2023ರ ಐಸಿಸಿ ಏಕದಿನ ವಿಶ್ವಕಪ್‌ ನಲ್ಲಿ ಗೆದ್ದ ಹಾಗೂ ಸೋತ ತಂಡಗಳು ಪಡೆದ ಬಹುಮಾನದ ಮೊತ್ತ ಎಷ್ಟು ಕೋಟಿ ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ

2023ರ ಐಸಿಸಿ ಏಕದಿನ ವಿಶ್ವಕಪ್‌ (ICC World Cup 2023) ನಲ್ಲಿ ಭಾರತವು ಗೆಲುವು ಸಾಧಿಸುತ್ತದೆ ಎಂದು ಕಾತುರದಿಂದ ಕಾಯುತ್ತಿದ್ದ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಭಾರಿ ನಿರಾಸೆಯಾಗಿದೆ. ಹೌದು, ನವೆಂಬರ್ 19ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ (Ahamadabad Narendra Modi stadium) ನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಆಸ್ಟ್ರೇಲಿಯಾ (India Vs Australia) ತಂಡವು ಸೆಣಸಾಟ ನಡೆಸಿ ವಿಶ್ವ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು.

ಹೌದು ಪಂದ್ಯದ ಪ್ರಾರಂಭದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾವು 50 ಓವರ್‌ಗಳಲ್ಲಿ 10 ವಿಕೆಟ್ ಕಳೆದುಕೊಂಡಿತು. ಈ ವೇಳೆಯಲ್ಲಿ ಒಟ್ಟಾರೆಯಾಗಿ 240 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಎದುರಾಳಿ ತಂಡವಾದ ಆಸ್ಟ್ರೇಲಿಯಾ 43 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಸುಲಭವಾಗಿ ಗೆಲುವನ್ನು ಸಾಧಿಸಿಕೊಂಡರು. ಇತ್ತ ಆಸ್ಟ್ರೇಲಿಯಾ ತಂಡ (Australia Team) ವು ವಿಶ್ವ ಚಾಂಪಿಯನ್ ಪಟ್ಟದ ಜೊತೆಗೆ ಕೋಟಿ ಕೋಟಿ ಹಣವನ್ನು ಬಹುಮಾನವಾಗಿ ಪಡೆದುಕೊಂಡಿದೆ.

ಸೋತ ಭಾರತಕ್ಕೂ ಬಹುಮಾನವಾಗಿ ಕೋಟಿಗಟ್ಟಲೆ ಹಣವು ಸಿಕ್ಕಿದೆ. ಹಾಗಾದ್ರೆ ಆ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳಿ. 2023ರ ಐಸಿಸಿ ಏಕದಿನ ವಿಶ್ವಕಪ್‌ ನಲ್ಲಿ 10 ಮಿಲಿಯನ್ ಯುಎಸ್ ಡಾಲರ್ ಬಹುಮಾನ ಮೊತ್ತ (ICC World Cup 2023 Prize Money) ವನ್ನು ಪಂದ್ಯಕ್ಕೆಂದು ಇಡಲಾಗಿದೆ. ಇಲ್ಲಿ ಗೆದ್ದ ತಂಡ ಅಂದರೆ ಆಸ್ಟ್ರೇಲಿಯಾಗೆ 4 ಮಿಲಿಯನ್ ಡಾಲರ್ (33 ಕೋಟಿ ರೂಗಳು) ನೀಡಲಾಗಿದೆ.

ಇತ್ತ ಸೋತ ಭಾರತೀಯ ತಂಡವು 2 ಮಿಲಿಯನ್ ಡಾಲರ್ (16 ಕೋಟಿ ರೂಗಳು) ಬಹುಮಾನವಾಗಿ ಪಡೆದುಕೊಂಡಿದೆ. ಒಂಬತ್ತು ಪಂದ್ಯಗಳಲ್ಲಿ ಜಯಗಳಿಸಿರುವ ಭಾರತೀಯ ತಂಡವು ಒಂದು ಪಂದ್ಯಕ್ಕೆ 40 ಸಾವಿರ ಡಾಲರ್ ಅಂದರೆ 33 ಲಕ್ಷ ರೂಗಳನ್ನು ಬಹುಮಾನವಾಗಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇನ್ನು ಉಳಿದಂತೆ ಸೆಮಿ-ಫೈನಲ್​ನಲ್ಲಿ ಸೋಲು ಅನುಭವಿಸಿದ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡ (South Africa and New Zealand team) ಗಳು ತಲಾ 6 ಕೋಟಿ ರೂಗಳನ್ನು ಹಾಗೂ ಸೆಮಿ-ಫೈನಲ್‌ಗೆ ಎಂಟ್ರಿ ಕೊಡದ ಆರು ತಂಡಗಳು 82 ಲಕ್ಷ ರೂಗಳನ್ನು ಬಹುಮಾನವಾಗಿ ಪಡೆಯಲಾಗಿದೆ. ಈ ಬಾರಿಯ 2023ರ ಐಸಿಸಿ ಏಕದಿನ ವಿಶ್ವಕಪ್‌ ಮ್ಯಾಚ್ ಭಾರತೀಯ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಯನ್ನು ಹುಸಿ ಮಾಡಿದ್ದು ಟೀಮ್ ಇಂಡಿಯಾ ಆಟಗಾರರು ಸೋತ ಬೇಸರದಲ್ಲಿ ಇರುವುದು ಮಾತ್ರ ನಿಜ.

Leave a Reply

Your email address will not be published. Required fields are marked *