ನಟ ಪ್ರಭಾಸ್ ಅಯೋಧ್ಯೆ ಉದ್ಘಾಟನಾ ಕಾರ್ಯಕ್ರಮದ ಅನ್ನಪ್ರಸಾದಕ್ಕೆ ಎಷ್ಟು ಕೋಟಿ ಹಣ ನೀಡಿದ್ದಾರೆ ಗೊತ್ತಾ ಇದು ನಿಜವೇ?

ಸಿನಿಮಾರಂಗದಲ್ಲಿ ಒಂದೇ ಒಂದು ಸಿನಿಮಾದ ಮೂಲಕ ಯಶಸ್ಸು ಕಂಡಪ್ರಭಾಸ್. ಬಾಹುಬಲಿ (Bahubali) ಸಿನಿಮಾದಲ್ಲಿ ನಟಿಸಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮೆರೆದ ನಟ ಪ್ರಭಾಸ್ ಅವರು ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. 2023ರಲ್ಲಿ ನಟ ಪ್ರಭಾಸ್ (Prabhas) ನಟನೆಯ ಆದಿ ಪುರುಷ್ (Aadipurush) ದೊಡ್ಡ ನಿರೀಕ್ಷೆ ಹೊತ್ತು ಚಿತ್ರ ಮಂದಿರದಲ್ಲಿ ಪ್ರದರ್ಶನ ಕಂಡಿದ್ದು ಪ್ರೇಕ್ಷಕರ ನಿರೀಕ್ಷೆ ಹುಸಿ ಮಾಡಿತ್ತು.

ರಾಮಾಯಣದ ಅನೇಕ ಸಂಗತಿ ರೂಪು ರೇಖೆ ಎಲ್ಲ ವಿಭಿನ್ನವಾಗಿ ತೋರಿಸುವ ನಡುವಲ್ಲಿ ಆಧುನಿಕತೆಯ ಪರಾಗ ಸ್ಪರ್ಷ ಸಿನಿಮಾ ಮೂಡ್ ಅನ್ನೇ ಹಾಳು ಮಾಡಿತ್ತು.ಒಂದಿಷ್ಟು ಜನ ನಟನೆಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದರೂ ನಿರ್ದೇಶಕರ ಎಡವಟ್ಟಿಗೆ ಪ್ರಭಾಸ್ ಕೂಡ ಅನೇಕ ಟೀಕೆ ಎದುರಿಸುವಂತಾಗಿದೆ. ಈ ನಡುವೆ ನಟ ಪ್ರಭಾಸ್ ಅವರು ಅಯೋಧ್ಯೆಯ ರಾಮ ಮಂದಿರ ವಿಚಾರದಲ್ಲೂ ಕೂಡ ಸುದ್ದಿಯಾಗುತ್ತಿದ್ದಾರೆ.

ಅನೇಕ ವರ್ಷಗಳಿಂದ ಭಾರತೀಯ ಹೃದಯಗಳು ಈ ಕಾರ್ಯಕ್ರಮ ನಿರೀಕ್ಷೆಯಲ್ಲಿತ್ತು. ಇದೀಗ ಹೆಚ್ಚಿನ ಜನರು ಈ ಪರ್ವಕಾಲಕ್ಕೆ ಕಾದು ಕುಳಿತ್ತಿದ್ದಾರೆ. ಅದರ ನಡುವೆ ರಾಮ ಮಂದಿರಕ್ಕೆ ದಾನ ನೀಡಿದವರನ್ನು ಕೂಡ ಸ್ಮರಿಸಲಾಗುತ್ತಿದೆ. ಸಾವಿರಾರು ಜನರ ಸತತ ಪರಿಶ್ರಮದ ಫಲವಾಗಿ ಅನೇಕ ವರ್ಷಗಳ ಹೋರಾಟದ ಫಲವಾಗಿ ರಾಮಜನ್ಮ ಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣವಾಗುತ್ತಿದ್ದು ದೇಶದ ಅನೇಕ ಭಾಗದಿಂದ ಭಕ್ತರು ಅಯೋಧ್ಯೆಗೆ ಆಗಮಿಸಲು ಕಾತುರರಾಗುತ್ತಿದ್ದಾರೆ.

ಈ ನಡುವೆ ನಟ ಪ್ರಭಾಸ್ ಅವರು ಕೂಡ ಅಯೋಧ್ಯೆಯ ರಾಮಮಂದಿರ (Ayodhye Ramamandira) ನಿರ್ಮಾಣ ಹಿನ್ನೆಲೆಯಲ್ಲಿ ಬಂದ ಭಕ್ತರಿಗೆ ಊಟದ ವ್ಯವಸ್ಥೆ ಕಲ್ಪಿಸಲು ಹಣ ಧಾನವಾಗಿ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ನಟ ಪ್ರಭಾಸ್ ಅವರು ತಮ್ಮ ಅನೇಕ ಸಿನೆಮಾಗಳಲ್ಲಿ ಸೆಟ್ ನವರಿಗೆ ತಮ್ಮ ಖರ್ಚಿನಲ್ಲೇ ಊಟ ನೀಡಿದ್ದಾರೆ ಎಂಬ ಸುದ್ದಿ ವೈರಲ್ ಆದ ಬೆನ್ನಲ್ಲೇ ಅಯೋಧ್ಯೆ ರಾಮ ಮಂದಿರ ಸುದ್ದಿ ಕೂಡ ಟ್ರೆಂಡ್ ಆಗುತ್ತಿದೆ.

ನಟ ಪ್ರಭಾಸ್ ಅವರು ರಾಮಮಂದಿರಕ್ಕೆ ಉದ್ಘಾಟನ ಕಾರ್ಯಕ್ರಮಕ್ಕೆ ಬರುವ ಭಕ್ತರಿಗೆ ಉಚಿತ ಊಟದ ವ್ಯವಸ್ಥೆ ನೀಡುವ ಸಲುವಾಗಿ 50 ಕೋಟಿ ರೂಪಾಯಿಯನ್ನು ದೇಣಿಯಾಗಿ ನೀಡುತ್ತಿದ್ದಾರೆ ಎಂಬ ಮಾಹಿತಿಯೊಂದು ಇತ್ತೀಚೆಗಷ್ಟೇ ವೈರಲ್ ಆಗಿತ್ತು. ಹೀಗಾಗಿ ಪ್ರಭಾಸ್ ದಾನವಾಗಿ ಇಷ್ಟು ಮೊತ್ತ ನೀಡ್ತಾರಾ ಎಂಬ ರಿಯಾಲಿಟಿ ಚೆಕ್ ಅನ್ನು ಇತ್ತೀಚೆಗೆ ಸುದ್ದಿ ಮಾಧ್ಯಮ ಒಂದು ಕಂಡುಹಿಡಿಯ ಹೊರಟಿದ್ದ ಹಿನ್ನೆಲೆಯಲ್ಲಿ ಅಸಲಿ ಮಾಹಿತಿ ಹೊರ ಬಿದ್ದಿದೆ.

50ಕೋಟಿ ಹಣ ನೀಡ್ತಾರೆ ಎಂಬ ವಾದದಲ್ಲಿ ಅದೆಷ್ಟು ಸತ್ಯವಿದೆ ಎಂದು ತಿಳಿಯುವ ಸಲುವಾಗಿ ಪ್ರಭಾಸ್ ಆಪ್ತ ಮೂಲಗಳ ಬಳಿ ದಾಖಲೆ ಕಲೆ ಹಾಕಲಾಗಿದೆ. ಆ ಮೂಲಕ ಈ ಎಲ್ಲ ಮಾಹಿತಿ ಫೇಕ್ ಎಂಬುದು ತಿಳಿದು ಬಂದಿದೆ. ಈ ಬಗ್ಗೆ ಪ್ರಭಾಸ್ ಕೂಡ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಳ್ಳದೇ ಇದ್ದು ಇದೊಂದು ಸುಳ್ಳು ಸುದ್ದಿ ಎಂಬುದಕ್ಕೆ ಪುಷ್ಟಿ ನೀಡಿದಂತಿದೆ.

ಅಯೋಧ್ಯೆಯ ರಾಮಮಂದಿರಕ್ಕೆ ದೇಶ ವಿದೇಶದಿಂದ ರಾಮ ಭಕ್ತರು ಅಪಾರ ದೇಣಿಗೆ ನೀಡಿದ್ದಾರೆ. ಆದರೆ ಸರಕಾರದ ಹಣ ಇದಕ್ಕೆ ವ್ಯಯವಾಗಿಲ್ಲ ಎಂಬ ಮಾಹಿತಿ ಸಹ ವೈರಲ್ ಆಗಿತ್ತು. ಜ. 22ಕ್ಕೆ ಅದ್ಧೂರಿಯಾಗಿ ಈ ಕಾರ್ಯಕ್ರಮ ನೆರವೇರಲಿದ್ದು ಸೆಲೆಬ್ರಿಟಿಗಳು, ರಾಜಕಾರಣಿಗಳು, ಕಲಾಫೋಷಕರು, ದೇಶದ ಗಣ್ಯರು ಸೇರಿದಂತೆ ಅನೇಕ ವಿದೇಶಿಗರು ಕೂಡ ಪಾಲ್ಗೊಳ್ಳುವ ಸಾಧ್ಯತೆ ಇದೆ ಎನ್ನಬಹುದು.

Leave a Reply

Your email address will not be published. Required fields are marked *