ಕನ್ನಡ ಕಿರುತೆರೆಯ ರೀಲ್ ಹಾಗೂ ರಿಯಲ್ ಜೋಡಿ ದಿವ್ಯಾ ಹಾಗೂ ಜಿಜಿ ಅಲಿಯಾಸ್ ಗೋವಿಂದೇ ಗೌಡ ಮುದ್ದಾದ ಕುಟುಂಬ ಹೇಗಿದೆ ಗೊತ್ತಾ?

ಕನ್ನಡ ಕಿರುತೆರೆ ಲೋಕದಲ್ಲಿ ಸಾಕಷ್ಟು ರಿಯಾಲಿಟಿ ಶೋಗಳು ಅನೇಕ ಪ್ರತಿಭೆಗಳಿಗೆ ಅವಕಾಶಗಳನ್ನು ನೀಡಿವೆ. ಅಂತಹ ಶೋಗಳಲ್ಲಿ ಕಾಮಿಡಿ ಕಿಲಾಡಿಗಳು (Comedy Kiladigalu) ಶೋ ಕೂಡ ಒಂದು. ಈ ಶೋ ಮೂಲಕ ಖ್ಯಾತಿ ಗಳಿಸಿರುವ ಜೋಡಿ ದಿವ್ಯಾ (Divya) ಹಾಗೂ ಜಿಜಿ (GG). ಕಾಮಿಡಿ ಕಿಲಾಡಿಗಳು ಈ ಶೋ ಮುಗಿಸುವಷ್ಟರಲ್ಲಿ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು.

ಆದರೆ ಕೊನೆಗೆ ಶೋನ ಜಿಜಿ ಅಲಿಯಾಸ್ ಗೋವಿಂದೇ ಗೌಡ (Govinde Gowda) ಅವರನ್ನು ದಿವ್ಯ ಮದುವೆಯಾದರು. ಈ ದಂಪತಿಗಳ ಕುಟುಂಬದ ಸಂತೋಷವನ್ನು ಹೆಚ್ಚಿಸಲು ಕಂದನ ಆಗಮನವಾಗಿತ್ತು. ಇದೀಗ ಸುಖವಾಗಿ ದಿವ್ಯ ಹಾಗೂ ಜಿಜಿ ಸಂಸಾರ ಮಾಡುತ್ತಿದ್ದಾರೆ. ಇದೀಗ ಈ ಜೋಡಿಯ ಮುದ್ದಾದ ಫೋಟೋಗಳು ವೈರಲ್ ಆಗಿದ್ದು, ಈ ಫೋಟೋದಲ್ಲಿ ಜಿಜಿ ಹಾಗೂ ದಿವ್ಯ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

ಈ ಜೋಡಿಯನ್ನು ನೋಡಿದರೆ ಒಂದು ಕ್ಷಣ ಎಂತಹ ಮುದ್ದಾದ ಜೋಡಿ ಎಂದೆನಿಸದೇ ಇರದು.ಈ ಹಿಂದೆಯಷ್ಟೇ ದಿವ್ಯಾ ಹಾಗೂ ಗೋವಿಂದೆ ಗೌಡರವರು ಜೋಡಿ ನಂಬರ್ ಒನ್ (Jodi Number One) ಶೋನಲ್ಲಿಯೂ ಭಾಗವಹಿಸಿದ್ದರು. ಈ ವೇಳೆ ದಿವ್ಯಾರವರು ತಾವು ಅನುಭವಿಸಿದ ಕಷ್ಟವನ್ನು ಹಾಗೂ ತನ್ನ ಬಗ್ಗೆ ಆಡಿದ ಮಾತುಗಳನ್ನು ಹಂಚಿಕೊಂಡಿದ್ದ ವೇಳೆಯಲ್ಲಿ ತಾನು ಸಾಯುವ ನಿರ್ಧಾರವನ್ನು ಮಾಡಿದ್ದೆ ಎನ್ನುವುದನ್ನು ರಿವೀಲ್ ಮಾಡಿದ್ದರು.

