ಮಾರುಕಟ್ಟೆಗೆ ಬಿಡುಗಡೆಯಾದ ಐಫೋನ್ 15 ಹಾಗೂ ಐಫೋನ್ 15 ಪ್ಲಸ್ ಸ್ಮಾರ್ಟ್ ಫೋನ್ ಗಳು, ಬೆಲೆ ಎಷ್ಟು ಗೊತ್ತಾ?

ಮಾರುಕಟ್ಟೆಯಲ್ಲಿ ಬ್ರಾಂಡ್ ಸೃಷ್ಟಿಸಿರುವ ಆಪಲ್ ಐಫೋನ್ ಗಳನ್ನು ಖರೀದಿ ಮಾಡುವುದು ಎಲ್ಲರ ಕನಸು. ದುಬಾರಿ ಬೆಲೆಯ ಐಫೋನ್ ಪ್ರತಿಷ್ಠೆಯ ಪ್ರಶ್ನೆ ಕೂಡ ಹೌದು. ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಆಪಲ್ ಐಫೋನ್ ತನ್ನದೇ ಗ್ರಾಹಕರನ್ನು ಹೊಂದಿದ್ದು, ಆದರೆ ಇದೀಗ ಬಹು ನಿರೀಕ್ಷೆಯ ಐಫೋನ್ 15(iPhone 15), ಐಫೋನ್ 15 ಪ್ಲಸ್ (iPhone 15 Plus) ಐಫೋನ್‌ಗಳನ್ನು ಜಾಗತಿಕ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

ಪ್ರತಿ ವರ್ಷವು ಆಪಲ್ ಕಂಪನಿಯ (Apple) ಸೆಪ್ಟೆಂಬರ್‌ನಲ್ಲಿ ಹೊಸ ಮಾದರಿಯ ಐಫೋನ್‌ಗಳನ್ನು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ. ಆದರಂತೆ ಈ ವರ್ಷ ಕೂಡ ಈ ಐಫೋನ್‌15 ಎಲ್ಲ ಮಾದರಿಯ ಫೋನ್‌ಗಳನ್ನು ಆಯಪಲ್‌ ಇವೆಂಟ್‌ನಲ್ಲಿ (Apple Event 2023) ಲಾಂಚ್ ಮಾಡುವಲ್ಲಿ ಯಶಸ್ವಿಯಾಗಿವೆ.

ಐಫೋನ್ 15(iPhone 15), ಐಫೋನ್ 15 ಪ್ಲಸ್ (iPhone 15 Plus) ಈ ಎರಡು ಮಾದರಿಯಲ್ಲಿ ಹೊಸ ಹೊಸ ಫೀಚರ್ಸ್ ಗಳನ್ನು ಕಾಣಬಹುದಾಗಿದೆ. ಕಳೆದ ಮಾಡರಿಗಿಂತ ಈ ಮಾದರಿಯಲ್ಲಿ ಹಲವಾರು ಹಾರ್ಡ್‌ವೇರ್ ಅಪ್‌ಗ್ರೇಡ್‌ಗಳನ್ನು ಹೊಂದಿವೆ. A16 ಬಯೋನಿಕ್ ಚಿಪ್‌ಸೆಟ್, ಡೈನಾಮಿಕ್ ಐಲ್ಯಾಂಡ್ ಮತ್ತು 48-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ.

ಆಯಪಲ್‌ನ ಎಲ್ಲಾ ಐಫೋನ್ ಮಾಡೆಲ್‌ಗಳು USB Type-C ಪೋರ್ಟ್‌ ಗಳನ್ನು ಲಭ್ಯವಿದೆ. ಐಫೋನ್ 15 ಸ್ಮಾರ್ಟ್ ಫೋನ್ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಡುಯಲ್ ಸಿಮ್ ಕಾರ್ಡ್ ಸ್ಲಾಟ್ ಹೊಂದಿದ್ದು, ಈ ಸ್ಮಾರ್ಟ್ ಫೋನ್ ನ ಹೆಚ್ಚುವರಿ ರಕ್ಷಣೆಗಾಗಿ ಸೆರಾಮಿಕ್ ಶೀಲ್ಡ್ ವಸ್ತುಗಳೊಂದಿಗೆ 6.1-ಇಂಚಿನ ಸೂಪರ್ ರೆಟಿನಾ XDR OLED ಡಿಸ್‌ಪ್ಲೇಯನ್ನು ಹೊಂದಿದೆ.

ಈ ಡಿಸ್‌ಪ್ಲೇ 2000 ನಿಟ್‌ಗಳ ಗರಿಷ್ಠ ಹೊಳಪನ್ನು ನೀಡಲಿದ್ದು, ಹ್ಯಾಂಡ್‌ಸೆಟ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಅನ್ನು ಕಾಣಬಹುದು. ಈ ಐಫೋನ್ 15 ಪ್ಲಸ್ ದೊಡ್ಡ 6.7-ಇಂಚಿನ ಸೂಪರ್ ರೆಟಿನಾ XDR OLED ಡಿಸ್‌ಪ್ಲೇ ಹೊಂದಿದ್ದು, ನೋಡಲು ಆಕರ್ಷಕವಾಗಿದೆ.

ಭಾರತದಲ್ಲಿ ಐಫೋನ್ 15ರ ಬೆಲೆ 79 ಸಾವಿರ ರೂ.ನಿಂದ ಆರಂಭವಾಗಲಿದ್ದು ದುಬಾರಿಯಾಗಿದ್ದರೂ ಗ್ರಾಹಕರಿಗೆ ಇಷ್ಟವಾಗುವ ಎಲ್ಲಾ ವಿಶೇಷತೆಗಳು ಇವೆ. ಈ ಐಫೋನ್ 15 ಪ್ಲಸ್, 128 ಜಿಬಿ ರೂಪಾಂತರ ಮೂಲ ಬೆಲೆ 89,900 ರೂಪಾಯಿಯಾಗಿರಲಿದೆಯಾಗಿರಲಿದೆ. ಐಫೋನ್ 15 ಹಾಗೂ ಐಫೋನ್ 15 ಪ್ಲಸ್ ಈ ಎರಡೂ ಫೋನ್‌ಗಳು ಕಪ್ಪು, ನೀಲಿ, ಹಸಿರು, ಗುಲಾಬಿ ಮತ್ತು ಹಳದಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತವೆ. ಸೆಪ್ಟೆಂಬರ್ 15 ರಂದು ಫೋನ್‌ಗಳ ಬುಕ್ಕಿಂಗ್ ಆರಂಭವಾದರೆ, ಸೆಪ್ಟೆಂಬರ್ 22 ರಂದು ಮಾರಾಟಯಲ್ಲಿ ಖರೀದಿಗೆ ದೊರೆಯಲಿದೆ.

Leave a Reply

Your email address will not be published. Required fields are marked *