ಪ್ರಿಯಕರನ ಜೊತೆಗೆ ಸರಸ ಆಡಲಿಕ್ಕೆ 3 ವರ್ಷದ ಪುಟ್ಟ ಮಗು ಅಡ್ಡ ಬರುತ್ತೆ ಅಂತ ಸ್ವಂತ ಮಗುವಿಗೆ ವಿಧವೆ ಮಹಿಳೆ ಮಾಡಿದ್ದೇನು ನೋಡಿ!! ತಾಯಿ ಕುಲಕ್ಕೆ ಕಳಂಕ ಇವಳು!!

Hyderabad udaya story : ತಾಯಿಯ ಪ್ರೀತಿಯೂ ಯಾವಪ್ರೀತಿಗೂ ಸರಿಸಮಾನವಾಗದು. ಮಕ್ಕಳ ಭವಿಷ್ಯದ ಬಗ್ಗೆ ನೂರಾರು ಕನಸು ಕಟ್ಟಿಕೊಂಡು ಮಕ್ಕಳ ಏಳಿಗೆಯನ್ನೇ ಬಯಸುತ್ತಾಳೆ. ಹೀಗಾಗಿ ಪ್ರಪಂಚದಲ್ಲಿ ಕೆಟ್ಟ ಮಕ್ಕಳು ಇರಬಹುದು. ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಆದರೆ ಕೆಲವೊಮ್ಮೆ ಕೆಲವು ಘಟನೆಗಳು ಎಲ್ಲರನ್ನು ಬೆಚ್ಚಿ ಬೀಳುಸುವುದಿದೆ. ಇಂತಹದ್ದೇ ಘಟನೆಯೊಂದು ಹೈದರಾಬಾದ್ ನಡೆದಿತ್ತು.

ಉದಯ ತೆಲಂಗಾಣದ ಹೈದರಾಬಾದ್‌ನ ಜೇಡಿಮೆಟ್ಲಾದ ಯುವತಿ. ಪತಿ ತೀರಿಕೊಂಡಿದ್ದರಿಂದ ಉದಯ ತನ್ನ 3 ವರ್ಷದ ಮಗನ ಜೊತೆಗೆ ಒಂಟಿಯಾಗಿ ವಾಸವಾಗಿದ್ದಳು. ಈ ವೇಳೆ ಒಂದು ದಿನ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು, ಸೂರಾರಂನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅದಾಗಲೇ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದರು. ಅದರ ಜೊತೆಗೆ ಈ ಬಾಲಕನ ಮೈಮೇಲೆ ಗಾಯಗಳಾಗಿವೆ ಎಂದು ಹೈದರಾಬಾದ್ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.

ಆ ಬಳಿಕ ಪೊಲೀಸರು ಉದಯನನ್ನು ವಿಚಾರಿಸಿದಾಗ ಅಸಲಿ ಸತ್ಯವು ಬೆಳಕಿಗೆ ಬಂದಿತು. ವಿಚಾರಣೆಯ ವೇಳೆ ಬಾಯಿಬಿಟ್ಟ ಈ ಯುವತಿಯು ” ಆ ಸಮಯದಲ್ಲಿ, ನಾನು ಮತ್ತು ನನ್ನ ಸ್ನೇಹಿತ ಹುಡುಗನಿಗೆ ತಿನ್ನಬೇಕು ಎಂದು ಹೊಡೆದಿದ್ದೇನೆ. ಆದಾದ ಬಳಿಕ ಮಗ ಮೂರ್ಛೆ ಹೋದನು ಎಂದು ಹೇಳಿದ್ದಳು. ಆದರೆ ಆಕೆಯ ಅನುಮಾನಗೊಂಡ ಪೊಲೀಸರು ಗೌಪ್ಯವಾಗಿ ತನಿಖೆ ನಡೆಸಿದ್ದರು. ಹೀಗಿರುವಾಗ ನಿಜವಾದ ವಿಚಾರ ಬೆಳಕಿಗೆ ಬಂದಿತು.

ಹೌದು ಪತಿ ತೀರಿಕೊಂಡಾಗಿನಿಂದ ಉದಯಾ ತನ್ನ ಮಗನ ಜೊತೆ ಒಂಟಿಯಾಗಿ ವಾಸಿಸುತ್ತಿದ್ದಳು.ಈ ವೇಳೆ ಉದಯ ಬೇರೆಯವರ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಳು. ತನ್ನ ಬಾಯ್ ಫ್ರೆಂಡ್ ತನ್ನ ಮನೆಗೆ ಬರಲು ಮಗ ಅಡ್ಡಿಪಡಿಸುತ್ತಿದ್ದನು. ಘಟನೆ ನಡೆದ ದಿನ ಉದಯ ತನ್ನ ಗೆಳೆಯನನ್ನು ಮನೆಗೆ ಕರೆಸಿಕೊಂಡಿದ್ದಳು. ತದನಂತರ ಇಬ್ಬರೂ ಸೇರಿ ಬಾಲಕನಿಗೆ ಕಬ್ಬಿಣದ ಕೇಬಲ್‌ನಿಂದ ಅಮಾನುಷವಾಗಿ ಥ ಳಿಸಿದ್ದರು.

ಆ ತಕ್ಷಣವೇ ಬಾಲಕ ಪ್ರಜ್ಞೆ ತಪ್ಪಿ ಸ್ಥಳದಲ್ಲೇ ಮೃತಪಟ್ಟಿರುವುದು ತನಿಖೆಯಿಂದ ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಉದಯ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದರು. ಅನೈತಿಕ ಸಂಬಂಧದಲ್ಲಿ ಸಿಕ್ಕಿಬಿದ್ದಿದ್ದಕ್ಕೆ ತಾಯಿಯೇ ಮಗನನ್ನೇ ಹೊಡೆದು ಕೊಂದಿರುವ ಘಟನೆಯೂ ಅಲ್ಲಿನ ಜನರನ್ನು ಬೆಚ್ಚಿ ಬೀಳಿಸಿತ್ತು.

Leave a Reply

Your email address will not be published. Required fields are marked *