Indoneshyaa girl married uttarpradesh boy :ಪ್ರೇಮ ಚಿಗುರಲು ಯಾವುದೇ ಜಾತಿ, ಧರ್ಮ, ದೇಶ, ಭಾಷೆ ಯಾವುದು ಬೇಕಿಲ್ಲ.ಗಂಡು ಹೆಣ್ಣು ಮನಸ್ಸು ಒಪ್ಪಿದ್ದರೆ ಸಾಕು, ಆ ಪ್ರೀತಿ ಬೇರೆ ಯಾವುದು ಅಡ್ಡಿಯಾಗಲಾಗದು, ಈ ಮಾತು ಸತ್ಯವಾದದ್ದು. ಪ್ರೀತಿ’ ಎಂಬುದು ಬರೆಯುವುದಕ್ಕೆ ಚಿಕ್ಕ ಪದವಾಗಿರಬಹುದು, ಆದರೆ ಈ ಪದವು ಎಲ್ಲರ ಜೀವನದಲ್ಲಿ ತುಂಬಾ ಮಹತ್ವವಾದ ಪಾತ್ರವಹಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಪ್ರೀತಿಗಾಗಿ ಹಾತೊರೆಯುತ್ತಾರೆ. ಯಾವ ಕ್ಷಣದಲ್ಲಾದರೂ ಪ್ರೀತಿ ಹುಟ್ಟಿಕೊಳ್ಳಬಹುದು.
ಇದಕ್ಕೆ ಉದಾಹರಣೆಯಾಗಿರುವುದು ಉತ್ತರ ಪ್ರದೇಶದ ಸನ್ವರ್ ಅಲಿ ಎಂಬಾತ ಇಂಡೋನೇಷ್ಯಾದ ಮಿಫ್ತಾಹುಲ್ ಎಂಬ ಹುಡುಗಿಯನ್ನು ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಎಲ್ಲಿಯ ಇಂಡೋನೇಷ್ಯಾ ಎಲ್ಲಿಯ ಉತ್ತರ ಪ್ರದೇಶ ಎಂದೆನಿಸಬಹುದು. ಇದಕ್ಕೆ ಹೇಳಿದ್ದು ಪ್ರೀತಿಗೆ ಯಾವುದೇ ಊರು ಯಾವ ದೇಶ ಎನ್ನುವುದು ಬೇಕಿಲ್ಲ ಎಂದು.
ಅಂದಹಾಗೆ, ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ರುದ್ರಪುರ ತಹಸಿಲ್‌ನ ನಾರಾಯಣಪುರ ಗ್ರಾಮದ ನಿವಾಸಿ ಸನ್ವರ್ ಅಲಿ 2015 ರಲ್ಲಿ ಸ್ಪೋಕನ್ ಇಂಗ್ಲೀಷ್ ಕಲಿಯುತ್ತಿದ್ದಾಗ ಇಂಡೋನೇಷ್ಯಾದ ಮೆಡಾನ್‌ನಿಂದ ಮಿಫ್ತಾಹುಲ್ ಜನ್ನಾ ಎನ್ನುವ ಯುವತಿಯೂ ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾಳೆ.
ಇಬ್ಬರೂ ಕೂಡ ಮೆಸೇಜ್ ಮಾಡಿ ಮಾತನಾಡಿಕೊಂಡಿದ್ದಾರೆ. ಹೀಗೆ ಇಬ್ಬರ ನಡುವೆಯೂ ಸ್ನೇಹ ಮಯ ಸಂಬಂಧವು ಏರ್ಪಟ್ಟಿತ್ತು. ಹೀಗಿರುವಾಗ 2017ದಕ್ಷಿಣ ಭಾರತದಲ್ಲಿ ಉಂಟಾದ ಚಂಡಮಾರುತದಿಂದ ಸನ್ವರ್ ಅಲಿ ಕುಟಂಬಕ್ಕೆ ಸಾಕಷ್ಟು ತೊಂದರೆಯನ್ನು ಅನುಭವಿಸಿತ್ತು.ಈ ವಿಚಾರವನ್ನು ಸನ್ವರ್, ಮಿಫ್ತಾಹುಲ್ ಜನ್ನಾ ಬಳಿ ಹೇಳಿಕೊಂಡಿದ್ದನು. ಈ ವಿಚಾರವು ಮಿಫ್ತಾಹುಲ್ ಳಿಗೆ ಬಹಳ ನೋವನ್ನು ಉಂಟು ಮಾಡಿತ್ತು.
