ಸಿನಿಮಾರಂಗದಲ್ಲಿ ಬದುಕು ಕಟ್ಟಿಕೊಂಡವರು ಹಲವರು ಇದ್ದಾರೆ.ಇನ್ನು ಕೆಲವರು ತಮ್ಮ ತಂದೆ ತಾಯಿಯಂತೆ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು ನೇಮ್ ಫೇಮ್ ಗಳಿಸಿಕೊಂಡಿದ್ದಾರೆ. ಸದ್ಯಕ್ಕೆ ಬಾಲಿವುಡ್ ರಂಗದಲ್ಲಿ ಬೇಡಿಕೆಯಲ್ಲಿರುವ ನಟಿಯರ ಪೈಕಿ ಜಾನ್ವಿ ಕಪೂರ್ ಕೂಡ. ಆಗಾಗ ಹಾಟ್ ಫೋಟೋ ಮೂಲಕ ಪಡ್ಡೆ ಹೈಕಳ ನಿದ್ದೆ ಕದಿಯುವ ಈ ಬೆಡಗಿಗೆ ಸಾಕಷ್ಟು ಸಂಖ್ಯೆಯ ಅಭಿಮಾನಿಗಳು ಇದ್ದಾರೆ.
ಇತ್ತೀಚೆಗಷ್ಟೇ ನಟಿ ಜಾನ್ವಿ ಕಪೂರ್ ಕೆಂಪು ಬಣ್ಣದ ಉಡುಗೆಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಕೆಂಪು ಬಣ್ಣದ ಉಡುಗೆಯಲ್ಲಿ ಕ್ಯಾಮೆರಾಗೆ ಹಾಟ್ ಆಗಿ ಪೋಸ್ ಕೊಡುತ್ತಿರುವ ವಿಡಿಯೋವೊಂದ ನೆಟ್ಟಿಗರ ಗಮನ ಸೆಳೆದಿತ್ತು. ಕ್ಯಾಮೆರಾಗೆ ಹಾಟ್ ಆಗಿ ಪೋಸ್ ಕೊಡುತ್ತಿರುವ ಈ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾದ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು.
ನಟಿಯ ಹಾಟ್ ಅವತಾರಕ್ಕೆ ನೆಟ್ಟಿಗರು ಕ್ಲೀನ್ ಬೋಲ್ಡ್ ಆಗಿದ್ದರು. ಆಗಾಗ ನಟಿಯ ಬೋಲ್ಡ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತದೆ. ಜಾನ್ವಿ ಕಪೂರ್ ಬೇರೆ ಯಾರು ಅಲ್ಲ, ದಕ್ಷಿಣ ಭಾರತದ ಖ್ಯಾತ ನಟಿ ಶ್ರೀದೇವಿ ಮತ್ತು ನಿರ್ಮಾಪಕ ಬೋನಿ ಕಪೂರ್ ಅವರ ಮುದ್ದಿನ ಮಗಳು. ತನ್ನ ತಾಯಿಯ ಅಗಲುವಿಕೆಯ ನಂತರದಲ್ಲಿ ಬಾಲಿವುಡ್ ಗೆ ಎಂಟ್ರಿ ಕೊಟ್ಟರು.
ಧಡಕ್ ಸಿನಿಮಾದ ಮೂಲಕ ತೆರೆ ಮೇಲೆ ಕಾಣಿಸಿಕೊಂಡ ನಂತರದಲ್ಲಿ ಈ ಸಿನಿಮಾವು ಮರಾಠಿ ಸಿನಿಮಾ ಸೈರಾಟ್ ನ ರಿಮೇಕ್ ಆಗಿತ್ತು. ಮೊದಲ ಸಿನಿಮಾದಲ್ಲಿ ಯಶಸ್ಸು ಕಂಡ ಜಾನ್ವಿ ಕಪೂರ್, ಗುಂಜನ್ ಸಕ್ಸೆನಾ : ದಿ ಕಾರ್ಗಿಲ್ ಗರ್ಲ್ ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾ ಅಂದುಕೊಳ್ಳುವಷ್ಟು ಯಶಸ್ಸು ಕಾಣಲಿಲ್ಲ. ಸದ್ಯಕ್ಕೆ ಬಾಲಿವುಡ್ನಲ್ಲಿ ಬ್ಯಾಕ್ ಟು ಬ್ಯಾಕ್ ಪ್ರಾಜೆಕ್ಟ್ಗಳನ್ನು ಮಾಡುತ್ತಾ ಸಖತ್ ಬ್ಯುಸಿಯಾಗಿದ್ದಾರೆ.
ಆದರೆ ಇದೀಗ ಸೌತ್ ಸಿನಿಮಾ ಎಂಟ್ರಿಗೆ ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಜೂನಿಯರ್ ಎನ್ಟಿಆರ್ ಮುಂದಿನ ಸಿನಿಮಾಗೆ ಹೀರೋಯಿನ್ ಆಗಲಿದ್ದಾರೆ ಎನ್ನಲಾಗಿದೆ. ಗುಡ್ ಲಕ್ ಜೆರ್ರಿ ಸಿನಿಮಾದ ಪ್ರೊಮೋಷನ್ ಸಮಯದಲ್ಲಿ ಜಾನ್ವಿ ಕಪೂರ್ ತಮ್ಮ ಹುಡುಗ ಹೇಗಿರಬೇಕು ಎಂದು ರಿವೀಲ್ ಮಾಡಿದ್ದರು. ಈ ವೇಳೆ ಮಾತನಾಡಿದ್ದ ನಟಿ ಜಾನ್ವಿ ಕಪೂರ್, ‘ ನನ್ನ ಕೆಲಸಗಳನ್ನು ಮೆಚ್ಚಿ ಪ್ರೋತ್ಸಾಹ ನೀಡುವಂತಹ ಹುಡುಗ ಆಗಿರಬೇಕು.
ಚೆನ್ನಾಗಿ ತಮಾಷೆ ಮಾಡಬೇಕು, ಸೆನ್ಸ್ ಆಫ್ ಹುಮರ್ ಚೆನ್ನಾಗಿರಬೇಕು, ನನ್ನನ್ನು ನೋಡಿ ಸದಾ ನಗುತ್ತಿರಬೇಕು. ಯಾವಾಗಲೂ ಹೊಸದನ್ನು ಹೇಳಿಕೊಡುವ, ಪ್ರೋತ್ಸಾಹ ನೀಡಿ ಯಾವಾಗಲೂ ಜೊತೆಯಾಗಿರುವ ಹುಡುಗ ನನ್ನ ಜೊತೆಗೆ ಇರಬೇಕು, ಸಂಗಾತಿಯಾಗಿರಬೇಕು’ ಎಂದಿದ್ದರು. ಶ್ರೀದೇವಿ ಮಗಳು ಜಾನ್ವಿ ಕಪೂರ್ ಗೆ ಸಾಕಷ್ಟು ಬೇಡಿಕೆಯಿದ್ದು, ತನ್ನ ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದಾರೆ.