ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಅವರಿಗೆ ಸಿಕ್ಕಿದ್ದು ಎಷ್ಟು ಗೊತ್ತಾ? 50 ಲಕ್ಷ ಅಲ್ವೇ ಅಲ್ಲ.

ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈ ಬಾರಿಯ ಬಿಗ್ ಬಾಸ್ ಅನ್ನು ಕಾರ್ತಿಕ್ ಮಹೇಶ್ ರವರು ಅದ್ದೂರಿಯಾಗಿ ಗೆದ್ದು ಮಿಂಚುತ್ತಿದ್ದಾರೆ. ಈ ಬಾರಿಯ ಬಿಗ್ ಬಾಸ್ ಪ್ರಾರಂಭ ಆದ ಸಂದರ್ಭದಲ್ಲಿ ಕಾರ್ತಿಕ್ ಮಹೇಶ್ ಅವರು ಈ ಬಾರಿಯ ಬಿಗ್ ಬಾಸ್ ಅನ್ನು ಗೆಲ್ಲಲಿದ್ದಾರೆ ಎನ್ನುವುದಾಗಿ ಯಾರು ಕೂಡ ಊಹೆ ಕೂಡ ಮಾಡಿರಲಿಲ್ಲ.

ಈ ಬಾರಿಯ ಬಿಗ್ ಬಾಸ್ ನಲ್ಲಿ ಮೊದಲನೇ ಸ್ಥಾನದಲ್ಲಿ ಕಾರ್ತಿಕ್ ಮಹೇಶ್ ಕಾಣಿಸಿಕೊಂಡರೆ 2ನೇ ಸ್ಥಾನದಲ್ಲಿ ಡ್ರೋನ್ ಪ್ರತಾಪ್ ರವರು ಕಾಣಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ ಏನೆಂದರೆ ಬಿಗ್ ಬಾಸ್ ಅನ್ನು ಗೆದ್ದಿರುವಂತಹ ಕಾರ್ತಿಕ್ ಮಹೇಶ್ ಅವರಿಗೆ 50 ಲಕ್ಷ ರೂಪಾಯಿಗಳ ನಗದು ಬಹುಮಾನ ಹಾಗೂ ಒಂದು ಬ್ರೆಜಾ ಕಾರು ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಕೂಡ ಸಿಕ್ಕಿದೆ ಎಂಬುದಾಗಿ.

ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಕಾರಿನ ವಿಚಾರಕ್ಕೆ ಬಂದರೆ ನಿಜ ಅವರಿಗೆ ಸಿಕ್ಕಿರುವುದು ಕರೆಕ್ಟಾಗಿ ಇದೆ. ಆದರೆ 50 ಲಕ್ಷ ರೂಪಾಯಿ ಹಣದಲ್ಲಿ ಸಂಪೂರ್ಣವಾಗಿ ಕಾರ್ತಿಕ್ ಮಹೇಶ್ ರವರಿಗೆ 50 ಲಕ್ಷ ರೂಪಾಯಿ ಹಣ ಸಿಕ್ಕಿಲ್ಲ ಅನ್ನೋದನ್ನ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾಗಿರುತ್ತದೆ. ಹೌದು 50 ಲಕ್ಷ ರೂಪಾಯಿ ಹಣದಲ್ಲಿ ಕಲರ್ಸ್ ಕನ್ನಡ ವಾಹಿನಿಯ ಸಂಪೂರ್ಣವಾಗಿ ಹಣವನ್ನು ಕಾರ್ತಿಕ್ ಮಹೇಶ್ ರವರಿಗೆ ನೀಡುವುದಿಲ್ಲ.

31.2% ಟಿಡಿಎಸ್ ಶುಲ್ಕವನ್ನು ಕಡಿತಗೊಳಿಸಿದ ನಂತರವಷ್ಟೇ ಆ 50 ಲಕ್ಷ ರೂಪಾಯಿ ಹಣದಲ್ಲಿ ಉಳಿದ ಹಣವನ್ನು ಅಂದರೆ ಸರಿ ಸುಮಾರು 30 ಲಕ್ಷ ರೂಪಾಯಿಗಳಷ್ಟು ಹಣವನ್ನು ನಗದು ಬಹುಮಾನದ ರೂಪದಲ್ಲಿ ಕಾರ್ತಿಕ್ ಮಹೇಶ್ ರವರಿಗೆ ನೀಡಲಾಗುತ್ತದೆ ಎಂಬುದನ್ನು ಈ ಸಮಯದಲ್ಲಿ ನಾವು ತಿಳಿದುಕೊಳ್ಳಬೇಕಾಗಿರುತ್ತದೆ.

Leave a Reply

Your email address will not be published. Required fields are marked *