ತದನಂತರದಲ್ಲಿ ಆ ಯುವತಿಯೂ ಯುವಕನ ಕುಟುಂಬದ ಯೋಗ ಕ್ಷೇಮವನ್ನು ವಿಚಾರಿಸುತ್ತಿದ್ದಳು. ಕೊನೆಗೆ ಇಬ್ಬರ ಆತ್ಮೀಯತೆ ಹೆಚ್ಚಾಯಿತು. ಫೇಸ್‌ಬುಕ್‌ನಲ್ಲಿ ಪರಿಚಯವಾಗಿ ಆರು ತಿಂಗಳ ಬಳಿಕ ತಮ್ಮಿಬ್ಬರ ಪ್ರೀತಿಯ ವಿಚಾರವನ್ನು ಹೇಳಿಕೊಂಡಿದ್ದಾರೆ.ಕೊನೆಗೆ 2018ರಲ್ಲಿ ಮೊದಲ ಬಾರಿಗೆ ಇಂಡೋನೇಷ್ಯಾದಿಂದ ಸನ್ವರ್ನನ್ನು ಭೇಟಿ ಮಾಡಲೆಂದು ಮಿಫ್ತಾಹುಲ್ ಜನ್ನಾ ವಿಮಾನವೇರಿ ಬಂದಿದ್ದಾಳೆ.

ಒಬ್ಬರನೊಬ್ಬರು ಭೇಟಿಯಾಗಿ ಸಮಯ ಕಳೆದ ಈ ಜೋಡಿ ಮದುವೆಯ ನಿರ್ಧಾರ ಮಾಡಿದ್ದಾರೆ. ಆದರೆ ದೇಶ ಬೇರೆ ಬೇರೆಯಾಗಿದ್ದರೂ, ಜಾತಿ ಮಾತ್ರ ಒಂದೇ ಆಗಿತ್ತು. ಹೀಗಾಗಿ ಇಬ್ಬರ ಮದುವೆ ಪೋಷಕರು ಒಪ್ಪಿಗೆ ಕೂಡ ಸೂಚಿಸಿದ್ದಾರೆ.ಮದುವೆಯಾಗಬೇಕು ಎನ್ನುವಷ್ಟರಲ್ಲಿ ಮಿಫ್ತಾಹುಲ್ ಜನ್ನಾ ತಂದೆ ನಿ-ಧನ ಹೊಂದಿದ್ದರು. ಇವರಿಬ್ಬರ ವಿವಾಹವು ಮುಂದೂಡಲ್ಪಟ್ಟಿತು.
ತದನಂತರದಲ್ಲಿ ಮಿಫ್ತಾಹುಲ್ ಜನ್ನಾ, ಇಂಡೋನೇಷ್ಯಾದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಾ ತನ್ನ ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ನೋಡಿ ಕೊಳ್ಳುತ್ತಿದ್ದಳು. 2019ರಲ್ಲಿ ಸನ್ವರ್ ಅಲಿ ಇಂಡೋನೇಷ್ಯಾಕೆ ತೆರೆಳಿ ತನ್ನ ಪ್ರೇಮಿಯನ್ನು ಭೇಟಿಯಾಗಿ ಬಂದಿದ್ದನು. ಆದರೆ ಮದುವೆಯಾಗಲು ಮತ್ತೆ ನಿರ್ಧಾರ ಮಾಡುತ್ತಿದ್ದಂತೆ ಕೋವಿಡ್, ಲಾಕ್ಡೌನ್ ಎದುರಾಯಿತು. ಎರಡನೇ ಬಾರಿಯೂ ಮದುವೆ ಮುಂದೂಡಲ್ಪಟ್ಟಿತು.
ಇದೇ ವೇಳೆಯಲ್ಲಿ ಮಿಫ್ತಾಹುಲ್ ಜನ್ನಾ ತನ್ನ ಉನ್ನತ ವ್ಯಾಸಂಗವನ್ನೂ ಮುಗಿಸಿಕೊಂಡಿದ್ದಾಳೆ. ಕೊನೆಗೂ ಈ ಜೋಡಿ ಕಳೆದ ಅಕ್ಟೋಬರ್ನಲ್ಲಿ ಇಂಡೋನೇಷ್ಯಾದಲ್ಲಿ ವಿವಾಹವಾಗಿದ್ದಾರೆ ಎನ್ನಲಾಗಿದೆ. ಬೇರೆ ಬೇರೆ ದೇಶವಾದರೂ ಅನೇಕ ವರ್ಷಗಳಿಂದ ಪ್ರೀತಿಸಿದ ಈ ಜೋಡಿ ಮದುವೆ ಮಾಡಿಕೊಂಡು ಸುಖವಾಗಿ ಸಂಸಾರ ಮಾಡುತ್ತಾ ಎಲ್ಲರಿಗೂ ಮಾದರಿಯಾಗಿದ್ದಾರೆ.