ಸರ್ಕಾರದ ಯೋಜನೆಗಳ ಫಲಾನುಭವಿಗಳಾಗಲು ಹೋಗಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಲಿಂಕ್ ಕ್ಲಿಕ್ ಮಾಡುವ ಮುನ್ನ ಜೋಕೆ! ಇಲ್ಲಿದೆ ನೋಡಿ ಅಸಲಿ ವಿಚಾರ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress Government) ವು ಅಧಿಕಾರ ಸ್ವೀಕರಿಸಿದೆ. ಈ ನಡುವೆ ಕಾಂಗ್ರೆಸ್ ಸರ್ಕಾರವು ಈಗಾಗಲೇ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಗೃಹಜ್ಯೋತಿ ಯೋಜನೆ ಫಲಾನುಭವಿಗಳಾಗಲು ಅರ್ಜಿ ನೋಂದಣಿ ಪ್ರಕ್ರಿಯೆ ರಾಜ್ಯಾದ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು ಆದರೆ ಇದೀಗ ಮತ್ತೊಂದು ಸಮಸ್ಯೆಯೊಂದು ಎದುರಾಗಿದೆ.

ಸೈಬರ್ ವಂಚಕರು (Cyber ​​Fraudsters) ಗೃಹಜ್ಯೋತಿ ಯೋಜನೆ ಅರ್ಜಿ ನೋಂದಣಿಯ ನಕಲಿ ಲಿಂಕ್‌ಗಳನ್ನು ಸೃಷ್ಟಿಸಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ. ಅದಲ್ಲದೇ, ರಾಜ್ಯ ಕಾಂಗ್ರೆಸ್‌ ಸರ್ಕಾರದ ಯೋಜನೆಗಳ ಸರ್ವರ್‌ ಅನ್ನು ಕೇಂದ್ರ ಸರ್ಕಾರ ಹ್ಯಾಕ್‌ ಮಾಡಿದೆ ಎಂದು ಸಚಿವ ಸತೀಶ್‌ ಜಾರಕಿಹೊಳಿ Sathish Jarakiholi) ಹೇಳಿದ್ದರು. ಸರ್ಕಾರದ ಯೋಜನೆಗಳಿಗೆ ಸಂಬಂಧಪಟ್ಟ ಲಿಂಕ್ ಎಂದು ಈ ಲಿಂಕ್ ಗಳನ್ನು ಓಪನ್ ಮಾಡಿದರೆ ಸೈಬರ್ ವಂಚಕರ ಜಾಲಕ್ಕೆ ಬಲಿ ಆಗುವುದು ಪಕ್ಕಾ.

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಲಿಂಕ್ ಓಪನ್ ಮಾಡಿದರೆ, ವೈಯಕ್ತಿಕ ವಿವರಗಳು (Personal Details), ಬ್ಯಾಂಕ್‌ ಖಾತೆಯ ವಿವರ (Bank Account Details) ಗಳು ಸೈಬರ್ ವಂಚಕರ ಕೈ ಸೇರುವುದರಲ್ಲಿ ಯಾವುದೇ ಡೌಟ್ ಇಲ್ಲ. ಗೃಹಜ್ಯೋತಿಯ ಲಿಂಕ್ ಹ್ಯಾಕ್ ಆಗಿದ್ದರೆ, ಗೃಹ ಲಕ್ಷ್ಮಿ ಮತ್ತು ಯುವ ನಿಧಿ ಯೋಜನೆಗೆ ಇನ್ನೂ ಅರ್ಜಿ ಸ್ವೀಕರಿಸುತ್ತಿಲ್ಲ. ಆದರೆ ಈ ಯೋಜನೆಯ ಕುರಿತು ಯಾವುದೇ ಲಿಂಕ್ ಹರಿದಾಡುತ್ತಿದ್ದರೆ ಲಿಂಕ್ ಮೇಲೆ ಕ್ಲಿಕ್ ಮಾಡುವುದು ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಂಡಂತೆಯಾಗುತ್ತದೆ.

ಗೃಹ ಜ್ಯೋತಿ ಸೇರಿದಂತೆ ಇನ್ನಿತ್ತರ ಯೋಜನೆಗಳಿಗೆ ಸಂಬಂಧ ಪಟ್ಟ ಲಿಂಕ್ ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ನಕಲಿ ಲಿಂಕ್ ಗಳ ಮೇಲೆ ಕ್ಲಿಕ್ ಮಾಡದೇ ಇರುವಂತೆ ಗ್ರಾಹಕರಿಗೆ ಬೆಸ್ಕಾಂ ತಿಳಿಸಿದೆ. ಬೆಸ್ಕಾಂ ಇಲಾಖೆಯೂ ಅಧಿಕೃತ ವಬ್‌ಸೈಟ್‌ನಲ್ಲಿ ಮಾತ್ರ ನೋಂದಣಿ ಮಾಡಿಕೊಳ್ಳುವಂತೆ ಮನವಿ ಮಾಡಿದೆ. ಇನ್ನು ನೋಂದಣಿ ಮಾಡಲು ಗೊತ್ತಿರುವವರು, ಅಕ್ಕ ಪಕ್ಕದವರಿಂದ ನೋಂದಣಿ ಮಾಡಲು ಸಹಾಯವನ್ನು ಪಡೆದುಕೊಳ್ಳುವಂತೆ ಹೇಳಿದೆ.

ಬೆಂಗಳೂರು ಒನ್, ಕರ್ನಾಟಕ ಒನ್, ನಾಡ ಕಚೇರಿಯಲ್ಲಿ ಅರ್ಜಿ ಸಲ್ಲಿಸುವುದು ಸೂಕ್ತ. ಈ ಯೋಜನೆಯಲ್ಲಿ ಅಧಿಕೃತ ವೆಬ್​ಸೈಟ್ ಸೇವಾಸಿಂಧು ಬಳಸಿದರೆ ಸೇಫ್ ಆಗಬಹುದು. ಅಪರಿಚಿತ ವ್ಯಕ್ತಿಗಳಿಂದ ಬರುವ ಫೋನ್ ಕರೆ (Phone Call), ಇ-ಮೇಲ್ (E Mail), ಲಿಂಕ್​ (Link) ಗಳ ಬಗ್ಗೆ ನಿರ್ಲಕ್ಷಿಸುವುದು ಸೈಬರ್ ವಂಚಕರ ಕೈಯಿಂದ ಪಾರಾಗಬಹುದು.

Leave a Reply

Your email address will not be published. Required fields are marked *