ಕಾಂತಾರ ಚಿತ್ರ ಬ್ಲಾಕ್ ಬಾಸ್ಟರ್ ಆದ ಬೆನ್ನಲ್ಲೇ ರಿಷಬ್ ಶೆಟ್ಟಿ, ಸಪ್ತಮಿ ಗೌಡ ಮತ್ತು ಕಿಶೋರ್ ಕುಮಾರ್ ಗೆ ಸಿಕ್ಕ ಸಂಭಾವನೆ ಎಷ್ಟು? ಇಲ್ಲಿದೆ ನೋಡಿ!!!

Kantara actors remuneration :ಕಾಂತಾರದ ಅಬ್ಬರ ತೆರೆ ಮೇಲೆ ಎಷ್ಟರ ಮಟ್ಟಿಗೆ ಇತ್ತು ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಹೊಂಬಾಳೆ ಸಂಸ್ಥೆ ನಿರ್ಮಾಣದ `ಕಾಂತಾರಾ’ ಚಿತ್ರವನ್ನು ರಿಷಬ್ ಶೆಟ್ಟಿ, ನಟನೆಯ ಜೊತೆ ನಿರ್ದೇಶಿಸಿದ್ದಾರೆ ಹಿಟ್ ಆಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಸೆಪ್ಟೆಂಬರ್ 30ರಂದು ರಿಲೀಸ್ ಆಗಿರುವ `ಕಾಂತಾರಾ’ ಸಿನಿಮಾ ಏಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಂಡಿದೆ.

ರಿಷಬ್‌ ಶೆಟ್ಟಿ ಸದ್ಯ ಕಾಂತಾರ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ ಕರಾವಳಿ ಸಂಸ್ಕೃತಿಯನ್ನು ಹೊತ್ತು ತಂದ ಕಾಂತಾರ ಚಿತ್ರ ಇದೀಗ ಹಿಟ್ ಆಗಿದ್ದು, ಪ್ರೇಕ್ಷಕ ವರ್ಗವು ಸಿನಿಮಾಕ್ಕೆ ಫಿದಾ ಆಗಿದ್ದಾರೆ. ಅದಲ್ಲದೆ, ಈ ಕಾಂತಾರ ಸಿನಿಮಾಕ್ಕೆ ಪರಭಾಷೆಯ ಪ್ರೇಕ್ಷಕರಿಂದ ಚಿತ್ರಕ್ಕೆ ಬೇಡಿಕೆಯಿತ್ತು. ಹೀಗಾಗಿ ಪರಭಾಷೆಯಲ್ಲಿ ಕಾಂತಾರ ಡಬ್ ಆಗಿಪ್ಯಾನ್ ಇಂಡಿಯಾ ಸಿನಿಮಾವಾಗಿ ಮೂಡಿ ಬಂದಿದೆ.

Kantara actors remuneration list : rishab shetty

ಈ ಸಿನಿಮಾದಲ್ಲಿ ಎಲ್ಲಾ ಕಲಾವಿದರು ಕೂಡ ಅದ್ಭುತವಾಗಿ ನಟಿಸಿದ್ದಾರೆ. ಈ ಸಿನಿಮಾದ ಬಳಿಕ ಎಲ್ಲರ ಬೇಡಿಕೆ ಕೂಡ ಹೆಚ್ಚಾಗಿದೆ. ಚಿತ್ರದ ಬಜೆಟ್​ 16 ಕೋಟಿ ರೂ.ಗಳಾಗಿದ್ದು, ಅದರಲ್ಲಿ ರಿಷಬ್ ಶೆಟ್ಟಿ ಅವರ ಸಂಭಾವನೆಯೂ ಅಧಿಕವಾಗಿದೆ ಎನ್ನಲಾಗಿದೆ. ರಿಷಬ್ ಶೆಟ್ಟಿಯವರು ಶೆಟ್ಟಿ ನಾಲ್ಕು ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ನಟ ಕಿಶೋರ್​ ಅವರಿಗೆ ಒಂದು ಕೋಟಿ ರೂ.ಗಳನ್ನು ಸಂಭಾವನೆಯ ನೀಡಲಾಗಿದೆಯಂತೆ. ಅದರ ಜೊತೆಗೆ ಲೀಲಾ ಅಲಿಯಾಸ್ ಸಪ್ತಮಿ ಗೌಡ 1 ರಿಂದ 1.25 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಇನ್ನು, ಅಚ್ಯುತ್​ ಕುಮಾರ್​ ಅವರಿಗೆ 40 ಲಕ್ಷ ರೂ. ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

Kantara movie box office collection

‘ಕಾಂತಾರ’ ಚಿತ್ರವು ಈಗಾಗಲೇ ಬಾಕ್ಸ್​ ಆಫೀಸಿನಲ್ಲಿ ಜಗತ್ತಿನಾದ್ಯಂತ 400ಕ್ಕೂ ಹೆಚ್ಚು ಕೋಟಿ ಗಳಿಕೆ ಮಾಡುವಲ್ಲಿ ಯಶಸ್ವಿಯಾಗಿದೆ. ಅದಲ್ಲದೆ, ಕಾಂತಾರ 2 ಸಿನಿಮಾದ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಹೌದು ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿ ‘ಕಾಂತಾರ 2’ ಸ್ಕ್ರಿಪ್ಟ್ ಕೆಲಸ ಆರಂಭಿಸಿದ್ದಾರೆ. 2023 ರಲ್ಲಿ ಚಿತ್ರೀಕರಣ ಶುರುವಾಗುವ ಸಾಧ್ಯತೆ ಇದೆ ಎನ್ನಲಾಗಿತ್ತು.

ಇನ್ನು ಕಾಂತಾರ -2 ಗಾಗಿ ರಿಷಬ್ ಶೆಟ್ಟಿ ಮತ್ತು ಚಿತ್ರತಂಡ ಮಂಗಳೂರಿನಲ್ಲಿ ಪಂಜುರ್ಲಿ ದೈವದ ಮೊರೆ ಹೋಗಿದ್ದಾರೆ ಎನ್ನಲಾಗಿತ್ತು. ಕಾಂತಾರ-2 ಮಾಡುವಾಗ 100 ಸಲ ಯೋಚಿಸಿ ಮಾಡಿ ಎಂದು ರಿಷಬ್ ಶೆಟ್ಟಿ ತಂಡಕ್ಕೆ ಎಚ್ಚರಿಕೆ ನೀಡಿದೆ ಎನ್ನಲಾಗಿತ್ತು. ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿ ಅಂತಹ ಎಲ್ಲಾ ವದಂತಿಗಳಿಗೆ ಪೂರ್ಣ ವಿರಾಮ ಇಟ್ಟಿದ್ದರು.

Kantara actors remuneration
Kantara actors remuneration

ಸಿನಿಮಾ ಎಕ್ಸ್ಪ್ರೆಸ್ನೊಂದಿಗಿನ ಸಂವಾದದಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅಂತಹ ಎಲ್ಲಾ ವದಂತಿಗಳಿಗೆ ಪೂರ್ಣ ವಿರಾಮ ಇಟ್ಟಿದ್ದು, ಈ ಬಗ್ಗೆ ರಿಷಬ್ ಶೆಟ್ಟಿ, ” ಪ್ರಾಮಾಣಿಕವಾಗಿ, ನಾನು ಕಾಂತಾರ ಸಿನಿಮಾದೊಂದಿಗಿನ ನನ್ನ ಬದ್ಧತೆಯನ್ನು ಇನ್ನೂ ಪೂರ್ಣಗೊಳಿಸುತ್ತಿದ್ದೇನೆ ಮತ್ತು ನನ್ನ ಮುಂದಿನ ಯೋಜನೆಯಲ್ಲಿ ನಾನಿನ್ನೂ ತೊಡಗಿಸಿಕೊಂಡಿಲ್ಲ’ ಎಂದಿದ್ದರು. ‘ನಾವು ಯಾವುದನ್ನು ತೆಗೆದುಕೊಳ್ಳಲು ಯೋಜಿಸುತ್ತೇವೋ ಅದು ಸಾಮಾನ್ಯ ಚಿತ್ರವಾಗಿರುವುದಿಲ್ಲ.

ಸರಿಗಮಪ ಸ್ಟಾರ್ ದಿಯಾ ಹೆಗಡೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?? ವಂಶಿಕಾಳನ್ನೇ ಹಿಂದಿಕ್ಕಿದ ದಿಯಾ ಹೆಗಡೆ…!!

ಬದಲಿಗೆ, ನಾವು ಸ್ಕ್ರಿಪ್ಟ್ ಅನ್ನು ಫೈನಲ್ ಮಾಡುವ ಮುನ್ನ ಅದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ ಮತ್ತು ಶ್ರಮದಾಯಕ ಸಂಶೋಧನೆಯ ಅಗತ್ಯವಿದೆ. ಅದೊಂದು ದೊಡ್ಡ ಕೆಲಸ’ ಎನ್ನುವ ರಿಷಬ್, ಪ್ರೇಕ್ಷಕರನ್ನು ನಿರೀಕ್ಷಲೇಬೇಕು ಮತ್ತು ಕಾಂತಾರ 2 ಸಿನಿಮಾ ಸುತ್ತ ಎದ್ದಿರುವ ವಿವಿಧ ಊಹಾಪೋಹಗಳಿಗೆ ಕಿವಿಗೊಡಬೇಡಿ. ‘ಕಾಂತಾರ 2 ಅಥವಾ ಇನ್ನಾವುದೇ ಪ್ರಾಜೆಕ್ಟ್ ಆಗಿರಲಿ..

ಆ ಬಗ್ಗೆ ಶೀಘ್ರದಲ್ಲೇ ಅಧಿಕೃತ ವಿವರಗಳನ್ನು ಬಿಡುಗಡೆ ಮಾಡುತ್ತೇವೆ’ ಎಂದಿದ್ದರು. ಅದರ ಜೊತೆಗೆ ಮಂಗಳೂರಿನಲ್ಲಿ ಕಾಂತಾರ ತಂಡ ಕೋಲ ನಡೆಸಿಕೊಟ್ಟ ಬಗ್ಗೆ ಸ್ಪಷ್ಟನೆ ನೀಡಿದ್ದು, “ಇದು ನಮ್ಮ ತಂಡ ಚಿತ್ರದ ಯಶಸ್ಸಿಗೆ ದೇವರಿಗೆ ಮನಃಪೂರ್ವಕವಾಗಿ ಕೃತಜ್ಞತೆ ಸಲ್ಲಿಸಲು ತೆಗೆದುಕೊಂಡ ಹರಕೆ. ಇದು ದೇವಸ್ಥಾನದಲ್ಲಿ ಕಳೆದ ಒಂದು ಭಾವನಾತ್ಮಕ ಮತ್ತು ಸುಂದರ ಕ್ಷಣ. ಅದಕ್ಕಿಂತ ಹೆಚ್ಚೇನೂ ಇಲ್ಲ. ಆದರೆ ಕೋಲ ನಡೆಸಿದ್ದರಿಂದ ಅನೇಕ ಉಹಾಪೋಹಗಳು ಉಂಟಾಗಿವೆ” ಎಂದು ಸ್ಪಷ್ಟ ಪಡಿಸಿದ್ದರು.

Leave a Reply

Your email address will not be published. Required fields are marked *