ಆಸ್ಕರ್ ಇವೆಂಟ್ ಗೆ ಹೋದಾಗ ಜೂನಿಯರ್ NTR ಧರಿಸಿದ್ದ ಕೈಗಡಿಯಾರದ ಬೆಲೆ ಎಷ್ಟು ಗೊತ್ತಾ? ಇದೇ ದುಡ್ಡಲ್ಲಿ 5 ಮನೆ ಖರೀದಿ ಮಾಡಬಹುದು!!

Junior ntr watch price : ಜೂನಿಯರ್ NTR ಧರಿಸಿದ ಕೈಗಡಿಯಾರದ ಬೆಲೆ, ನೀವು ಗಲ್ಲದ ಮೇಲೆ ಬೆರಳಿಡುವಂತೆ ಮಾಡುವುದು ಖಂಡಿತ…! ಅದರ ಬೆಲೆ ಎಷ್ಟು ಗೊತ್ತಾ?ಜೂನಿಯರ್ NTR ಚಿತ್ರರಂಗದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದವರು. ಸೆಲೆಬ್ರಿಟಿಗಳ ಉಡುಗೆ- ತೊಡುಗೆಗಳಿಂದ ಹಿಡಿದು, ಚೈನ್, ಧರಿಸುವ ವಾಚ್, ಹಿಡಿದುಕೊಳ್ಳುವ ಪರ್ಸ್, ಬ್ಯಾಗ್ ಎಲ್ಲದರ ಮೇಲು ಅಭಿಮಾನಿಗಳ ಕಣ್ಣಿರುತ್ತವೆ.

ಸಾಮಾಜಿಕ ಜಾಲತಾಣಗಳಲ್ಲಿ ಇವರನ್ನು ಸಹತ್ರರು ಮಂದಿ ಫಾಲೋ ಮಾಡುತ್ತಾರೆ. ಪ್ರತಿದಿನವೂ ಅವರನ್ನು ನೋಡ ಬಯಸುತ್ತಾರೆ. ಜೂನಿಯರ್ NTR ಕೂಡ ಹೊಸ ಫೋಟೋದಲ್ಲಿ ಸಕ್ಕತ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.ಜೂನಿಯರ್ NTR ಅವರಿಗೆ ವಾಚ್ ಗಳನ್ನು ಧರಿಸುವುದು ತುಂಬಾನೇ ಇಷ್ಟವಂತೆ.

ಅವರಲ್ಲಿ ದುಬಾರಿ ವಾಚ್ಗಳ ಕಲೆಕ್ಷನ್ ಇದೆಯಂತೆ. ಇತ್ತೀಚಿಗಷ್ಟೇ ಹರಿದಾಡುತ್ತಿರುವ ಹೊಸ ಫೋಟೋದಲ್ಲಿ ಜೂನಿಯರ್ NTR ಅವರು ಬ್ಲೂ ಕಲರ್ ಸೂಟ್ ಅನ್ನು ಧರಿಸಿದ್ದಾರೆ. ಇನ್ನು ಅದಕ್ಕೆ ತಕ್ಕನಾದ ವಾಚ್ ಅನ್ನು ಕೂಡ ಧರಿಸಿದ್ದಾರೆ. ನೆಟ್ಟಿಗರು ಆ ವಾಚ್ನ ಬೆಲೆಯನ್ನು ಹುಡುಕಾಡಿದ್ದಾರೆ ಮತ್ತು ಬೆಲೆ ತಿಳಿದ ಬಳಿಕ ಶಾಕ್ ಆಗಿದ್ದಾರೆ.

ಸೆಲೆಬ್ರಿಟಿಗಳು ತಾವು ಭಾಗಿಯಾಗುವ ಕಾರ್ಯಕ್ರಮಗಳಿಗೆ ತಕ್ಕನಾಗಿ ರೆಡಿಯಾಗುತ್ತಾರೆ. ಜೂನಿಯರ್ NTR ಇವರಿಗೆ ವಾಚ್ ಕ್ರೇಜ್ ತುಂಬಾನೇ ಇದ್ದು, ವಿಶೇಷ ಸಂದರ್ಭಗಳಲ್ಲಿ ಮಾತ್ರ ದುಬಾರಿ ಕೈಗಡಿಯಾರಗಳನ್ನು ಧರಿಸುತ್ತಾರಂತೆ. ಇದೀಗ ಅವರು ಅಮೆರಿಕಾಕ್ಕೆ ತೆರಳಿದ್ದಾರೆ.

ಲಾಸ್ ಏಂಜಲೀಸ್​ನಲ್ಲಿ ನಡೆಯಲಿರುವ ‘ಆಸ್ಕರ್ ಅವಾರ್ಡ್’ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಾರೆ. ಅದಕ್ಕೂ ಮೊದಲು ಅವರು ಶೇರ್ ಮಾಡಿರುವ ಫೋಟೋದಲ್ಲಿ ಕಾಣುವ ಹಾಗೆ ಅವರು ಧರಿಸಿರುವುದು ಪೆಟೆಕ್ ಫಿಲಿಫ್ ಕಂಪನಿಯ ವಾಚ್. ಸ್ವಿಜರ್ಲ್ಯಾಂಡ್ ನಲ್ಲಿ ಇದರ ಪ್ರಧಾನ ಕಛೇರಿ ಇದ್ದು, 1839ರಲ್ಲಿ ಸ್ಥಾಪನೆಯಾದ ಕಂಪನಿ ಇದು.

ರಾಜ ಮೌಳಿ ನಿರ್ದೇಶನದ RRR ಸಿನಿಮಾದ ಜನಪ್ರಿಯವಾದ ಹಾಡೊಂದು ಆಸ್ಕರ್ ರೇಸ್ ನಲ್ಲಿದೆ. ಆಸ್ಕರ್ ಕಾರ್ಯಕ್ರಮಕ್ಕೆ ಭಾಗಿಯಾಗುವುದಕ್ಕೂ ಮುನ್ನ ಹಂಚಿಕೊಂಡಿರುವ ಫೋಟೋದಲ್ಲಿ ಕಾಣುವ ಹಾಗೆ, ಜೂನಿಯರ್ NTR ಅವರು ಧರಿಸಿರುವ ಕೈಗಡಿಯಾರದ ಬೆಲೆ ಬರೋಬ್ಬರಿ ಎರಡು ಪಾಯಿಂಟ್ ಐದು ಕೋಟಿ ರೂಪಾಯಿಗಳು ಎಂದು ಅಂದಾಜಿಸಲಾಗಿದೆ.

ಈ ವಿಚಾರವೂ ತಿಳಿದ ಬಳಿಕ ನೆಟ್ಟಿಗರು ಗಲ್ಲದ ಮೇಲೆ ಬೆರಳಿಟ್ಟು ಕುಳಿತಿದ್ದಾರಂತೆ. ತಮ್ಮ ಮಾಸಿಕ ಸಂಬಳದ ಎಷ್ಟು ಪಟ್ಟು ಹೆಚ್ಚಿದೆ ಎಂಬುದನ್ನು ಲೆಕ್ಕ ಹಾಕುತ್ತಿದ್ದಾರಂತೆ.ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಈ ದುಬಾರಿ ಬೆಲೆಯ ವಾಚ್ನ ಕುರಿತಾಗಿ ಸಾಕಷ್ಟು ಚರ್ಚೆಗಳನ್ನು ನಡೆಸುತ್ತಿದ್ದಾರಂತೆ.

Leave a Reply

Your email address will not be published. Required fields are marked *