ಪ್ರೀತಿಸಿ ಮದುವೆಯಾದ ಜೋಡಿಗಳ ಬದುಕಿನಲ್ಲಿ ಬಹುದೊಡ್ಡ ಬಿರುಗಾಳಿ ಬೀಸಿತ್ತು.ಈ ವೇಳೆಯಲ್ಲಿ ದಿವ್ಯಾ ಸಾ-ಯುವ ನಿರ್ಧಾರವನ್ನು ಮಾಡಿದ್ದರಂತೆ. ದಿನವೂ ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ ಎಂದು ಹಾಡು ಹೇಳಿದರೂ ವಿಶೇಷವೇನಲ್ಲ. ಆ ಮಟ್ಟಿಗೆ ಸಪೋರ್ಟಿವ್ ಆಗಿದ್ದಾರಂತೆ. ಸುಖವಾಗಿ, ಖುಷಿಯಾಗಿ ಸಂಸಾರ ನಡೆಸುತ್ತಿರುವ ದಿವ್ಯಾ ಹಾಗೂ ಜಿಜಿ ಅವರ ಜೀವನವು ಅಲ್ಲೋಲ ಕಲ್ಲೋಲವಾಗಿತ್ತು.

ಅದು ಶೂಟಿಂಗ್ ಸಮಯದಲ್ಲಿ, ಜಿಜಿ ಅವರಿಗೆ ಅಪಘಾತವಾಗಿ ಸ್ಪೈನಲ್ ಕಾರ್ಡ್ ಡ್ಯಾಮೇಜ್ ಆಗಿತ್ತು.ಅ-ಪಘಾತವಾದ ನಂತರ ದಿವ್ಯಾ, ಜಿಜಿ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗ ಕೇಳಿದ್ದ ಮಾತು, ಜಿಜಿ ಬದುಕಿದ್ದಾರೆ ಅಲ್ವಾ ಅಂತ. ತನ್ನ ಪತಿಯನ್ನು ತನ್ನ ಜೀವ ಎಂದು ಭಾವಿಸಿರುವ ದಿವ್ಯಾ ಒಂದು ವೇಳೆ ಜಿಜಿ ಇಲ್ಲ ಎಂದರೆ ತಾನು ಜೀವ ಕ’ಳೆದುಕೊಳ್ಳಬೇಕು ಎಂದು ನಿರ್ಧರಿಸಿದ್ದರಂತೆ. ಆದರೆ, ಜಿಜಿಯವರ ಆಯಸ್ಸು ಗಟ್ಟಿಯಾಗಿತ್ತು ಜಿಜಿಯವರಿಗೆ ಏನು ಆಗಿರಲಿಲ್ಲ. ಮತ್ತೊಂದು ವಿಚಾರವೆಂದರೆ, ಜಿಜಿ ಸುಮಾರು ಮೂರು ತಿಂಗಳು ಕಾಲ ಮಲಗಿದ್ದಲ್ಲಿಯೇ ಇದ್ದರು.

ಜಿಜಿಯವರು ತನ್ನ ಪತ್ನಿಯ ಬಗ್ಗೆ ಮಾತನಾಡಿದ್ದು, ನನಗೆ ಹೆಂಡತಿ ಸಿಕ್ಕಿದ್ದಾಳೆ ಎನ್ನುವುದಕ್ಕಿಂತ ನನಗೊಬ್ಬ ತಾಯಿ ಸಿಕ್ಕಿದ್ದಾಳೆ ಎಂಬುದಾಗಿ ಎಂದರೆ ಅಚ್ಚರಿಯಾಗಬಹುದು. ಜಿಜಿ ಏನನ್ನು ಮಾಡಲಾಗದ ಸ್ಥಿತಿಯಲ್ಲಿ ಮಲಗಿದ್ದಾಗ ದಿವ್ಯ ಪುಟ್ಟ ಮಗುವಿನಂತೆ ಗಂಡನ ಸೇವೆಯನ್ನು ಮಾಡಿದ್ದರು. ಈ ವೇಳೆಯಲ್ಲಿ ದಿವ್ಯ ಅವರು ಗರ್ಭಿಣಿಯೂ ಆಗಿದ್ದರು. ಈ ನಡುವೆ ಪತಿಯನ್ನು ಮಗುವಿನಂತೆ ನೋಡಿಕೊಳ್ಳುತ್ತಿದ್ದರು. ಈ ಎಲ್ಲಾ ನೋವುಗಳನ್ನು ಮೆಟ್ಟಿ ನಿಂತು ಈ ಜೋಡಿ ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *