ಒಂದೇ ಫ್ರೇಮ್ ನಲ್ಲಿ ಕಾಣಿಸಿಕೊಂಡು ದಿಗ್ಗಜ ನಟರು ಸುಹಾಸಿನಿ ಕಮಲ್ ಹಾಸನ ಮತ್ತೆ ಸೇರಿದ್ಯಾಕೆ? ಇಲ್ಲಿದೆ ನೋಡಿ ಫೋಟೋಸ್!!

ಒಂದೇ ಫ್ರೇಮ್ ನಲ್ಲಿ ಕಾಣಿಸಿಕೊಂಡು ದಿಗ್ಗಜ ನಟರು ಸುಹಾಸಿನಿ ಕಮಲ ಹಾಸನ ಮತ್ತೆ ಸೇರಿದ್ಯಾಕೆ?ಇಂತಹ ಕೆಲವು ಲೆಜೆಂಡ್ ನಟ ನಟಿಯರನ್ನು ಒಟ್ಟಿಗೆ ನೋಡುವುದೇ ಒಂದು ಖುಷಿ. ಹಲವು ವರ್ಷಗಳಿಂದ ಸಿನಿಮಾ ತೆರೆಯ ಮೇಲೆ ನಮ್ಮನ್ನು ರಂಜಿಸಿಕೊಂಡು ಬರುತ್ತಿರುವ ನಟಿ ಸುಹಾಸಿನಿ ಹಾಗೂ ಕಮಲಹಾಸನ್ ಇತ್ತೀಚಿಗೆ ಒಂದೇ ಫ್ರೇಮ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಇಷ್ಟು ಅದ್ಭುತ ಜೋಡಿ ಒಟ್ಟಾಗಿ ಮತ್ತೆ ಕಾಣಿಸಿಕೊಂಡಿದ್ದು ಯಾಕೆ ಗೊತ್ತಾ.ಇತ್ತೀಚಿಗೆ ಬಹುಭಾಷಾ ನಟಿ ಸುಹಾಸಿನಿ ಮಣಿರತ್ನಂ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಬಹುಭಾಷಾ ನಟ ಕಮಲ್ ಹಾಸನ್ ಅವರ ಜೊತೆಗೆ ಇರುವ ಫೋಟೋಗಳನ್ನು ಹಂಚಿಕೊಂಡಿದ್ದರು. ಇವರಿಬ್ಬರೂ ಸೇರಿ ಯಾವುದೋ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಎಂದುಕೊಳ್ಳಬೇಡಿ.

ಕಮಲ್ ಹಾಸನ್ ಅವರ ಕುಟುಂಬದ ಕಾರ್ಯಕ್ರಮ ಒಂದರಲ್ಲಿ ಸುಹಾಸನಿ ಮಣಿರತ್ನಂ ಭಾಗವಹಿಸಿದ್ದರು. ಹಾಸನ್ ಕುಟುಂಬ ಹಲವು ದಿನಗಳ ನಂತರ ತಮ್ಮ ಮನೆಗೆ ಮರಳಿದೆ. ಈ ಮನೆ ಅರವತ್ತು ವರ್ಷಕ್ಕಿಂತ ಹಳೆಯದಾಗಿದ್ದು ಇದನ್ನು ನವೀಕರಣ ಮಾಡಲಾಗಿದೆ. ಈ ಕಾರಣಕ್ಕಾಗಿ ಎಲ್ಲರೂ ಈ ಮನೆಯಲ್ಲಿ ಒಟ್ಟಾಗಿ ಸೇರಿದ್ದಾರೆ ಎನ್ನುವ ಮಾಹಿತಿ ಇದೆ.

ಸುವಾಸನೆ ತಮ್ಮ instagram post ನಲ್ಲಿ ಎಲ್ಟಮ್ಸ್ ರಸ್ತೆಯಲ್ಲಿರುವ ಕುಟುಂಬದ ಮನೆಗೆ ಹೋಗುತ್ತಿದ್ದೇನೆ ಎಂದು ಹಂಚಿಕೊಂಡಿದ್ದರು. ಅತ್ಯಂತ ಹಳೆಯದಾಗಿರುವ ಮನೆಯ ಮುಂದೆ ಹಾಸನ್ ಕುಟುಂಬದ ಸದಸ್ಯರನ್ನು ಕಾಣಬಹುದು. ಸುಹಾಸಿನಿ, ಕಮಲ್, ಚಾರು ಹಾಸನ್, ಕೋಮಲಂ, ಡಾಕ್ಟರ್ ನಂದಿನಿ ಭಾಷಿಣಿ, ಗೌತಮ್, ಅಕ್ಷರ, ಇವರೆಲ್ಲರೂ ಒಟ್ಟಾಗಿ ನಿಂತು ತೆಗೆಸಿಕೊಂಡಿರುವ ಫೋಟೋ ಹಿಸ್ಟಾರಿಕಲ್ ಆಗಿದೆ ಎಂದು ಫೋಟೋ ನೋಡಿದ ನೆಟ್ಟಿದರೂ ಕೂಡ ಕಮೆಂಟ್ ಮಾಡಿದ್ದಾರೆ.

ಬಹುಭಾಷಾ ನಟಿ ಸುಹಾಸಿನಿ ಇಂದು ಅಷ್ಟಾಗಿ ಸಿನಿಮಾ ರಂಗದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಅವರು ಕೊನೆಯದಾಗಿ ತಮಿಳು ಭಾಷೆಯ ಪುತಮ್ ಪುದು ಕಲೈ ಸೀರಿಸ್ ನಲ್ಲಿ ಅಭಿನಯಿಸಿದರು ಇದು ಓ ಟಿ ಟಿ ಯಲ್ಲಿ ಬಿಡುಗಡೆ ಆಗಿತ್ತು. ಇದೀಗ ಸುಹಾಸಿನಿ ಅವರ ಪತಿ ಮಣಿರತ್ನಂ ನಿರ್ದೇಶಾಂಕ ಮಟ್ಟಿಗೆ ಯಶಸ್ಸನ್ನು ಗಳಿಸಿದ್ದು ಈ ಸಿನಿಮಾ ಓ ಟಿ ಟಿ ಯಲ್ಲಿಯೂ ಕೂಡ ಲಭ್ಯವಿದೆ.

ಇನ್ನು ಕಮಲಾ ಹಾಸನ್ ಹಾಗೂ ಸುಹಾಸಿನಿ ಎವರ್ ಗ್ರೀನ್ ಸ್ಟಾರ್ ಗಳಂತೆ ಈ ಫೋಟೋಗಳಲ್ಲಿ ಕಂಗೊಳಿಸುತ್ತಿದ್ದಾರೆ. ಇವರ ಪೋಟೋಗಳಿಗೆ ಸಾವಿರಾರು ಲೈಕ್ಸ್ ಬಂದಿದ್ದು, ಅಭಿಮಾನಿಗಳು ನಿಮ್ಮನ್ನು ಒಟ್ಟಿಗೆ ನೋಡಿ ಸಂತೋಷವಾಗಿತು ಎಂದು ಕಮೆಂಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *