ದುಬಾರಿ ಬೆಲೆಯ ಕಾರು ಖರೀದಿಸಿದ ಇಂಡಿಯನ್ ಕ್ರಿಕೆಟರ್ ಕೆ.ಎಲ್ ರಾಹುಲ್, ಕಾರಿನ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

ಸೆಲೆಬ್ರಿಟಿಗಳ ಸಾಲಿಗೆ ಸೇರಿರುವ ಕ್ರಿಕೆಟಿಗ ಬದುಕು ಕೂಡ ಐಷಾರಾಮಿಯಾಗಿರುತ್ತದೆ. ಕ್ರಿಕೆಟಿಗರು ಒಂದು ಪಂದ್ಯಕ್ಕೆ ಕೋಟಿಗಟ್ಟಲೇ ಸಂಭಾವನೆಯನ್ನು ಪಡೆಯುತ್ತಾರೆ. ಹೀಗಾಗಿ ದುಬಾರಿ ಬೆಲೆ ಕಾರು ಹಾಗೂ ಮನೆಯನ್ನು ಹೊಂದಿದ್ದಾರೆ. ಇದೀಗ ಭಾರತೀಯ ಆಟಗಾರ ಕೆ ಎಲ್ ರಾಹುಲ್ (K. L Rahul) ಅವರು ದುಬಾರಿ ಬೆಲೆಯ ಕಾರನ್ನು ಖರೀದಿಸುವ ಮೂಲಕ ಸುದ್ದಿಯಾಗಿದ್ದಾರೆ.

ಹೌದು, ಇಂಡಿಯನ್ ಕ್ರಿಕೆಟರ್ ಕೆ.ಎಲ್. ರಾಹುಲ್ ಅವರು 1.19 ಕೋಟಿ ರೂಪಾಯಿ ಮೌಲ್ಯದ ಲ್ಯಾಂಡ್ ರೋವರ್ ಡಿಫೆಂಡರ್ 110 (Land Rover Defender 110) ಕಾರನ್ನು ಖರೀದಿಸಿದ್ದಾರೆ. ಡಿಫೆಂಡರ್ 110 296bhp ಮತ್ತು 650Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, 3.0-ಲೀಟರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ.

ಅದಲ್ಲದೇ ಈಗಾಗಲೇ ಕೆ ಎಲ್ ರಾಹುಲ್ ಬಳಿ ದುಬಾರಿ ಬೆಲೆಯ ಇನ್ನಷ್ಟು ಕಾರುಗಳಿವೆ. ಅವರ ಗ್ಯಾರೇಜ್ ನಲ್ಲಿ ಇರುವ ಕಾರುಗಳ ಪೈಕಿ ರೇಂಜ್ ರೋವರ್ ವೆಲಾರ್‌ ಕೂಡ ಒಂದು. ಈ ಕಾರು 543bhp ಮತ್ತು 680Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, 5.0-ಲೀಟರ್ ಸೂಪರ್ ಚಾರ್ಡ್ರಾ ಆವೃತ್ತಿಯಾಗಿದೆ ಎನ್ನಲಾಗಿದೆ.ಅದಲ್ಲದೇ BMW X5 ಕಾರು ಕೂಡ ಇವರ ಬಳಿಯಿದೆ.

ಅದಲ್ಲದೇ 2 ಸೀಟರ್ ಲಂಬೋರ್ಘಿನಿ ಹುರಾಕನ್ ಸ್ಪೈಡರ್ ಹಾಗೂ ಎರಡು ಆಸನಗಳ ಮತ್ತೊಂದು ಕಾರ್ ಎಂದರೆ ಆಸ್ಟನ್ ಮಾರ್ಟಿನ್ ಕೂಡ ಇದೆ. ಅದಲ್ಲದೇ ಭಾರತದಲ್ಲಿ ಅಪರೂಪದ ಕಾರಾಗಿರುವ DB11 ಹೊಂದಿದ್ದಾರೆ. ಅದರೊಂದಿಗೆ Mercedes-Benz C43 AMG ಕಾರನ್ನು ಹೊಂದಿದ್ದು, ಈ ಕಾರನ್ನು ಕೆ. ಎಲ್ . ರಾಹುಲ್ ಅವರು ಮೊದಲು ಖರೀದಿಸಿದ್ದರು. ಹೀಗಾಗಿ ಇವರ ಗ್ಯಾರೇಜ್ ನಲ್ಲಿ ದುಬಾರಿ ಬೆಲೆಯ ಕಾರುಗಳಿವೆ.

Leave a Reply

Your email address will not be published. Required fields are marked *