ಕರ್ನಾಟಕದ ಅತೀ ಉದ್ದದ ರಸ್ತೆ ಯಾವ ನಟರ ಹೆಸರಿನಲ್ಲಿದೆ ಗೊತ್ತಾ? ವಾವ್ ಇದು ಸೂಪರ್ ಕಣ್ರೀ ನೋಡಿ!!

kannada actor longest road : ಸಿನಿಮಾ ಲೋಕ, ದೂರದಲ್ಲಿ ನೋಡುವವರಿಗೆ ಎಲ್ಲವೂ ಚೆನ್ನಾಗಿಯೇ ಕಾಣಿಸುತ್ತದೆ. ಒಮ್ಮೆ ಈ ಸಿನಿ ಬದುಕಿಗೆ ಎಂಟ್ರಿ ಕೊಟ್ಟರೆ ಸಿನಿ ಲೋಕದಿಂದ ದೂರ ಸರಿಯುವುದು ಕಷ್ಟಕರ. ಸಿನಿ ಬದುಕು ಒಮ್ಮೆ ಒಬ್ಬ ಕಲಾವಿದರನ್ನು ಕೈ ಹಿಡಿದರೆ, ಅದೃಷ್ಟ ಒಲಿದು ಬಂದರೆ ನೇಮ್ ಫೇಮ್ ಎರಡು ಕೂಡ ತಾನಾಗಿಯೇ ಬಂದು ಬಿಡುತ್ತದೆ. ಈ ಸಿನಿಮಾರಂಗಕ್ಕೆ ಬಂದವರಿಗೆಲ್ಲಾ ಅವಕಾಶಗಳ ಹಿಂದೆ ಅವಕಾಶಗಳು ಸಿಗಬೇಕೆಂದೇನಿಲ್ಲ. ಕೆಲವೊಮ್ಮೆ ಅವಕಾಶ ಸಿಗದೇ ಸಿನಿಮಾರಂಗದಿಂದ ದೂರ ಉಳಿಯಬಹುದು.

ಈ ಬಣ್ಣದ ಜಗತ್ತು, ಎಲ್ಲರನ್ನೂ ಒಂದು ಕ್ಷಣವಾದರೂ ಸೆಳೆಯದೇ ಇರದು. ಒಮ್ಮೆ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರೆ ಸಿನಿಮಾರಂಗದಿಂದ ದೂರ ಉಳಿಯುವುದು ಕಷ್ಟ. ಅದಲ್ಲದೆ, ಸಿನಿಮಾರಂಗದಲ್ಲಿ ಬದುಕು ಕಟ್ಟಿಕೊಳ್ಳುವುದು ಅಷ್ಟು ಸುಲಭವಲ್ಲ. ಒಬ್ಬ ಸೆಲೆಬ್ರಿಟಿಯಾದ ಮೇಲೆ ಗಾಸಿಫ್ ಗಳ ಬಾಯಿಗೂ ಬೀಳಬೇಕಾಗುತ್ತದೆ. ಅಲ್ಲದೇ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟವರು ಎಲ್ಲರೂ ಕೂಡ ಫೇಮಸ್ ಆಗಬೇಕೆಂದು ಏನಿಲ್ಲ.

