಅಷ್ಟರಲ್ಲಿ ಜೀವಾನಿಗೆ ಪತ್ನಿಯು ಸ್ನೇಹಿತನ ಜೊತೆಗೆ ಸಂಬಂಧ ಬೆಳೆಸಿರುವುದು ತಿಳಿದಿದೆ. ರಾಜಾ ಇವರಿಬ್ಬರಿಗೆ ಬಾಯಿಗೆ ಬಂದಂತೆ ಬೈದಿದ್ದನು. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ಜೀವಾನ ಕಥೆ ಮುಗಿಸಲು ಪ್ಲಾನ್ ಮಾಡಿದ್ದರು. ಆ ದಿನ ರಾತ್ರಿ ಜೀವಾ ವಿಪರೀತ ನ- ಶೆಯಲ್ಲಿ ಮನೆಗೆ ಬಂದಿದ್ದ. ಆ ವೇಳೆಯಲ್ಲಿ ಕವಿತಾಳ ಜೊತೆಗೆ ರಾಜಾನು ಇದ್ದ, ಇದನ್ನು ನೋಡಿದ ಜೀವಾ ಬಾಯಿಗೆ ಬಂದಂತೆ ಬೈಯಲು ಶುರು ಮಾಡಿದ್ದನು.
ಮತ್ತು ರಾಜ ಅಲ್ಲಿ ಮೋಜು ಮಾಡುತ್ತಿದ್ದರು. ಇದನ್ನು ನೋಡಿದ ಜೀವ ಇಬ್ಬರನ್ನೂ ಬೈಯಲು ಶುರುಮಾಡಿದ್ದನು. ಇದರಿಂದ ಕೋಪಗೊಂಡ ಇವರಿಬ್ಬರು ಜೀವಾಳ ಬಾಯಿ ಮತ್ತು ಮೂ’ಗಿಗೆ ಬಟ್ಟೆಯಿಂದ ಮು’ಚ್ಚಿದ್ದರು. ಆ ಬಟ್ಟೆಯಿಂದ ಜೀವಾನ ಗಂಟಲು ಬಿ-ಗಿದು ಉ-ಸಿರುಗಟ್ಟಿಸಿದ್ದರು. ಕೊನೆಗೆ ಅಕ್ಕಪಕ್ಕದವರಿಗೆ ಅನುಮಾನ ಬರದಂತೆ ಕೆಳಗೆ ಬಿದ್ದು ಸಾ-ವನ್ನಪ್ಪಿದ್ದ ಎಂದು ಸಂಬಂಧಿಕರಿಗೆ ತಿಳಿಸಿದ್ದರು. ಆದರೆ ಕೊನೆಗೆ ಅಸಲಿ ವಿಚಾರ ಹೊರಬಿದ್ದಿದ್ದು ಪೊಲೀಸರು ಕವಿತಾ ಮತ್ತು ರಾಜನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.