ಚೀನಾವನ್ನು ಈ ರೀತಿಯಾಗಿ ಹೊಗಳಿದ ಡಾ. ಬ್ರೋ ಗೆ ದೇಶದ್ರೋ’ಹಿ ಎಂದು ಉಗಿದ ಜನರು…ನಿಜಕ್ಕೂ ಹೇಳಿದ್ದೇನು ನೋಡಿ!!

ಡಾಕ್ಟರ್ ಬ್ರೋ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ, ಪ್ರಸಿದ್ಧ ಕನ್ನಡ ಯೂಟ್ಯೂಬರ್ ಆಗಿರುವ ಡಾಕ್ಟರ್ ಬ್ರೋ ಅವರು ಹಲವು ದೇಶಗಳನ್ನು ಸುತ್ತುವುದರ ಮೂಲಕ ಯೂಟ್ಯೂಬ್ ನಲ್ಲಿ ನಂಬರ್ ವನ್ ಆಗಿರುವ ಇವರು ಇತ್ತೀಚಿಗಷ್ಟೇ ಚೀನಾ ದೇಶಕ್ಕೆ ಭೇಟಿ ನೀಡಿದ್ದರು. ಅಲ್ಲಿನ ವಿದ್ಯಾರ್ಥಿಗಳನ್ನು ಹೊಗಳುವುದರ ಮೂಲಕ ದೇಶದ್ರೋ-ಹಿ ಎಂಬ ಪಟ್ಟವನ್ನಗಿಟ್ಟಿಸಿಕೊಂಡಿದ್ದಾರೆ.

ಹೌದು ಇತ್ತೀಚಿಗಷ್ಟೇ, ಡಾಕ್ಟರ್ ಬ್ರೋ ಅವರು ಚೀನಾಗೆ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿನ ವಿದ್ಯಾರ್ಥಿಗಳಿಗೆ ಕಲಿಯುವಾಗಲೇ ಜೀವನದ ಕೌಶಲ್ಯಗಳನ್ನು ಹೇಳಿಕೊಡಲಾಗುತ್ತೆ ಆದರೆ ನಮ್ಮ ದೇಶದಲ್ಲಿ ಅಂದರೆ ಭಾರತ ದೇಶದಲ್ಲಿ ಜಾತಿ ಧರ್ಮದ ಬಗ್ಗೆ ಮಕ್ಕಳಲ್ಲಿ ಋಣಾತ್ಮಕತೆಯನ್ನ ಬಿತ್ತಲಾಗುತ್ತದೆ ಎಂದು ಡಾಕ್ಟರ್ ಬ್ರೋ ಅವರು ಹೇಳಿದ್ದರು. ಅಂದರೆ ಡಾ. ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್ ಅವರು ಹೇಳಿದ್ದಾರೆ.

ಅಭಿವೃದ್ಧಿಯಾಗುತ್ತಿರುವ ದೇಶಗಳಲ್ಲಿ ಮಕ್ಕಳಿಗೆ ಬೇರೆ ಬೇರೆ ರೀತಿಯ ಒಳ್ಳೆಯ ಸ್ಕಿಲ್ ಗಳನ್ನು ಹೇಳಿಕೊಡಲಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಮಾತ್ರ ಬೇಡದೆ ಇರುವ ಜಾತಿ ಧರ್ಮದ ಬಗ್ಗೆ ವಿಷ ಬೀಜವನ್ನು ಮಕ್ಕಳಲ್ಲಿ ತುಂಬುತ್ತಿದ್ದಾರೆ. ಇದು ದೇಶದ ಮುನ್ನಡೆಗೆ ಅಸಾಧ್ಯ. ಭಾರತ ದೇಶ ಇನ್ನೂ ಚೀನಾ ಲೆವೆಲ್ ಗೆ ತಲುಪಬೇಕು ಅಂತಂದ್ರೆ ಇನ್ನು ಹಲವಾರು ವರ್ಷಗಳು ಬೇಕು. ಅದಾಗಲೇ ಚೀನಾ ಮತ್ತು ಮುಂದುವರೆದಿರುತ್ತದೆ ಎಂದು ಹೀಗೆ ಮಾತನಾಡುತ್ತಾ ಹೇಳಿದ್ದರು.

ಇದು ನಮ್ಮ ದೇಶದ ಜನರಿಗೆ ಸ್ವಲ್ಪ ನೋವುಂಟು ಮಾಡಿದ್ದು, ಭಾರತೀಯನಾಗಿ ಬೇರೆ ದೇಶಕ್ಕೆ ಹೋಗಿ ನಮ್ಮ ದೇಶವನ್ನು ಹಳಿಯುವ ಕೆಲಸವನ್ನು ಮಾಡಿದ್ದಾರೆ ನಮ್ಮ ದೇಶದ ಬಗ್ಗೆ ಭಕ್ತಿ ಇಲ್ಲವಾದ್ದರಿಂದ ಇವರು ಬೇರೆ ದೇಶವನ್ನ ಹೊಗಳಿದ್ದಾರೆ ಎಂದು ಜನಗಳು ಗಗನ್ ಶ್ರೀನಿವಾಸ್ ಅವರ ಬಗ್ಗೆ ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

ಮತ್ತು ನಮ್ಮ ದೇಶದಲ್ಲಿ ಹುಟ್ಟಿದ ಮಕ್ಕಳಿಗೆ ಕೆಲವೊಂದು ಬೇಡದ ಮೌಡ್ಯಗಳನ್ನ ತುಂಬಿರುತ್ತಾರೆ ಸರಿ ತಪ್ಪುಗಳ ಬಗ್ಗೆ ಅವರಿಗೆ ಅರಿವು ಮೂಡಿಸುವುದಿಲ್ಲ. ಇನ್ನು ನಮ್ಮ ದೇಶದ ರಾಜಕಾರಣವನ್ನು ತೆಗೆದುಕೊಂಡರೆ ಬರಿ ಕುರ್ಚಿಗಾಗಿ ಕಿತ್ತಾಡುತ್ತಾರೆ ಬರಿ ಭ್ರ-ಷ್ಟರಾಗಿದ್ದಾರೆ ಇದರಿಂದ ನಮ್ಮ ದೇಶ ಮುಂದು ಬರಬೇಕು, ಚೀನಾದ ಸ್ಥಿತಿಗೆ ಬರಬೇಕು ಅಂದರೆ ಇನ್ನೂ ಹಲವಾರು ವರ್ಷಗಳು ಬೇಕು ಎಂದು ಗಗನವರು ಹೇಳಿದ್ದಾರೆ. ಅವರ ಈ ಮಾತಿನಿಂದ ಜನಗಳು ಇವರನ್ನು ದೂಷಣೆ ಮಾಡೋದಕ್ಕೆ ಶುರು ಮಾಡಿದ್ದಾರೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಶೇರ್ ಮಾಡಿ.

Leave a Reply

Your email address will not be published. Required fields are marked *