ಸಿನೆಮಾರಂಗದಲ್ಲಿ ಏಳು ಬೀಳು ನೋವು ನಲಿವು ಸಹಜ. ಸಿನಿಮಾರಂಗದಲ್ಲಿ ಮಿಂಚಬೇಕು ಅಂದುಕೊಂಡವರೆಲ್ಲ ದೊಡ್ಡ ಸ್ಟಾರ್ ಆಗುವುದಿಲ್ಲ. ಹೀರೋಗಳು ತಮ್ಮ ಪರಿಶ್ರಮ ದಿಂದ ಕಷ್ಟ ಪಟ್ಟು ಮೇಲೆ ಬಂದಿರುತ್ತಾರೆ. ಇನ್ನೂ ನಟರೂ ಕೂಡ ತಮ್ಮ ಆಸೆ ಈಡೇರಿಸಿಕೊಳ್ಳಲು ನಾನಾ ರೀತಿಯ ಹರಸಾಹಸ ಪಟ್ಟು ಅವಮಾನಗಳನ್ನು ಸಹಿಸಿಕೊಂಡು ಸಿನೆಮಾರಂಗದಲ್ಲಿ ಸ್ಥಾನ ಪಡೆದುಕೊಂಡಿರುತ್ತಾರೆ. ಅದರಲ್ಲೂ, ಈಗ ಅದೆಷ್ಟೋ ಮಂದಿ ತಾನು ದೊಡ್ಡ ಮಟ್ಟದ ಸ್ಟಾರ್ ನಟ ಆಗಬೇಕೆಂದು ಕನಸು ಕಂಡಿರುತ್ತಾರೆ. ಕೆಲ ಸ್ಟಾರ್ ನಟರು ಸಿನಿಮಾ ರಂಗಕ್ಕೆ ಬರುವ ಮುನ್ನ ಮೊದಲು ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದರು.
ಸತೀಶ್ ನೀನಾಸಂ ಅವರು ಗೋಪಾಲ್ ಥಿಯೇಟರ್ ನಲ್ಲಿ ಟಿಕೆಟ್ ಕೊಡುವುದು ಮತ್ತು ಬ್ಯಾಟರಿ ಲೈಟ್ ಬಿಡುವ ಕೆಲಸವನ್ನು ಮಾಡುತ್ತಿದ್ದರು. ಇದರ ಜೊತೆಗೆ ಥಿಯೇಟರ್ ಪಕ್ಕದಲ್ಲಿರುವ ಛತ್ರದಲ್ಲಿ ಕೂಡ ಫ್ಲವರ್ ಡೆಕೋರೇಷನ್ ಕೆಲಸವನ್ನು ಮಾಡುತ್ತಿದ್ದರು. ಇನ್ನು ಇದಾದ ಮೇಲೆ ಇವರು ನಟನೆಯಲ್ಲಿ ತರಬೇತಿಯನ್ನು ಪಡೆದುಕೊಂಡು ಮೊದಲು ಕಿರುತೆರೆಯಲ್ಲಿ ನಟಿಸಿ ನಂತರ ಬೆಳ್ಳಿತೆರೆಯಲ್ಲಿ ನಟಿಸುತ್ತಿದ್ದಾರೆ. ಇವರ ಬಹುತೇಕ ಸಿನಿಮಾಗಳು ತಾವು ಕೆಲಸ ಮಾಡಿದ ಗೋಪಾಲ್ ಥಿಯೇಟರ್ ನಲ್ಲೇ ಬಿಡುಗಡೆಯಾಗಿದೆ.
ಕೆಜಿಎಫ್ ಚಿತ್ರದ ವಿಲನ್ ಗರುಡ ರಾಮ್ ಎನ್ನುವ ಪಾತ್ರದಲ್ಲಿ ನಟಿಸಿದ ರಾಮಚಂದ್ರರಾಜು ಅವರು ಮೊದಲು ಯಶ್ ಅವರಿಗೆ ಬಾಡಿಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ತದನಂತರ ಇವರನ್ನು ಪ್ರಶಾಂತ್ ನೀಲ್ ಅವರು ಗುರುತಿಸಿ ಕೆಜಿಎಫ್ ಪಾರ್ಟ್ 1 ಚಿತ್ರದಲ್ಲಿ ನಟಿಸುವುದಕ್ಕೆ ಅವಕಾಶ ನೀಡಿದರು. ಇದಾದ ಮೇಲೆ ಇವರು ಬಹುತೇಕ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿದ್ದು ಟಾಪ್ ವಿಲನ್ ಗಳಲ್ಲಿ ಇವರು ಕೂಡ ಒಬ್ಬರಾಗಿ ಮಿಂಚಿದ್ದಾರೆ.
ರಕ್ಷಿತ್ ಶೆಟ್ಟಿ ಅವರು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ನಲ್ಲಿ ಎಂಜಿನಿಯರಿಂಗ್ ಪದವಿಯನ್ನು ಮಾಡಿ ಇವರು ಬೆಂಗಳೂರಿನ ಒಂದು ಐಟಿ ಕಂಪನಿಯಲ್ಲಿ ಕೆಲ ತಿಂಗಳಿನ ಕಾಲ ಕೆಲಸ ಮಾಡಿದ್ದರು. ಇದೇ ಸಮಯದಲ್ಲಿ ಇವರು ಕೆಲ ಶಾರ್ಟ್ ಮೂವಿಗಳನ್ನು ಮಾಡಿ ಇದರಿಂದ ಸಕ್ಸಸ್ ಅನ್ನು ಪಡೆದು ಕೆಲಸಕ್ಕೆ ರಿಸೈನ್ ಮಾಡಿ ನಂತರ ಸಿನಿಮಾ ರಂಗಕ್ಕೆ ಬಂದು ನಟರಾಗಿ ಅಭಿನಯಿಸುತ್ತಿದ್ದಾರೆ. ಈಗ ಇವರು ನಟನೆಯ ಜೊತೆಗೆ ಸಿನಿಮಾಗಳ ನಿರ್ದೇಶನ ಮತ್ತು ನಿರ್ಮಾಣ ಸಹ ಮಾಡುತ್ತಾರೆ. ಇತ್ತೀಚಿಗೆ ಸಾಕಷ್ಟು ಸಿನೆಮಾಗಳಲ್ಲಿ ನಟಿ ಉತ್ತಮ ನಟ ಎನಿಸಿಕೊಂಡಿದ್ದಾರೆ.
ಲವ್ಲಿ ಸ್ಟಾರ್ ಪ್ರೇಮ್ ಅವರ ತಂದೆ ಸೀರೆಯ ನೇಕಾರರಾಗಿ ಕೆಲಸ ಮಾಡುತ್ತಿದ್ದರು. ಹಾಗಾಗಿ ಪ್ರೇಮ್ ಅವರು ಕೂಡ ಸೀರೆ ನೇಯುವುದನ್ನು ಕಲಿತಿದ್ದಾರೆ. ಇದಾದ ಮೇಲೆ ಇವರು ಒಂದು ಟೆಲಿಫೋನ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿದ್ದರು. ತದನಂತರ ತಮ್ಮ ಗೆಳೆಯನ ಒತ್ತಾಯದಿಂದ ಕಿರುತೆರೆಯಲ್ಲಿ ನಟಿಸುವುದಕ್ಕೆ ಶುರು ಮಾಡಿದರು. ಇದಾದ ಮೇಲೆ ಈಗ ಸ್ಯಾಂಡಲ್ ವುಡ್ ನಲ್ಲಿ ಹೀರೋ ಆಗಿ ಸಾಕಷ್ಟು ಜನಪ್ರಿಯತೆಯನ್ನು ಸಾಧಿಸಿಕೊಂಡಿದ್ದಾರೆ.
ಕುಂದಾಪುರ ಮೂಲದ ರಿಷಬ್ ಶೆಟ್ಟಿ ಅವರು ಮೊದಲು ಮಿನರಲ್ ವಾಟರ್ ಸಪ್ಲೈ ಬಿಸಿನೆಸ್ ಮಾಡುತ್ತಿದ್ದರು. ಇದಾದ ಮೇಲೆ ಇವರು ಕೆಲ ಸಿನಿಮಾಗಳಿಗೆ ಅಸಿಸ್ಟಂಟ್ ನಿರ್ದೇಶಕರಾಗಿ ಕೆಲಸ ಮಾಡಿದರು. ತದನಂತರ ಹೋಟೆಲ್ ಬಿಸಿನೆಸ್ ಮಾಡುವುದಕ್ಕೆ ಶುರುಮಾಡಿದರು. ಇದರಲ್ಲಿ ಇವರಿಗೆ ನಷ್ಟ ಆದ ಕಾರಣ ಮತ್ತೆ ಸಿನಿಮಾಗಳ ನಿರ್ದೇಶನ ಮಾಡುವುದಕ್ಕೆ ಶುರುಮಾಡಿದರು. ಈಗ ರಿಷಬ್ ಶೆಟ್ಟಿ ಅವರು ಒಳ್ಳೆಯ ನಟರಾಗಿ ಗುರುತಿಸಿಕೊಳ್ಳುವುದರ ಜೊತೆಗೆ ಒಳ್ಳೊಳ್ಳೆಯ ಸಿನಿಮಾಗಳನ್ನು ಸಹ ನಿರ್ದೇಶನ ಮಾಡುತ್ತಿದ್ದಾರೆ.
ಚೇತನ್ ಕುಮಾರ್ ಅವರು ಬೆಳೆದಿದ್ದು ಅಮೆರಿಕದ ಚಿಕಾಗೋದಲ್ಲಿ ಇವರು ಎಂ.ಎನ್.ಸಿ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರಾಗಿ ಕೆಲಸ ಮಾಡುತ್ತಿದ್ದರು. ತದನಂತರ ಇವರು ಭಾರತಕ್ಕೆ ಬಂದು ಆ ದಿನಗಳು ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಬಾಲನಟರಾಗಿ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇದಾದ ಮೇಲೆ ಇವರ ಸ್ವಲ್ಪ ವರ್ಷಗಳ ಕಾಲ ಬ್ರೇಕ್ ತೆಗೆದುಕೊಂಡು ಅಪ್ಪು ಚಿತ್ರದ ಮೂಲಕ ಹೀರೋ ಆಗಿ ತೆರೆಮೇಲೆ ಕಾಣಿಸಿದರು. ಆ ಸಮಯದಲ್ಲಿ ಪುನೀತ್ ಅವರು ಗ್ರಾನೈಟ್ ಬಿಸಿನೆಸ್ ಮಾಡುತ್ತಿದ್ದರು.