ಕೆಲವರು ಒಂದೆರಡು ಸಿನಿಮಾಗಳನ್ನು ಮಾಡಿ ಯಶಸ್ಸು ಕಂಡರೆ ಮಾತ್ರ ಇಲ್ಲಿ ನೆಲೆಯುತ್ತಾರೆ. ಇನ್ನು ಕೆಲವು ನಟಿ ಮದುವೆ ಎಂಬ ಬಂಧಕ್ಕೆ ಬಿದ್ದರೆ ಸಾಕು, ಆಮೇಲೆ ಸಿನಿಮಾ ರಂಗಕ್ಕೆ ಮರಳುವುದೇ ಇಲ್ಲ. ಇದಕ್ಕೆ ಸಾಕಷ್ಟು ಉದಾಹರಣೆಗಳೂ ನಮ್ಮ ಸಿನಿಮಾ ರಂಗದಲ್ಲಿಯೇ ಇದೆ. ಇನ್ನು ಕೆಲವರು ಇದ್ದಾರೆ, ಈ ಲೋಕಕ್ಕೆ ಒಮ್ಮೆ ಎಂಟ್ರಿ ಕೊಟ್ಟರೆ ಸಾಕು, ಆಮೇಲೆ ಅದೆಷ್ಟೋ ಕಷ್ಟವೇ ಅಗಲಿ, ಸೋಲು ಗೆಲುವೇ ಸಿಗಲಿ. ಎಲ್ಲವನ್ನು ಜಯಿಸಿ, ಸ್ಟಾರ್ ಪಟ್ಟ ಗಿಟ್ಟಿಸಿಕೊಂಡು ಅಭಿಮಾನಿಗಳ ಮನಸ್ಸಿನಲ್ಲಿ ಜಾಗ ಪಡೆದುಕೊಂಡು ಬಿಡುತ್ತಾರೆ.

ಸಿನಿಮಾರಂಗದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡು, ಇಂದು ಯಾರು ಊಹೆ ಮಾಡದ ಮಟ್ಟಿಗೆ ಬೆಳೆದಿರುವವರು ಚಂದನವನದಲ್ಲಿದ್ದಾರೆ. ಕೆಲವು ನಟ ನಟಿಯರು ದೈಹಿಕವಾಗಿ ಇಲ್ಲವಾದರೂ ಅವರನ್ನು ನೆನಪಿಸಿಕೊಳ್ಳುವ ಅಭಿಮಾನಿಗಳು ಇದ್ದಾರೆ. ಕರ್ನಾಟಕದ ಕೆಲವು ರಸ್ತೆಗಳಿಗೆ ಕನ್ನಡ ಸಿನಿಮಾರಂಗದ ನಟರ ಹೆಸರನ್ನು ಇಡಲಾಗಿದೆ. ಆ ನಟರು ಯಾರಿರಬಹುದು ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ.

ಹೆಣ್ಣಿನ ಎಲ್ಲಾ ಸನ್ನೆಗಳಿಗೆ ಇದೆ ನಾನಾ ಅರ್ಥ, ಇದ್ದಕ್ಕಿದಂತೆ ತುಟಿ ಕಚ್ಚಿದರೆ ಇದರ ಅರ್ಥವೇನು ಗೊತ್ತಾ? ಇಲ್ಲಿದೆ ನೋಡಿ ಪೂರ್ತಿ ಮಾಹಿತಿ!!

ಮೊದಲನೆಯದಾಗಿ ಚಂದನವನದ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್. ಹೌದು ಅಪ್ಪು ದೈಹಿಕವಾಗಿ ಇಲ್ಲವಾದರೂ ಅಭಿಮಾನಿಗಳ ಪಾಲಿಗೆ ಅಪ್ಪು ದೇವರಾಗಿದ್ದಾರೆ. ಅಪ್ಪುವಿನ ಹೆಸರಿನಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳು ನಡೆಯುತ್ತಲೇ ಇದೆ. ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿಯು ಉದ್ದದ ರಸ್ತೆ ಇದೆ. ಅಂದಹಾಗೆ, ಮೈಸೂರು ರಸ್ತೆ ನಾಯಂಡಳ್ಳಿ ಜಂಕ್ಷನ್ ನಿಂದ  ಹಿಡಿದು ಬನ್ನೇರುಘಟ್ಟ ರಸ್ತೆಯ ಮೆಗಾ ಸಿಟಿ ಮಾಲ್ ಜಂಕ್ಷನ್ ವರೆಗೆ ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜಕುಮಾರ್ ಹೆಸರನ್ನು ಇಡಲಾಗಿದೆ.

