ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳು ಮತ್ತು ಮಹಿಳೆಯರಿಗೆ ಅನುಕೂಲವಾಗುವ ಮೀಸಲಾತಿ ವ್ಯವಸ್ಥೆಯನ್ನು ಪರಿಚಯಿಸಿದ ಕರ್ನಾಟಕದ ಹೆಮ್ಮೆಯ ಪ್ರಾದೇಶಿಕ ಪಕ್ಷವಿದು.
ಮತಭಾಂದವರ ಆಶೀರ್ವಾದದಿಂದ ಸರ್ಕಾರವನ್ನು ನಡೆಸುವ ಸೌಭಾಗ್ಯ ದೊರೆತ ಎಲ್ಲಾ ಕಾಲದಲ್ಲಿಯೂ ದೇಶ ಹಾಗು ರಾಜ್ಯದ ಸುಖ-ಶಾಂತಿಗಳಿಗಾಗಿ ದುಡಿದು ಜನರ ವಿಶ್ವಾಸವನ್ನು ಗೆದ್ದಿದೇವೆ. ಜನರೊಂದಿಗೆ, ಜನರಿಗಾಗಿ ಸದಾ ಇದ್ದೇವೆ, ಇರುತ್ತೇವೆ.
ಕರ್ನಾಟಕ ರಾಜ್ಯದ ಸಾರ್ವತ್ರಿಕ ಚುನಾವಣೆ ಹತ್ತಿರದಲ್ಲಿದ್ದು, ರಾಜ್ಯದಲ್ಲಿ ಕನ್ನಡಿಗರಿಗೆ ಆಗುತ್ತಿರುವ ಮೋಸ, ಭಾಷಾ ಹೇರಿಕೆ, ಬೆಲೆ ಏರಿಕೆ, ಧಾರ್ಮಿಕ ಸಂಘರ್ಷ ಇವೆಲ್ಲವೂ ಕೊನೆಯಾಗುವ ಸಮಯವಿದು.
ಕರ್ನಾಟಕದ ಉಳಿವಿಗಾಗಿ ಜೆಡಿಎಸ್ ಗೆಲುವು ಅವಶ್ಯವಾಗಿದೆ.
(ಪಕ್ಷದ ಪ್ರಣಾಳಿಕೆ)
ಜೆಡಿಎಸ್ ಪಕ್ಷ ನೀಡಿರುವ ಭರವಸೆಗಳನ್ನು ನನಸಾಗಿಸಲು ಶ್ರದ್ದಾ-ಭಕ್ತಿಯಿಂದ ಜನರ ಸೇವೆ ಮಾಡಲು ತಮ್ಮ ಆಶೀರ್ವಾದ ಕೋರುತ್ತಿದ್ದೇನೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜನರ ಕಷ್ಟ-ಕಾರ್ಪಣ್ಯಗಳಿಗೆ ಸದಾ ದುಡಿಯುವ ಹಂಬಲದಿಂದ ತಮ್ಮ ಅಮೂಲ್ಯವಾದ ಮತವನ್ನು ಕೋರುತ್ತಿದ್ದೇನೆ.
ಕ್ಷೇತ್ರದ ಅಭಿವೃದ್ಧಿಗೆ ಸದಾ ದುಡಿಯುವ –
ಹೆಚ್.ಪಿ. ರಾಜಗೋಪಾಲ ರೆಡ್ಡಿ.