ಬಣ್ಣದ ಲೋಕ ಅನೇಕ ನಟ ನಟಿಯರ ಬದುಕನ್ನು ಕಲರ್ ಫುಲ್ ಮಾಡಿದೆ. ಹೀಗಾಗಿ ಈ ಸಿನಿಮಾ ಲೋಕದಲ್ಲಿ ಬದುಕು ಕಟ್ಟಿಕೊಂಡವರು ಹಲವರು. ಅಂತಹವರ ಸಾಲಿಗೆ ಕನ್ನಡದ ಖ್ಯಾತ ನಟಿ ಸುಧಾರಾಣಿ (Actress Sudharani) ಕೂಡ ಸೇರಿಕೊಳ್ಳುತ್ತಾರೆ. ಒಂದು ಕಾಲದಲ್ಲಿ ಚಂದನವನದ ಬೇಡಿಕೆಯ ನಟಿಯರ ಸಾಲಿಗೆ ಸೇರಿದ್ದ ಸುಧಾರಾಣಿ ಇದೀಗ ಪೋಷಕ ನಟಿಯಾಗಿ ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ.
ಇತ್ತ ಸೋಶಿಯಲ್ ಮೀಡಿಯಾ (Social Media) ದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಟಿ ಸುಧಾರಾಣಿಯವರು ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಶ್ರೀರಸ್ತು, ಶುಭಮಸ್ತು ಧಾರಾವಾಹಿಯಲ್ಲಿ ನಟಿಸುತ್ತಿದ್ದು ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಯಾವ ಯುವ ನಟಿಗೂ ಕೂಡ ಕಡಿಮೆಯಿಲ್ಲ ಎನ್ನುವಂತೆ ಇರುವ ನಟಿ ಸುಧಾರಾಣಿಯವರ ವಯಸ್ಸು ಎಷ್ಟಿರಬಹುದು ಎನ್ನುವ ಕುತೂಹಲ ಎಲ್ಲರಿಗೂ ಇರುತ್ತದೆ.
*ನಟಿ ಸುಧಾರಾಣಿ ಸಿನಿ ಬದುಕಿನ ಹಾದಿ*
ನಟಿ ಸುಧಾರಾಣಿ (Actress Sudharani) ಅವರು ಬಾಲ್ಯ ವಯಸ್ಸಿನಲ್ಲಿ ಇದ್ದಾಗಲೇ ತಮ್ಮ ಸಿನಿಮಾ ಕೆರಿಯರ್ ಅನ್ನು ಶುರು ಮಾಡಿದರು. ಹೌದು, 3 ವರ್ಷದ ವಯಸ್ಸಿನಲ್ಲಿದ್ದಾಗ ಒಂದು ಕಮರ್ಷಿಯಲ್ ಬಿಸ್ಕೇಟ್ ಬ್ರಾಂಡ್ ಅಡ್ವರ್ಟೈಸ್ಮೆಂಟ್ ನಲ್ಲಿ ಚೈಲ್ಡ್ ಮಾಡೆಲ್ (Child Model) ಆಗಿ ಕಾಣಿಸಿಕೊಂಡರು. ತದನಂತರದಲ್ಲಿ ಬಾಲನಟಿಯಾಗಿ ಕಿಲಾಡಿ ಕಿಟ್ಟು, ಕುಳ್ಳ ಕುಳ್ಳಿ, ಅನುಪಮ ಹೀಗೆ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡರು.
1986 ರಲ್ಲಿ ತೆರೆಕಂಡ ಆನಂದ (Anand) ಚಿತ್ರದ ಮೂಲಕ ನಾಯಕಿಯಾಗಿ ಚಂದನವನಕ್ಕೆ ಎಂಟ್ರಿ ಕೊಟ್ಟರು. ಹೀಗೆ ಶುರುವಾದ ಸುಧಾರಾಣಿ ಜರ್ನಿಯಲ್ಲಿ ಅನೇಕ ಸ್ಟಾರ್ ನಟರ ಜೊತೆಗೆ ಸ್ಕ್ರೀನ್ ಹಂಚಿಕೊಂಡರು. ಇನ್ನು ಆಸೆಗೊಬ್ಬ ಮೀಸೆಗೊಬ್ಬ, ಅಣ್ಣ ತಂಗಿ, ಮಿಡಿದ ಶ್ರುತಿ ಅನೇಕ ಸಿನಿಮಾಗಳಲ್ಲಿ ನಟಿಸಿ ಖ್ಯಾತ ನಟಿಯೆನಿಸಿಕೊಂಡರು.
ನಟ ರಮೇಶ್ ಅರವಿಂದ್‌ರವರ ಜೊತೆ ಪಂಚಮ ವೇದ, ಶ್ರೀಗಂಧ, ಅರಗಿಣಿ ಮತ್ತು ಅನುರಾಗ ಸಂಗಮ ಸೇರಿದಂತೆ ಎಂಟು ಚಲನಚಿತ್ರಗಳಲ್ಲಿ ಜೊತೆಯಾಗಿ ಸ್ಕ್ರೀನ್ ಹಂಚಿಕೊಂಡರು. ಇವರಿಬ್ಬರ ಕಾಂಬಿನೇಶನ್ ನಲ್ಲಿ ಮೂಡಿ ಬಂದ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಯಿತು. ಈ ಹಿಂದೆಯಷ್ಟೇ ಗೆಸ್ಟ್ ರೋಲ್ ಮಾಡುವ ಮೂಲಕ ಕಿರುತೆರೆ ಪರದೆಯ ಮೇಲೆ ಕಾಣಿಸಿಕೊಂಡಿದ್ದರು. ಇದೀಗ ಕನ್ನಡ ಕಿರುತೆರೆಯಲ್ಲಿ ಪೋಷಕ ನಟಿಯಾಗಿ ಸಕ್ರಿಯರಾಗಿದ್ದಾರೆ.
*ನಟಿಯ ವಯಸ್ಸು ಕೇಳಿದ್ರೆ ಶಾಕ್ ಆಗ್ತೀರಾ!*
ಸಿನಿ ಬದುಕಿನಲ್ಲಿ ಬ್ಯುಸಿಯಾಗುವುದರ ಫ್ಯಾಮಿಲಿಗೂ ಸಮಯ ನೀಡುತ್ತಾರೆ. ಹೀಗಾಗಿ ಪತಿ ಹಾಗೂ ಮಗಳ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತಾರೆ. ಈ ಹಿಂದೆ, ವೀಕೆಂಡ್ ವಿಥ್ ರಮೇಶ್ (Weekend With Ramesh) ಕಾರ್ಯಕ್ರಮದಲ್ಲಿ, “‘ನನ್ನ ಫ್ಯಾಮಿಲಿ ನನಗೆ ಸ್ಟ್ರಾಂಗ್ ಫೌಂಡೇಶನ್ ನೀಡಿದ್ರೆ, ಅದರ ಮೇಲೆ ಅರಮನೆ ಕಟ್ಟಿದವರು ಗೋವರ್ಧನ್. ಅಮೇರಿಕಾದಿಂದ ವಾಪಸ್ ಬಂದಮೇಲೆ ಅವರೇ ನನಗೆ ತುಂಬಾ ಸಪೋರ್ಟ್ ಮಾಡಿದ್ದು. ಎಷ್ಟೋ ವಿಷಯಗಳು ನನ್ನ ಫ್ಯಾಮಿಲಿಯವರಿಗೆ ಹೇಳಿಕೊಳ್ಳಲಿಲ್ಲ. ಅಂತಹ ವಿಷಯಗಳನ್ನ ನಾನು ಗೋವರ್ಧನ್ ಗೆ ಹೇಳಿದ್ದೆ. ಸಪೋರ್ಟ್ ಎಂಬ ಪದ ತುಂಬಾ ಚಿಕ್ಕದು ವರ್ಣಿಸುವುದಕ್ಕೆ.
ಸಂಬಂಧಗಳ ಬಗ್ಗೆ ನನಗೆ ನಂಬಿಕೆ ಹೊರಟು ಹೋಗಿತ್ತು. ಆಗ ಎಲ್ಲವನ್ನೂ ನನಗೆ ವಾಪಸ್ ಕಲ್ಪಿಸಿದ್ದು ಗೋವರ್ಧನ್. ಐ ಯಮ್ ಲಕ್ಕಿ ಟು ಹಾವ್ ಹಿಮ್ ಆಸ್ ಮೈ ಹಸ್ಬೆಂಡ್ ಅಂತ ‘ ಎಂದಿದ್ದರು. 25ರ ಹರೆಯದ ಯುವತಿಯರಂತೆ ಕಾಣುವ ತನ್ನ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿರುವ ನಟಿ ಸುಧಾರಾಣಿ ಅವರ ನಿಜವಾದ ವಯಸ್ಸು 52 ವರ್ಷ. ಆದರೆ ಈ ನಟಿಯನ್ನು ಕಂಡರೆ 52 ವರ್ಷ ವಯಸ್ಸು ಆದಂತೆ ಕಾಣುವುದಿಲ್ಲ.