ತುಂಬಾ ದಿನಗಳ ನಂತರ ಗಂಡನ ಜೋತೆ ಮುದ್ದಾಗಿ ಕಂಗೊಳಿಸಿದ ಬೆಡಗಿ ಕವಿತಾ ಗೌಡ, ಚಿನ್ನು ಅಲಿಯಾಸ್ ಕವಿತಾ ಫೋಟೋ ಇಲ್ಲಿವೆ ನೋಡಿ!!! 

ಬಣ್ಣದ ಲೋಕ ಎಲ್ಲರನ್ನು ಬಹುಬೇಗನೆ ಸೆಳೆದು ಬಿಡುತ್ತದೆ. ಹೀಗಾಗಿ ಈ ಲೋಕಕ್ಕೆ ಎಂಟ್ರಿ ಕೊಟ್ಟು ಮನಸ್ಸಿನಿಂದ ತೆರೆ ಮೇಲೆ ನಟಿಸುವ ಕಲಾವಿದರು ಇದ್ದಾರೆ. ಅಂತಹವರ ಸಾಲಿಗೆ ಲಕ್ಷ್ಮಿ ಬಾರಮ್ಮ (Lakshmi Baramma) ಖ್ಯಾತಿಯ ಕವಿತಾ ಗೌಡ (Kavitha Gowda) ಕೂಡ ಸೇರಿಕೊಳ್ಳುತ್ತಾರೆ. ಕಿರುತೆರೆಯ ನಟಿ ಕವಿತಾ ಗೌಡ ವೃತ್ತಿ ಜೀವನ ಹಾಗೂ ವೈಯುಕ್ತಿಕ ಜೀವನವನ್ನು ಬ್ಯಾಲೆನ್ಸ್ ಮಾಡಿಕೊಂಡು ಸಾಗುವುದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿಯೂ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ.. 

ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಚಿನ್ನು ಅಲಿಯಾಸ್ ಕವಿತಾ ಗೌಡರ ಅಭಿಮಾನಿ ಬಳಗವು ಬಲು ದೊಡ್ಡದಿದೆ. ಇದೀಗ ತಮ್ಮ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಸೀರೆಯುಟ್ಟು ಮುದ್ದಾಗಿ ಕಾಣಿಸಿಕೊಂಡಿರುವ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ನಟಿ ಕವಿತಾ ಗೌಡ ಪಿಂಕ್ ಬಣ್ಣದ ಸೀರೆಯುಟ್ಟು ಅದಕ್ಕೆ ಹೊಂದುವಂತಹ ಜ್ಯುವೆಲ್ಲರಿ, ಮೇಕ್ ಅಪ್ ಹಾಗೂ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ. ಈ ವಿಡಿಯೋದ ಬ್ಯಾಕ್ ಗ್ರೌಂಡ್ ಗೆ ನಿಂಬಿಯ ಬನದ ಮ್ಯಾಲ ಹಾಡನ್ನು ಹಾಕಲಾಗಿದೆ. ಚೆಂದುಳ್ಳಿ ಚೆಲುವೆಯೂ ಶೇರ್ ಮಾಡಿಕೊಂಡ ಈ ವಿಡಿಯೋಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

 

ಈ ಹಿಂದೆ ಕಿರುತೆರೆಯ ನಟ ಚಂದನ್ ಗೌಡ (Chandan Gowda) ರವರನ್ನು ನಟಿ ಕವಿತಾ ಗೌಡ ಪ್ರೀತಿಸಿ ಮದುವೆಯಾದರು. ವೈವಾಹಿಕ ಜೀವನಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಕುಕ್ ವಿಥ್ ಕಿರಿಕ್ಕು ಶೋ (Cook With Kirikku Show) ನಲ್ಲಿ ಇಬ್ಬರೂ ಕಾಣಿಸಿಕೊಂಡಿದ್ದರು. ಕೊನೆಗೆ ಈ ಶೋ ವಿನ್ನರ್ ಆಗಿ ಚಂದನ್ ಅವರು ಹೊರ ಹೊಮ್ಮಿದ್ದರು. ಅದಲ್ಲದೇ ಕವಿತಾ ಗೌಡ ದಂಪತಿಗಳು ನಟನೆಯ ಜೊತೆಗೆ ಉದ್ಯಮವನ್ನು ನಡೆಸುತ್ತಿದ್ದಾರೆ.

ಈ ಹಿಂದೆಯಷ್ಟೇ ಮೈಸೂರು ಮಂಡಿಪೇಟೆ ಹೋಟೆಲ್ (Mysore Mandipete Hotel) ಉದ್ಘಾಟನೆ ಕಾರ್ಯಕ್ರಮಕ್ಕೆ ಆಪ್ತರು ಭಾಗಿಯಾಗಿದ್ದರು. ಇಬ್ಬರ ಉದ್ಯಮಕ್ಕೆ ಒಳ್ಳೆಯದಾಗಲಿ ಎಂದು ಶುಭಾಶಯ ತಿಳಿಸಿದ್ದರು. ಆದಾದ ಬಳಿಕ ʻಮೈಸೂರು ರೋಡ್ ಮಂಡಿಪೇಟೆ ಪಲಾವ್ʼ (Mysore Road Mandipete Palav) ಈ ಹೋಟೆಲ್‌ ಫೋಟೊವನ್ನು ಇನ್‌ಸ್ಟಾದಲ್ಲಿ ಶೇರ್‌ ಮಾಡಿಕೊಂಡಿದ್ದರು. ಕವಿತಾ ಗೌಡರವರು ಚಂದನ್‌ ಗೌಡರವರಿಗೆ ಉದ್ಯಮ ಹಾಗೂ ವೃತ್ತಿ ಜೀವನ ಎರಡರಲ್ಲಿಯೂ ಸಾಥ್ ನೀಡುತ್ತಾ ಸಾಗುತ್ತಿದ್ದಾರೆ. ಅದಲ್ಲದೇ ಕಿರುತೆರೆಯ ಮುದ್ದಾದ ಈ ಜೋಡಿ ಮನೆಯ ಗೃಹ ಪ್ರವೇಶದ ಮಾಡಿತ್ತು. ಅದರ ಫೋಟೊಗಳನ್ನು ಸೋಷಿಯಲ್‌ ಮೀಡಿಯಾ ಮೂಲಕ ಹಂಚಿಕೊಂಡಿತ್ತು.

ಅಂದಹಾಗೆ, ನಟಿ ಕವಿತಾ ಗೌಡರವರು ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ನಟಿಸಿ, ನಂತರ ‘ವಿದ್ಯಾ ವಿನಾಯಕ’ (Vidhya Vinayaka) ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರು. ಆದಾದ ಬಳಿಕ ನಟಿ ಕವಿತಾ ಗೌಡ ಅವರು ಕೂಡ ತಮಿಳಿನ ‘ಅನ್ಬೇ ಶಿವಂ’ (Anbe shivam) ಧಾರಾವಾಹಿಯಲ್ಲಿ ಮಾತ್ರವಲ್ಲದೆ ಬೆಳ್ಳಿತೆರೆ ಯಲ್ಲಿ ನಟಿಸಿದ್ದಾರೆ. ಬೆಳ್ಳಿತೆರೆಯಲ್ಲಿ ಶ್ರೀನಿವಾಸ ಕಲ್ಯಾಣ (Shreenivasa Kalyana), ಫಸ್ಟ್ ಲವ್ (First Love), ಗುಬ್ಬಿ ಮೇಲೆ ಬ್ರಹ್ಮಾಸ್ತ್ರ (Gubbi Mele Brahmaastra) ,..

ಗೋವಿಂದಾ ಗೋವಿಂದ (Govindaa Govinda) , ಹುಟ್ಟುಹಬ್ಬದ ಶುಭಾಶಯಗಳು (Huttuhabbada Shubhashayagalu) ಸೇರಿದಂತೆ ಚಿತ್ರಗಳಲ್ಲಿ ನಟಿಸಿದ್ದಾರೆ. ಹೀಗೆ ವೃತ್ತಿ ಜೀವನ ಹಾಗೂ ವೈಯುಕ್ತಿಕ ಜೀವನ ಹಾಗೂ ಉದ್ಯಮವನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುತ್ತಿರುವ ನಟಿಗೆ ಇನ್ನಷ್ಟು ಅವಕಾಶಗಳು ತೆರೆದುಕೊಳ್ಳಲಿದೆ ಎನ್ನುವುದೆ ಆಶಯ.

Leave a Reply

Your email address will not be published. Required fields are marked *