ಬೆಲ್ಲ ತಿನ್ನುವ ಪ್ರತಿ ಕುಟುಂಬಕ್ಕೆ ಈ ಮಾಹಿತಿ ತಿಳಿದಿರಲಿ! ವೈದ್ಯ ಲೋಕಕ್ಕೆ ಸವಾಲಾದ ಬೆಲ್ಲ, ತಪ್ಪದೇ ತಿಳಿದುಕೊಳ್ಳಿ!!

ಪ್ರತಿ ದಿನವೂ ನಾವು ಸೇವಿಸುವ ಆಹಾರವು ನಮ್ಮ ದಿನನಿತ್ಯದ ಕಾರ್ಯ ಚಟುವಟಿಕೆಗಳಿಗೆ ಶಕ್ತಿಯನ್ನು ನೀಡುತ್ತದೆ. ಮಾನಸಿಕ ಹಾಗೂ ದೈಹಿಕ ಆರೋಗ್ಯದ ಸುಸ್ಥಿತಿಗೆ ಆಹಾರವೇ ಮೂಲಾಧಾರ. ಸ್ವಚ್ಛವಾದ, ಪೌಷ್ಟಿಕ ಆಹಾರಗಳ ಸೇವನೆಯಿಂದ ಅಪಾಯವಿಲ್ಲ ಎನ್ನುತ್ತಾರೆ. ಆದರೆ ‘ಅತಿಯಾದರೆ ಅಮೃತವು ವಿಷವಾಗುತ್ತದೆ’ ಎಂಬ ಮಾತನ್ನೊಮ್ಮೆ ನೆನಪಿಸಿಕೊಳ್ಳೋಣ.

ಪ್ರತಿಯೊಂದು ಆಹಾರಕ್ಕೂ ತೆಗೆದುಕೊಳ್ಳುವ ಸಮಯ, ಕ್ರಮ ಮತ್ತು ಪ್ರಮಾಣವಿದೆ. ನೀವು ಪ್ರತಿನಿತ್ಯವೂ ಬೆಲ್ಲವನ್ನು ಉಪಯೋಗಿಸುತ್ತಿದ್ದೀರಾ? ಯಾವ ಪ್ರಮಾಣದಲ್ಲಿ ಸೇವಿಸುತ್ತಿದ್ದೀರಾ? ಬೆಲ್ಲದ ಔಷಧೀಯ ಗುಣಗಳ ಬಗ್ಗೆ ಮಾಹಿತಿ ಇದೆಯಾ?… ವೈದ್ಯಕೀಯ ಲೋಕವು ಬೆಲ್ಲದ ಬಗೆಗೆ ಹೇಳುವ ಕೆಲವೊಂದಿಷ್ಟನ್ನು ತಿಳಿದುಕೊಳ್ಳೋಣ ಬನ್ನಿ.

ನಿಯಮಿತವಾದ ಬೆಲ್ಲದ ಸೇವನೆಯು ಶಕ್ತಿದಾಯಕವಷ್ಟೇ ಅಲ್ಲದೆ ಹಲವು ರೋಗಗಳ ನಿವಾರಕವೂ ಹೌದು. ರಕ್ತವು ಶುದ್ಧವಾಗಿ ಹರಿಯುವಲ್ಲಿ ಸಹಕರಿಸುತ್ತದೆ. ಯಕೃತ್ತಿನ ಕೆಲಸದ ಹೊರೆಯನ್ನು ತಗ್ಗಿಸುತ್ತದೆ. ದೇಹದಿಂದ ಹಾನಿಕಾರಕ ಜೀವಾಣುಗಳನ್ನು ಹೊರ ಹಾಕುವುದರ ಮೂಲಕ ಶರೀರದ ಅಂಗಾಂಗಗಳು ವಿಷರಹಿತವಾಗಿರುವಲ್ಲಿ ಸಹಕರಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರೊಂದಿಗೆ ಉತ್ಕರ್ಷ ನಿಯಂತ್ರಕ ಸೆಲೇನಿಯಮನ್ನು ಒಳಗೊಂಡಿರುತ್ತದೆ. ಸೋಂಕುಗಳ ವಿರುದ್ಧ ಪ್ರತಿರೋಧವನ್ನು ಹೆಚ್ಚಿಸುತ್ತದೆ.

ಬೆಲ್ಲವನ್ನು ತಿನ್ನುವ ಪ್ರತಿ ಕುಟುಂಬವು ತಿಳಿದುಕೊಳ್ಳಲೇ ಬೇಕಾದ ಮಾಹಿತಿ.. Jaggery health benefits :-

ಬೆಲ್ಲವು ಕಬ್ಬಿಣಾಂಶ, ಸೋಡಿಯಂ, ಪೊಟ್ಯಾಶಿಯಂಗಳನ್ನು ಹೊಂದಿರುವುದರಿಂದ ಸೇವಿಸಿದ ತಕ್ಷಣವೇ ದೇಹಕ್ಕೆ ಶಕ್ತಿಯನ್ನು ನೀಡಬಲ್ಲದು. ದೇಹದಲ್ಲಿನ ರಕ್ತದೊತ್ತಡ ಮತ್ತು ಆಸಿಡ್ ಪ್ರಮಾಣವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ. ಹಾಲು ಅಥವಾ ಶುಂಠಿಯೊಂದಿಗೆ ಬೆಲ್ಲವನ್ನು ಸೇರಿಸಿಕೊಂಡು ತಿಂದಾಗ ಕೀಲು ನೋವು ಕಡಿಮೆಯಾಗುತ್ತದೆ. ಮೂಳೆಗಳು ಬಲಯುಕ್ತವಾಗುತ್ತವೆ. ಚರ್ಮದ ರಕ್ಷಣೆಗೆ ರಾಮಬಾಣವಾದ ಬೆಲ್ಲವು ಮೊಡವೆಗಳನ್ನು, ಕಪ್ಪು ಚುಕ್ಕೆಗಳನ್ನು, ಚರ್ಮ ಸುಕ್ಕುಗಟ್ಟುವುದನ್ನು ತಡೆಹಿಡಿಯುತ್ತದೆ.

ಬೆಲ್ಲವು ಜೀರ್ಣಕಾರಿಯದ್ದರಿಂದ ನೈಸರ್ಗಿಕವಾಗಿಯೇ ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ಹೀಗೆ ಹತ್ತು ಹಲವು ಸಮಸ್ಯೆಗಳಿಗೆ ದಿವ್ಯ ಔಷಧಿಯಾದ ಬೆಲ್ಲವನ್ನು ಪ್ರತಿನಿತ್ಯವು ನಿಯಮಿತವಾಗಿ ಸೇವಿಸುವುದು ಒಳಿತು. ಬೆಲ್ಲವನ್ನು ಬರಿದಾಗಿ ತಿನ್ನಲು ಸೇರದಿದ್ದಲ್ಲಿ ಪಾಯಸ, ಕೀರು, ಹಲ್ವಾ ಹಾಗೂ ಇನ್ನಿತರ ಸಿಹಿ ತಿನಿಸುಗಳ ತಯಾರಿಕೆಯಲ್ಲಿ ಬಳಸುವುದರಿಂದ ದೇಹವನ್ನು ಸೇರುತ್ತದೆ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ..

Leave a Reply

Your email address will not be published. Required fields are marked *