ಐಎಎಸ್ ಅಧಿಕಾರಿ ಡಾ ತನು ಜೈನ್ ತನ್ನ ಹುದ್ದೆ ಯನ್ನು ತೊರೆದಿದ್ದು ಯಾಕೆ ಗೊತ್ತಾ? ಇಲ್ಲಿದೆ ಅಸಲಿ ವಿಚಾರ

IAS, IPS, UPSC ಹೀಗೆ ನಾನಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತವಾದ ಹುದ್ದೆಯನ್ನು ಪಡೆದುಕೊಳ್ಳುವುದು ಸುಲಭವಾದ ಕೆಲಸವಲ್ಲ ಬಿಡಿ, ಈ ಪರೀಕ್ಷೆಯಲ್ಲಿ ಪಾಸ್ ಆಗಬೇಕಾದರೆ ರಾತ್ರಿ ಹಗಲು ಎನ್ನದೇ ಓದಬೇಕಾಗುತ್ತದೆ. ಈ ಪರೀಕ್ಷೆಯಲ್ಲಿ ಪಾಸಾಗಬೇಕಾದರೆ ಎಲ್ಲಾ ಸಂತೋಷವನ್ನು ತ್ಯಾಗ ಮಾಡಲು ಸಿದ್ಧರಿರಬೇಕು. UPSC, IAS ನಂತಹ ಪರೀಕ್ಷೆಯಲ್ಲಿ ಉತ್ತಿರ್ಣರಾಗುವುದು ಅನೇಕರ ಕನಸು ಕೂಡ ಹೌದು.

ಇಲ್ಲೊಬ್ಬರು ಐಎಎಸ್ ಅಧಿಕಾರಿ (IAS Officer) ಹುದ್ದೆಯನ್ನು ತೊರೆದು ಬೇರೆ ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ನಿರ್ಧಾರ ಮಾಡಿದ್ದಾರೆ ಎಂದರೆ ನಿಜಕ್ಕೂ ಅಚ್ಚರಿಯಾಗಬಹುದು. ಇದೇನಪ್ಪ ಹೀಗೆ ಎಂದು ಸಣ್ಣದೊಂದು ಪ್ರಶ್ನೆಯೊಂದು ಹುಟ್ಟಿಕೊಳ್ಳಲು ಬಹುದು. ಈ ಐಎಎಸ್ ಅಧಿಕಾರಿಯ ಹೆಸರು”ತನು ಜೈನ್” (Tanu Jain). ಡಾ. ತನು ಜೈನ್ ಅವರು ನಾಗರಿಕ ಸೇವೆಗೆ ರಾಜೀನಾಮೆ ನೀಡಿದ್ದು ಇವರು 2015 ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ.

ಇತ್ತೀಚೆಗಷ್ಟೇ ತನು ಜೈನ್ ಐಎಎಸ್ ಅಧಿಕಾರಿ (IAS Officer) ಹುದ್ದೆ ತೊರೆದು ಪೂರ್ಣಾವಧಿಯಲ್ಲಿ ಶಿಕ್ಷಕಿಯಾಗಲು ವೃತ್ತಿ ಜೀವನ ಆರಂಭಿಸಲು ನಿರ್ಧಾರ ಮಾಡಿದ್ದಾರೆ. ಹೀಗಾಗಿ ಕಳೆದ ಕೆಲ ತಿಂಗಳ ಹಿಂದೆ ದೆಹಲಿಯಲ್ಲಿ ‘ತಥಾಸ್ತು’ ಎಂಬ ಐಎಎಸ್ ಕೋಚಿಂಗ್ ಸೆಂಟರ್ ಅನ್ನು ತೆರೆದಿದ್ದು, ಈ ಮೂಲಕ ಭೋದನೆಯ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

ಈ ಬಗ್ಗೆ ಬಹಳ ಖುಷಿಯಿಂದಲೇ ಮಾತನಾಡುವ ಇವರಲ್ಲಿ ಐಎಎಸ್ ಹುದ್ದೆ ತೊರೆದೆ ಎನ್ನುವ ಬೇಸರವಿಲ್ಲ. ಪ್ರತಿಷ್ಠಿತ ಹುದ್ದೆಯಾಗಿರುವ ಐಎಎಸ್ ಹುದ್ದೆ ಬಿಟ್ಟು ಶಿಕ್ಷಕಿಯಾಗಲು ಏಕೆ ನಿರ್ಧರಿಸಿದೆ ಎನ್ನುವ ನಿರ್ಧಾರದ ಬಗ್ಗೆ ಮಾತನಾಡುವ ತನು ಜೈನ್ ಅವರು, “ನನ್ನ ಕೆಲಸ ಚೆನ್ನಾಗಿ ನಡೆಯುತ್ತಿತ್ತು. ನಾನು ಏಳೂವರೆ ವರ್ಷ ಕೆಲಸ ಮಾಡಿದೆ. ಆದರೆ UPSC ತಯಾರಿಯ ಸಮಯದಲ್ಲಿ ನಾನು ಸಮಸ್ಯೆಗಳನ್ನು ನೋಡಿದೆ. ನಾನೇ ಪರೀಕ್ಷೆಗೆ ತಯಾರಿ ನಡೆಸಿದ್ದೇನೆ ಮತ್ತು ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದೇನೆ, ಆದ್ದರಿಂದ ತಯಾರಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ಎದುರಿಸುವ ತೊಂದರೆಗಳು ನನಗೆ ಚೆನ್ನಾಗಿ ತಿಳಿದಿದೆ“.

“ಜೀವನವು ನಿಮಗೆ ಏನನ್ನಾದರೂ ಮಾಡಲು ಮತ್ತು ಸುಧಾರಿಸಲು ಅವಕಾಶಗಳನ್ನು ನೀಡುತ್ತದೆ. ನನ್ನ ಪತಿ ಸಿವಿಲ್ ಸರ್ವಿಸ್‌ನಲ್ಲಿರುವ ಕಾರಣ, ನನಗೆ ಐಎಎಸ್ ಕೋಚಿಂಗ್ ಸೆಂಟರ್ ಅನ್ನು ತೆರೆಯಲು ಹಾಗೂ ಅಭ್ಯರ್ಥಿಗಳಿಗೆ ಬೋಧನೆ ಮಾಡುವ ಅವಕಾಶ ಸಿಕ್ಕಿತು. ನಾನು ಜೀವನದಲ್ಲಿ ಮುಂದೆ ಬರುವ ಎಲ್ಲಾ ಅಪಾಯವನ್ನು ತೆಗೆದುಕೊಳ್ಳಲು ಸಿದ್ಧವಿರುವೆ” ಎಂದು ತಮ್ಮ ನಿರ್ಧಾರ ಬಗ್ಗೆ ಖುಷಿ ವ್ಯಕ್ತಪಡಿಸುತ್ತಾರೆ.

ತನು ಜೈನ್ ಅವರು ದೆಹಲಿಯ ಸದರ್ ಪ್ರದೇಶ (Dehli Sadar Place) ದಲ್ಲಿ ಹುಟ್ಟಿ ಬೆಳೆದ ಇವರು ದೆಹಲಿಯ ಕೇಂಬ್ರಿಡ್ಜ್ ಶಾಲೆಯಲ್ಲಿ ಓದಿದ್ದವರು. ಐಎಎಸ್ ಅಧಿಕಾರಿಯಾಗುವ ಮೊದಲು ಸುಭಾರ್ತಿ ವೈದ್ಯಕೀಯ ಕಾಲೇಜಿ (Subharthi Medical College) ನಿಂದ ತಮ್ಮ ಡೆಂಟಲ್ ಸರ್ಜರಿ ಬ್ಯಾಚುಲರ್ (Dental Surgery Bachulors) ಪಡೆದುಕೊಂಡಿದ್ದರು.

ತನು ಜೈನ್ ಬಿಡಿಎಸ್ (BDS) ಓದುತ್ತಿರುವಾಗಲೇ ಯುಪಿಎಸ್ ಸಿ ಪರೀಕ್ಷೆಯತ್ತ ಗಮನ ಹರಿಸಿದ್ದರು. ಹೀಗಿರುವಾಗ ತನು ಜೈನ್ ಮೊದಲ ಬಾರಿಗೆ 2012 ರಲ್ಲಿ ಐಎಎಸ್ ಪೂರ್ವಸಿದ್ಧತಾ ಪರೀಕ್ಷೆಗೆ ಹಾಜರಾಗಿದ್ದು ಪರೀಕ್ಷೆಯಲ್ಲಿ ಪಾಸಾಗಿರಲಿಲ್ಲ.ಆ ಬಳಿಕ 2014 ರಲ್ಲಿ ಅವರು ತಮ್ಮ ಮೂರನೇ ಪ್ರಯತ್ನದಲ್ಲಿ 68 ನೇ ರ್ಯಾಂಕ್‌ನೊಂದಿಗೆ UPSC ಉತ್ತೀರ್ಣರಾದ ಇವರು 2015 ರಲ್ಲಿ ಅವರು ಸಶಸ್ತ್ರ ಪಡೆಗಳ ಪ್ರಧಾನ ಕಚೇರಿಯ ಸೇವೆಗೆ ನೇಮಕಗೊಂಡರು.

ಆ ಬಳಿಕ ಡಾ. ತನು ಜೈನ್ ಅವರನ್ನು ಡಿಆರ್‌ಡಿಒ (DRDO) ದಲ್ಲಿ ಸಹಾಯಕ ನಿರ್ದೇಶಕರ ಹುದ್ದೆಯನ್ನು ಅಲಂಕರಿಸಿದರು. ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡಿರುವ ಡಾ.ತನು ಜೈನ್ ಅವರು ಐಎಎಸ್ (IAS) ಮತ್ತು ಯುಪಿಎಸ್‌ಸಿ (UPSC) ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾ ಭಾಷಣಕಾರರಾಗಿಯು ಗುರುತಿಸಿಕೊಂಡಿದ್ದಾರೆ. ಆದರೆ ಐಎಎಸ್ ಹುದ್ದೆ ತೊರೆದು ಶಿಕ್ಷಕಿ ವೃತ್ತಿಯತ್ತ ಮುಖ ಮಾಡಿರುವುದು ನಿಜಕ್ಕೂ ಮಾದರಿಯಾಗುವಂತಹ ವಿಚಾರ ಎನ್ನುವುದರಲ್ಲಿ ಎರಡು ಮಾತಿಲ್ಲ.

Leave a Reply

Your email address will not be published. Required fields are marked *