ಒಮ್ಮೆ ಚಾರ್ಜ್ ಮಾಡಿದರೆ 631 ಕಿಲೋಮೀಟರ್ ದೂರವನ್ನು ಕ್ರಮಿಸುವ ಹೊಸ ಕಾರು.. ಈ ಕಾರಿನ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ!!

hyundai ioniq 5: ಸ್ವಂತ ವಾಹನವನ್ನು ಹೊಂದುವುದು ಎಲ್ಲರ ಕನಸು. ಹೊಸ ಹೊಸ ತಂತ್ರಜ್ಞಾನಗಳನ್ನು ಒಳಗೊಂಡ ಕಾರು ಬೈಕ್ ಗಳನ್ನು ಹತ್ತಿ ರಸ್ತೆಯಲ್ಲಿ ಓಡಾಡುವುದೇ ಒಂದು ಸಂಭ್ರಮ. ಇದೇ ಕನಸನ್ನು ನನಸು ಮಾಡುವುದರ ಸಲುವಾಗಿ ತಯಾರಿಕಾ ಕಂಪನಿಗಳು ಕೂಡ new model ಕಾರು ಹಾಗೂ ಬೈಕ್ ಗಳನ್ನು ಅನಾವರಣಗೊಳಿಸುತ್ತಿವೆ. ಇದೀಗ ಮಾರುಕಟ್ಟೆಯಲ್ಲಿ ಹೊಸ ಹೆಜ್ಜೆ ಇಡಲಿರುವ ಕಾರು ಹ್ಯುಂಡೈ ಐಯೋನಿಕ್ 5 ( Hyundai Ioniq 5).

ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಾಗುತ್ತಿದ್ದಂತೆ electric ಬೈಕ್ ಹಾಗೂ ಕಾರುಗಳನ್ನು ಹೊಂದುವುದು ಹೊಸ ಟ್ರೆಂಡ್ ಆಗಿದೆ. ಇಂತಹ ಬೇಡಿಕೆಗಳನ್ನು ಪೂರೈಸುವುದರ ಸಲುವಾಗಿ ಹ್ಯುಂಡೈ ಇಂಡಿಯಾ ಕಂಪನಿಯು, ಅಯೋನಿಕ್ 5 ಎಲೆಕ್ಟ್ರಿಕ್ ಎಸ್ ಯು ವಿ ಮಾದರಿಯ ಕಾರನ್ನು ಬಿಡುಗಡೆಗೊಳಿಸಲಿದೆ. ಅಷ್ಟೇ ಅಲ್ಲದೆ ಹೊಸ ಕಾರನ್ನು ಹೊಸದಾಗಿ ಖರೀದಿಸಲು ಬುಕಿಂಗ್ ಪ್ರಕ್ರಿಯೆಯನ್ನು ಕೂಡ ಪ್ರಾರಂಭಿಸಲಾಗಿದೆಯಂತೆ.

ಈ ಕಾರು ಮುಂಬರುವ ತಿಂಗಳಿನಲ್ಲಿ ಅಂದರೆ 2023ರ ಜನವರಿ ತಿಂಗಳಿನಲ್ಲಿ ನಡೆಯಲಿರುವ ದೆಹಲಿಯ ಆಟೋ ಎಕ್ಸ್ ಪೋದಲ್ಲಿ ಅಧಿಕೃತವಾಗಿ ವಾಹನಪ್ರಿಯರ ಕೈಗೆ ಎಟುಕಲಿದ್ದು, ಬುಕಿಂಗ್ಗಾಗಿ ಒಂದು ಲಕ್ಷ ರೂಪಾಯಿಗಳ ದರವನ್ನು ನಿಗದಿಪಡಿಸಲಾಗಿದೆಯಂತೆ.

