ಇಂದಿನ ಯುವಕರ ಮನಸ್ಥಿತಿಗಳು ಎಷ್ಟು ಬದಲಾಗುತ್ತಿದೆ ಎನ್ನುವುದಕ್ಕೆ ಸುತ್ತಮುತ್ತಲಿನಲ್ಲಿ ನಡೆಯುವ ಘಟನೆಗಳೇ ಸಾಕ್ಷಿ. ತಮ್ಮ ಸ್ವಾ-ರ್ಥಕ್ಕಾಗಿ ಇನ್ನೊಬ್ಬರ ಜೀವದ ಜೊತೆಗೆ ಆಟ ಆಡುವ ಮಟ್ಟಕ್ಕೆ ಬಂದು ತಲುಪಿದ್ದಾರೆ. ಇದೀಗ ತಾನು ಡಾನ್ ಆಗಬೇಕು ಎನ್ನುವ ಆಸೆಗೆ ಬಾಲಕನ ಕಥೆ ಮುಗಿಸಿರುವ ಘಟನೆಯು ಕೋಲಾರ (Kolar) ದ ಪೇಟೆಚಾಮನಹಳ್ಳಿ ಬಡಾವಣೆ (Petechamanahalli layout) ಯಲ್ಲಿ ನಡೆದಿದೆ.
ಮೃ-ತಪಟ್ಟಿರುವ ಬಾಲಕನಿಗೆ ಹದಿನೇಳು ವರ್ಷ ವಯಸ್ಸಾಗಿದ್ದು, ಕಾರ್ತಿಕ್ ಸಿಂಗ್ (Karthik Singh) ಎನ್ನಲಾಗಿದೆ. ಈತನು ಅರುಣ್ ಸಿಂಗ್ (Arun singh) ಮತ್ತು ಸುಶೀಲಾ (Susheela) ದಂಪತಿಗಳ ಮುದ್ದಿನ ಮಗ. ಈತನ ಕಥೆ ಮುಗಿಸಿರುವ ಆ-ರೋಪಿಗಳೆಲ್ಲಾ ಅಪ್ರಾಪ್ತರಾಗಿದ್ದು, ಐವರು ಈ ಹ-ತ್ಯೆಯಲ್ಲಿ ಪಾಲ್ಗೊಂಡಿದ್ದಾರೆ. ಅದಲ್ಲದೇ ಈ ಹ-ತ್ಯೆಯ ಪ್ರಮುಖ ಆರೋಪಿಯ ತಂದೆ ಕಾನ್ಸ್ ಟೇಬಲ್ ಮತ್ತು ತಾಯಿ ಶಿಕ್ಷಕಿಯಾಗಿದ್ದಾರೆ ಎನ್ನಲಾಗಿದೆ.
ಈ ಹ-ತ್ಯೆ ಮಾಡಿರುವ ಬಾಲಕನಿಗೆ ಡಾನ್ ಆಗುವ ಕನಸಿತ್ತು. ಈ ಘಟನೆಗೂ ಮೊದಲೇ ಈತನು ಈಗಾಗಲೇ ಸಾಕಷ್ಟು ಅ-ಪರಾಧಗಳನ್ನು ಮಾಡಿದ್ದನು ಎನ್ನಲಾಗಿದೆ. ಕಾರ್ತಿಕ್ ಪ್ರಥಮ ಪಿಯುಸಿ ಓದುತ್ತಿದ್ದ ಹುಡುಗ. ಆದರೆ ಈ ಐವರು ಆರೋಪಿಗಳು ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಪೇಟೆಚಾಮನಹಳ್ಳಿಯ ಬಾಪೂಜಿ ಶಾಲೆ (Bapuji School) ಆವರಣದಲ್ಲಿ ಹ-ತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಘಟನೆಯ ಬಳಿಕ ಈ ಐವರು ಆ-ರೋಪಿಗಳು ಪರಾರಿಯಾಗಿದ್ದಾರೆ. ಹಳೆಯ ದ್ವೇ-ಷವನ್ನು ಹೊಂದಿದ್ದ ಅಪ್ರಾಪ್ತ ಬಾಲಕ ಶೈನ್ (Shine) ಮತ್ತು ಸ್ನೇಹಿತರು ಸೇರಿಕೊಂಡು ಕಾರ್ತಿಕ್ ಸಿಂಗ್ನನ್ನು ಹುಟ್ಟು ಹಬ್ಬ ಆಚರಣೆ ಮಾಡಬೇಕು ಎಂದು ಹೇಳಿದ್ದಾರೆ. ಹೀಗಾಗಿ ತಾವಿದ್ದ ಸರ್ಕಾರಿ ಶಾಲೆ ಆವರಣಕ್ಕೆ ರಾತ್ರಿ 7 ಗಂಟೆ ಸುಮಾರಿಗೆ ಕರೆಸಿಕೊಂಡಿದ್ದು ಈ ಕೃ-ತ್ಯ ಮಾಡಿದ್ದಾರೆ.
ಕಾರ್ತಿಕ್ ಶಾಲೆಯ ಆವರಣಕ್ಕೆ ಬಂದಿದ್ದು, ಶೈನ್ ಹಾಗೂ ಸ್ನೇಹಿತರು ರಾತ್ರಿ 7-30 ಕ್ಕೆ ಹ-ಲ್ಲೆ ನಡೆಸಿ ಕಥೆ ಮುಗಿಸಿದ್ದಾರೆ. ಆದರೆ ಕಥೆ ಮುಗಿಸುವ ಮುನ್ನ ಬಾಲಕನಿಗೆ ಹಿಂ-ಸೆ ನೀಡಿದ್ದು, ಬಟ್ಟೆ ಬಿ-ಚ್ಚಿಸಿ ಮೈ ಕೈಗೆ ಗಾ-ಜು, ಚಾ-ಕು, ಬ್ಲೇ-ಡ್‌ನಿಂದ ಕು-ಯ್ದಿದ್ದಾರೆ. ಈ ವೇಳೆಯಲ್ಲಿ ಬಾಲಕನಿಗೆ ಚಿ-ತ್ರಹಿಂಸೆ ನೀಡುವುದನ್ನು ವಿಡಿಯೋ ಕೂಡ ಮಾಡಿದ್ದು, ಈ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
ಹೆತ್ತ ಮಗನನ್ನು ಕಳೆದುಕೊಂಡಿರುವ ಕಾರ್ತಿಕ್ ತಾಯಿ ಸುಶೀಲಾ (Susheela) ರವರು, ನನ್ನ ಪುತ್ರ ಶುಕ್ರವಾರ ಹೊಟ್ಟೆ ನೋವು ಎಂದು ಕಾಲೇಜಿಗೆ ಹೋಗಿರಲಿಲ್ಲ. ಮಧ್ಯಾಹ್ನದವರೆಗೆ ಮನೆಯಲ್ಲೇ ಮಲಗಿಕೊಂಡಿದ್ದ. ಸಂಜೆ ಎಲ್ಲೋ ಹೋಗಿದ್ದ. ಕರೆ ಮಾಡಿದಾಗ ಫೋನ್ ಸ್ವಿಚ್ಡ್ ಆಫ್ ಆಗಿತ್ತು. ಆತನ ಕೊ-ಲೆಯಾಗಿರುವ ಬಗ್ಗೆ ರಾತ್ರಿ 8.30ರ ಸುಮಾರಿಗೆ ಸಂಬಂಧಿಯೊಬ್ಬರು ಹೇಳಿದರು. ಪುತ್ರನ ಜೊತೆ ಇರುತ್ತಿದ್ದ ವ್ಯಕ್ತಿಯೇ ಕೊ-ಲೆ ಮಾಡಿರುವ ಶಂ-ಕೆ ಇದ್ದು, ಆತನಿಗೆ ಶಿ-ಕ್ಷೆ ಕೊಡಿ’ ಎಂದಿದ್ದಾರೆ. ಸದ್ಯಕ್ಕೆ ಆರೋಪಿಗಳ ಪ-ತ್ತೆಗೆ ಮೂರು ತನಿಖಾ ತಂಡಗಳನ್ನು ರಚನೆ ಮಾಡಲಾಗಿದ್ದು, ಅ-ನುಮಾನವಿರುವವರನ್ನು ವ-ಶಕ್ಕೆ ಪಡೆದುಕೊಂಡು ವಿಚಾರಣೆಯಲ್ಲಿ ಪೊಲೀಸರು ತೊಡಗಿದ್ದಾರೆ.