ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಳ್ಳುವುದಕ್ಕೆ ಅಷ್ಟು ಸುಲಭವಲ್ಲ. ಸಿನಿಮಾರಂಗದಲ್ಲಿ ಸೋಲು ಗೆಲುವು ಎರಡನ್ನು ಸ್ವೀಕರಿಸುವ ಮನೋಭಾವ ಇರಲೇಬೇಕು. ಹೌದು ಸಿನಿಮಾಲೋಕಕ್ಕೆ ಒಮ್ಮೆ ಎಂಟ್ರಿ ಕೊಟ್ಟರೆ ಆ ಲೋಕದಿಂದ ದೂರ ಸರಿಯುವುದು ಅಷ್ಟು ಸುಲಭವಲ್ಲ. ಈಗಾಗಲೇ ಸಾಕಷ್ಟು ಮಂದಿ ಸಿನಿಮಾರಂಗದಲ್ಲಿ ಅನೇಕರು ಬದುಕು ಕಟ್ಟಿಕೊಂಡಿದ್ದಾರೆ. ಕೆಲವರು ಸೋಲಿನ ಹಿಂದೆ ಸೋಲನ್ನು ಕಂಡು ಸಿನಿಮಾ ಲೋಕದ ಸಹವಾಸವೇ ಬೇಡ ಎಂದು ದೂರ ಸರಿದಿದ್ದಾರೆ ಕೂಡ. ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಸಕ್ರಿಯರಾದವರು ನಟಿ ಜ್ಯೋತಿ ರೈ (Jyothi Rai) ಕೂಡ ಒಬ್ಬರು.
ಅಂತಹವರ ಸಾಲಿಗೆ ನಟಿ ಜ್ಯೋತಿ ರೈ ಕೂಡ ಸೇರಿಕೊಳ್ಳುತ್ತಾರೆ. ಟ್ರಡಿಷನಲ್ ಲುಕ್ ನಲ್ಲಿಯೇ ಗಮನ ಸೆಳೆಯುವ ನಟಿಯು ಇದೀಗ ವಿಶೇಷವಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಕನ್ನಡ ಕಿರುತೆರೆ ಹಾಗೂ ಪರಭಾಷೆಯಲ್ಲಿ ಕೂಡ ನಟಿಸಿರುವ ಜ್ಯೋತಿ ರೈ ಅವರ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ತೆರೆ ಮೇಲೆ ಸಾಕಷ್ಟು ವರ್ಷಗಳಿಂದ ನಟಿಸುತ್ತಿದ್ದರೂ ಕೂಡ ಸೋಶಿಯಲ್ ಮೀಡಿಯಾ (Social Media) ದಲ್ಲಿ ಅಷ್ಟೇನು ಆಕ್ಟಿವ್ ಆಗಿಲ್ಲ. ಆದರೆ ಇದೀಗ ವಿಶೇಷ ಫೋಟೋಗಳ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ.
ಹೌದು, ಟ್ರಡಿಷನಲ್ ಲುಕ್ (Traditional Look) ನಲ್ಲಿ ಕಾಣಿಸಿಕೊಳ್ಳುವ ನಟಿ ಜ್ಯೋತಿ ರೈಯವರು ಮಾಡ್ರನ್ ಲುಕ್ ನಲ್ಲಿ ಗಮನ ಸೆಳೆದಿದ್ದಾರೆ. ಮಾಡ್ರನ್ ಲುಕ್ ನಲ್ಲಿರುವ ನಟಿ ಜ್ಯೋತಿ ರೈಯವರು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿಯ ಫೋಟೋಗೆ ಲೈಕ್ಸ್ ಜೊತೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ನಟಿಯೂ ಕಾಮೆಂಟ್ ಸೆಕ್ಷನ್ ಅನ್ನು ಕಾಣದಂತೆ ಮಾಡಿದ್ದಾರೆ. ಜ್ಯೋತಿರೈಯವರ ಮಾಡ್ರನ್ ಫೋಟೋಗಳು ವೈರಲ್ ಆಗಿವೆ.
ಸಣ್ಣ ವಯಸ್ಸಿನಲ್ಲಿಯೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಇವರು, ವಿನು ಬಳಂಜ ಅವರ ಬಂದೇ ಬರತಾವ ಕಾಲ (Bande Baratava Kala) ಧಾರಾವಾಹಿಯಿಂದ ನಟನ ಬದುಕು ಆರಂಭಿಸಿದರು. ನಟಿ ಜ್ಯೋತಿ ರೈಯವರಿಗೆ ಮಂಗಳೂರು ಕನ್ನಡ (Kannada), ತೆಲುಗು (Telugu), ತಮಿಳು (Tamil), ತುಳು (Tulu), ಕೂರ್ಗ್ (Coorg) ಭಾಷೆ ಗೊತ್ತಿದೆ. ಈಗಾಗಲೇ ಬಹುತೇಕ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರವನ್ನು ನಟಿಸಿದ್ದಾರೆ.
ಈಗಾಗಲೇ ‘ಬಂದೆ ಬರತಾವ ಕಾಲ, ( Bande Barataava Kala), ಗೆಜ್ಜೆಪೂಜೆ (Gejje Pooje), ಅನುರಾಗ ಸಂಗಮ (Anuaraga Sangama), ಕನ್ಯಾದಾನ (Kanyadana), ಜೋಗುಳ (Jogula), ಲವಲವಿಕೆ (Lavalavike), ಮೂರುಗಂಟು (Murugantu), ಪ್ರೇರಣಾ (Prerana), ಕಿನ್ನರಿ (Kinnari), ಕಸ್ತೂರಿ ನಿವಾಸ ( Kasturi Nivasa) ಮುಂತಾದ 20ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಹಾಗೂ ‘ಸೀತಾರಾಮ ಕಲ್ಯಾಣ’ (Seetharama Kalyana) ನಟಿಸಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿ ಗಳನ್ನು ಸಂಪಾದಿಸಿಕೊಂಡಿದ್ದಾರೆ.