12 ಕಿಲೋಮೀಟರ್ ಉದ್ದ ಇರುವ ರಸ್ತೆ ಇದಾಗಿದ್ದು, ಕನ್ನಡದ ಖ್ಯಾತ ನಟ ಹೆಸರಿನಲ್ಲಿರುವ ಉದ್ದದ ರಸ್ತೆ ಇದಾಗಿರುವುದು ವಿಶೇಷ. ಎರಡನೆಯದಾಗಿ ಕನ್ನಡ ಚಿತ್ರರಂಗದ ವರನಟ ಡಾ. ರಾಜಕುಮಾರ್ ಅವರ ಹೆಸರನ್ನು ಸಾಕಷ್ಟು ರಸ್ತೆಗಳಿಗೆ ಇಡಲಾಗಿದೆ. ಅದರಲ್ಲಿಯೂ ಬೆಂಗಳೂರಿನಲ್ಲಿ ಸಾಕಷ್ಟು ರಸ್ತೆಗಳಿಗೆ ಅಣ್ಣಾವ್ರ ಹೆಸರನ್ನು ಇಡಲಾಗಿದೆ. ಡಾ. ರಾಜ್ ಕುಮಾರ್ ಹೆಸರನ್ನು ಇಟ್ಟಿರುವ ರಸ್ತೆಗಳಲ್ಲಿ ರಾಜಾಜಿನಗರದ ಡಾಕ್ಟರ್ ರಾಜಕುಮಾರ್ ರಸ್ತೆ ಯೂ ಬಹಳ ಜನಪ್ರಿಯವಾಗಿದೆ.

kannada actor longest road : Which actor’s name given to logest road in india ?

ಮೂರನೇಯದಾಗಿ ಅಣ್ಣಾವ್ರ ಪತ್ನಿ ಪಾರ್ವತಮ್ಮ ರಾಜಕುಮಾರ್ ಅವರ ಹೆಸರಿನಲ್ಲೂ ಹಲವು ರಸ್ತೆಗಳಿವೆ. ನಿರ್ಮಾಪಕರಾಗಿ ಸಾಧನೆ ಮಾಡಿದ ಕಾರಣ ಪಾರ್ವತಮ್ಮ ರಾಜ್ ಕುಮಾರ್ ಅವರ ಹೆಸರನ್ನು ಕೂಡ ರಸ್ತೆಗಳಿಗೆ ಇಡಲಾಗಿದೆ. ನಾಲ್ಕನೇಯದಾಗಿ ಚಂದನವನದ ಸಾಹಸಸಿಂಹ ವಿಷ್ಣುವರ್ಧನ್. ಡಾಕ್ಟರ್ ವಿಷ್ಣುವರ್ಧನ್ ಅವರ ಹೆಸರಿನಲ್ಲಿರುವ ರಸ್ತೆ ದೊಡ್ಡ ದಾಖಲೆಯ ರಸ್ತೆಯಾಗಿರುವುದು ವಿಶೇಷ.

Dr Vishuvardhan road
Dr Vishuvardhan road

ವಿಷ್ಣುವರ್ಧನ್ ಅವರ ಹೆಸರಿನಲ್ಲಿರುವ ರಸ್ತೆ ಬಹಳ ಉದ್ದದ ರಸ್ತೆ ಆಗಿದ್ದು, 14.5 ಕಿಲೋಮೀಟರ್ ಉದ್ದವಿದೆ. ಈ ರಸ್ತೆಯೂ ಬನಶಂಕರಿಯಿಂದ ಹಿಡಿದು ಕೆಂಗೇರಿ ವರೆಗೂ ಇರುವ ರಸ್ತೆಗೆ ಡಾಕ್ಟರ್ ವಿಷ್ಣುವರ್ಧನ್ ರಸ್ತೆ ಎಂದು ನಾಮಕರಣ ಮಾಡಲಾಗಿದೆ. ಈ ರಸ್ತೆಯೂ ಕನ್ನಡ ನಟನಾ ಹೆಸರಿನಲ್ಲಿರುವ ಅತಿ ಉದ್ದದ ರಸ್ತೆ ಎಂದು ಹೆಸರುವಾಸಿಯಾಗಿದೆ.

Leave a Reply

Your email address will not be published. Required fields are marked *