hyundai ioniq 5
hyundai ioniq 5

ಈ ಕಾರನ್ನು ಭಾರತದ ಸಿಕೆಡಿ ಆಮದು ನೀತಿ ಅಡಿಯಲ್ಲಿ ಮಾರಾಟ ಮಾಡಬಹುದಾಗಿದ್ದು, ಕಿಯಾ ಇವಿ 6 ಗಿಂತಲೂ ಕಡಿಮೆ ಬೆಲೆಗೆ ಸಿಗಲಿದೆ ಎನ್ನಲಾಗುತ್ತಿದೆ. ಕಿಯಾ ಕಂಪನಿಯ ev6 ಮಾದರಿಯ ಕಾರು ಸಾಗರೊತ್ತರ ಉತ್ಪಾದನಾ ಘಟಕಗಳಲ್ಲಿಯೇ ಸಂಪೂರ್ಣವಾಗಿ ನಿರ್ಮಾಣಗೊಂಡಿದೆ; ಆದರೆ ಹುಂಡೈ ಕಂಪನಿಯ ಅಯೋನಿಕ್ 5 ಭಾರತದಲ್ಲಿಯೇ ಬಿಡಿ ಭಾಗಗಳ ಜೋಡಣೆಯಿಂದ ನಿರ್ಮಿಸಲಾಗಿದ್ದು transportation ತೆರಿಗೆ ವಿಚಾರವಾಗಿ ಹಗ್ಗದ ಬೆಲೆಯಲ್ಲಿ ದೊರಕಲಿದೆ ಎನ್ನಲಾಗುತ್ತದೆ.

hyundai ioniq 5 information

Battery package and milage : 72.6 ಕೀಲೊ ವ್ಯಾಟ್ ಬ್ಯಾಟರಿ ಪ್ಯಾಕ್ ಜೋಡಣೆಯಿದ್ದು, ಪ್ರತಿ ಚಾರ್ಜ್ ಗೆ ಸುಮಾರು 631 ಕಿಲೋಮೀಟರ್ ಓಡಿಲಿದೆ. ಸೂಪರ್ ಫಾಸ್ಟ್ 800 ವೋಲ್ಟ್ ಚಾರ್ಜಿಂಗ್ ಸಾಮರ್ಥ್ಯವಿದ್ದು, 18 ನಿಮಿಷಗಳಲ್ಲಿ 80% ಚಾರ್ಜ ಆಗಲಿದೆ.

ಈ ಮೂರು ರಾಶಿಯ ಹೆಣ್ಣು ಮಕ್ಕಳ ಮುಂದೆ ತಲೆಬಾಗಲೇ ಬೇಕು, ಈ ಮೂರು ವಿಶಿಷ್ಟ ರಾಶಿಗಳು ಯಾವುದು. ಇಲ್ಲಿದೆ ನೋಡಿ !!!

2022ರ ‘world car of the year’ ಪ್ರಶಸ್ತಿಯನ್ನು ಐಕಾನಿಕ್ 5 ತನ್ನದಾಗಿಸಿಕೊಂಡು, ಫಿಕ್ಸಲೆಟೆಡ್ ಲುಕ್ ಹೊಂದಿರುವ ಫ್ರಂಟ್ ಮತ್ತು ರಿಯರ್ ಲೈಟ್ಸ್, 20 ಇಂಚಿನ aero optomised alloy wheels, 12.3 ಇಂಚಿನ ಟಚ್ ಸ್ಕ್ರೀನ್ ಗಳನ್ನು ಒಳಗೊಂಡಿದೆ. ಸುಧಾರಿತ ಹಾಗೂ ಸುರಕ್ಷಿತ ಸೌಲಭ್ಯಗಳನ್ನು ಅಳವಡಿಸಿ ಅಭಿವೃದ್ಧಿಪಡಿಸಿದ ಈ ಕಾರಿನ ನಿರೀಕ್ಷಿತ ಬೆಲೆಯು 50-55 ಲಕ್ಷ ರೂಪಾಯಿಗಳಾಗಲಿವೆ ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *