ಜೈಲರ್ ಚಿತ್ರದ ವಿಲನ್ ಗೆ ಸಿಕ್ಕ ಸಂಭಾವನೆಯನ್ನು ನೀವು ಕೇಳಿದರೆ ಶಾಕ್ ಆಗ್ತೀರಾ. ತಮಿಳು ಚಿತ್ರರಂಗದಲ್ಲಷ್ಟೇ ಅಲ್ಲದೆ ಹಿಡಿ ದೇಶಕ್ಕೆ ಸೂಪರ್ ಸ್ಟಾರ್ ಆದ ನಟ ರಜನಿಕಾಂತ್ ಅವರ ಜೈಲರ್ ಚಿತ್ರ ಭರ್ಜರಿ ಯಶಸ್ಸನ್ನು ಕಂಡಿದೆ. ಇಲ್ಲಿಯವರೆಗೆ ನೂರಾರು ಕೋಟಿ ಆದಾಯವನ್ನು ಸಹ ಗಳಿಸಿದೆ. ದೇಶ ವಿದೇಶಗಳಲ್ಲಿ ಬಹು ಭಾಷೆಯಲ್ಲಿ ತೆರೆಕಂಡ ಈ ಚಿತ್ರಕ್ಕೆ ರಜನಿಕಾಂತ್ ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್ ಕೂಡ ಸಿಕ್ಕಿದೆ.
ಜೈಲರ್ ಚಿತ್ರದಲ್ಲಿ ಖಳನಾಯಕನಾಗಿ ಅಭಿನಯಿಸಿರುವ ವಿನಾಯಕನ್ ಅವರು ತಮ್ಮ ವಿಭಿನ್ನ ಪಾತ್ರದ ಮೂಲಕ ಎಲ್ಲರನ್ನ ಮೆಚ್ಚುಗೆಗೊಳಿಸಿದ್ದಾರೆ. ಚಿತ್ರದ ವಿಪರೀತ ಯಶಸ್ಸಿನ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಪಕರು, ಪ್ರಮುಖ ಕಲಾವಿದರು ಹಾಗೂ ತಂತ್ರಜ್ಞರಿಗೆ ಅವರ ನಿರೀಕ್ಷೆಗೂ ಮೀರಿದ ಸಂಭಾವನೆ ಸಿಕ್ಕಿದೆ. ಹಾಗೂ ಐಷಾರಾಮಿ ಕಾರು ಗಿಫ್ಟ್ ಆಗಿ ಸಿಕ್ಕಿದೆ. ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಶೇಷವಾಗಿ ವೈರಲ್ ಆಗಿದೆ.
ಹಾಗಾದರೆ ಜೈಲರ್ ಚಿತ್ರದ ಖಳನಾಯಕನಾಗಿ ನಟಿಸಿರುವ ವಿನಾಯಕನ್ ಅವರಿಗೆ ಎಷ್ಟು ಸಂಭಾವನೆ ಸಿಕ್ಕಿದೆ ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ಮೂಲಗಳ ಪ್ರಕಾರ ಮೊದಲು ವಿನಾಯಕನ್ ಅವರಿಗೆ 35 ಲಕ್ಷ ರೂಪಾಯಿ ನೀಡಲಾಗಿತ್ತು, ಆದರೆ ಜೈಲರ್ ಚಿತ್ರದ ಯಶಸ್ಸಿನ ಬಳಿಕ ಅದರ ಮೂರು ಪಟ್ಟು ಹೆಚ್ಚಿನ ಹಣವನ್ನು ಕೊಡಲಾಗಿದೆ ಎನ್ನುವ ಮಾಹಿತಿ ಲಭ್ಯವಿದೆ. ಸುಮಾರು ಒಂದು ಕೋಟಿ ರೂಪಾಯಿ ಸಂಬಾವನೆಯನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.
ಆದರೆ ವಿನಾಯಕನ ಅವರ ಅಭಿಮಾನಿಗಳು ಮಾತ್ರ ಇತರೆ ಪ್ರಮುಖ ಕಲಾವಿದರಿಗೆ ದೊಡ್ಡ ಮಟ್ಟದ ಸಂಭಾವನೆಯ ಜೊತೆಗೆ ಐಷಾರಾಮಿ ಕಾರುಗಳನ್ನು ಕೂಡ ನೀಡಲಾಗಿದ್ದು ವಿನಾಯಕನ್ ಅವರಿಗೆ ನೀಡಿರುವ ಸಂಭಾವನೆ ಕಡಿಮೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಏನೇ ಇರಲಿ, ಜೈಲರ್ ಚಿತ್ರ ಎಂದು ಸೂಪರ್ ಹಿಟನ್ನ ಕಂಡಿದೆ. ಪಾತ್ರಧಾರಿಗಳು ಕೂಡ ನಿರೀಕ್ಷೆಗಿಂತ ಹೆಚ್ಚು ಸಂಭಾವನೆಯನ್ನು ಪಡೆದುಕೊಂಡು ಸಂತಸದಲ್ಲಿದ್ದಾರೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಮತ್ತು ಶೇರ್ ಮಾಡಿ.