ಮನುಷ್ಯನು ಅಭಿವೃದ್ಧಿಯನ್ನು ಕಾಣುತ್ತಿದ್ದಂತೆ ಎಲ್ಲವನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಆದರಲ್ಲಿಯೂ ಈ ಸಂಬಂಧಗಳ ವಿಚಾರದಲ್ಲಿ ಆತನು ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ಕಣ್ಣು ಹಾಯಿಸಿದರೆ ವಿಪರ್ಯಾಸ ಎನಿಸಿಬಿಡುತ್ತದೆ. ಸಂಬಂಧಗಳಲ್ಲಿ ಒಬ್ಬ ವ್ಯಕ್ತಿಯ ಮೇಲೆ ಇನ್ನೊಬ್ಬ ವ್ಯಕ್ತಿಗೆ ನಂಬಿಕೆ ಇಲ್ಲವಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಮದುವೆಯ ಸಂಬಂಧಗಳು ಅರ್ಥವೇ ಕಳೆದುಕೊಂಡು ಬಿಟ್ಟಿವೆ ಎನ್ನುವುದು ಒಪ್ಪಿಕೊಳ್ಳಬೇಕಾದ ವಿಚಾರವಾಗಿದೆ.
ಸತಿ ಪತಿ ಇಬ್ಬರೂ ಹೊಂದಿಕೊಂಡು ಬದುಕುವ ಕಾಲವೊಂದು ಮರೆಯಾಗಿದೆ. ದಿನ ಕಳೆದಂತೆ ಮದುವೆ ಸಂಬಂಧಗಳು ಮುರಿದು ಬೀಳುತ್ತಿದೆ..ವೈವಾಹಿಕ ಬದುಕಿನಲ್ಲಿ ಭಿನ್ನಾಭಿಪ್ರಾಯಗಳು, ಬಿರುಕು, ಮೂರನೇ ವ್ಯಕ್ತಿಯ ಪ್ರವೇಶ ಹೀಗೆ ಸಾಕಷ್ಟು ತೊಡಕುಗಳು ಕಾಣಿಸಿಕೊಳ್ಳುತ್ತಿದೆ. ಸಂಬಂಧದಲ್ಲಿ ಸ್ವಲ್ಪ ಮಟ್ಟಿಗಿನ ಬಿರುಕು ಕಂಡರೂ ವಿಚ್ಛೇಧನದ ಮೊರೆ ಹೋಗುವವರ ಸಂಖ್ಯೆಗೇನು ಕೊರತೆಯಿಲ್ಲ.
ಮದುವೆ ಆಗಿ ಕೈ ಹಿಡಿದ ಗಂಡ ಅಥವಾ ಹೆಂಡತಿ ಪರರ ಸಂಗ ಮಾಡಿ ಮೋ-ಸ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಇನ್ನೊಂದೆಡೆ ಗಂಡನ ವರ್ತನೆಯಿಂದ ನಾನಾ ರೀತಿಯ ಅನಾಹುತಗಳು ನಡೆಯುತ್ತಿರುವುದು ಕೂಡ ವಿಪರ್ಯಾಸ ಎನ್ನಬಹುದು. ಎರಡನೇ ಪತ್ನಿಗೆ ಬೇರೆ ಗಂಡಸರ ಜೊತೆಗೆ ಮಲಗಲು ಹೇಳುತ್ತಿದ್ದ ಪತಿರಾಯ, ಎಲ್ಲಾ ಸಹಿಸಿಕೊಂಡ ಈ ಮಹಿಳೆಯೂ ಯಾರು ಅಂದುಕೊಳ್ಳಲಾರದ ನಿರ್ಧಾರ ಕೈಗೊಂಡಿದ್ದಳು. ಈಕೆಯ ನಿರ್ಧಾರವೇ ಎಲ್ಲರನ್ನು ಬೆಚ್ಚಿ ಬೀಳಿಸುವಂತೆ ಇತ್ತು.
ಕರ್ನಾಟಕದ ರಿಯಲ್ ಎಸ್ಟೇಟ್ ಉದ್ಯಮಿ ಬೆಂಗಳೂರಿನ ಪಾಲಾರ್ ಸ್ವಾಮಿ ಅಲಿಯಾಸ್ ಸ್ವಾಮಿರಾಜ್ ಬೆಂಗಳೂರಿನ ಉತ್ತರ ತಾಲೂಕಿನಲ್ಲಿ ಲೇಔಟ್ ಮಾಡಿ ಕೋಟ್ಯಂತರ ರೂಪಾಯಿ ಹೊಂದಿದ್ದ ಪಾಲಾರ್ ಸ್ವಾಮಿಗೆ ಮದುವೆಯಾಗಿದ್ದು, ಪತ್ನಿಯ ಜೊತೆಗೆ ಸುಖವಾಗಿ ಸಂಸಾರ ಮಾಡುತ್ತಿದ್ದರು. ವ್ಯಾಪಾರದಲ್ಲಿ ಅಪಾರ ಲಾಭ ಪಡೆದು ಕೋಟಿಗಟ್ಟಲೆ ಸಂಪಾದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದರು.
ಹೀಗಿರುವಾಗ ಆರು ವರ್ಷಗಳ ಹಿಂದೆ ಬ್ಯೂಟಿಷಿಯನ್ ನೇತ್ರಾ ಪರಿಚಯವಾಯಿತು. ಆ ಪರಿಚಯ ಸ್ನೇಹವಾಗಿ ಮಾರ್ಪಟ್ಟಿತು. ಕೆಲವು ವರ್ಷಗಳ ಹಿಂದೆ ನೇತ್ರಾ ಅವರನ್ನು ಮದುವೆಯಾಗಿದ್ದರು. ಮದುವೆಯಾದ ನಂತರ ಆಕೆಗಾಗಿ ಕೇತನಹಳ್ಳಿಯಲ್ಲಿ ಆರು ಕೋಟಿ ರೂಪಾಯಿಗಳಲ್ಲಿ ಐಷಾರಾಮಿ ಬಂಗಲೆಯನ್ನು ನಿರ್ಮಾಣ ಮಾಡಿದ್ದನು. ಹೀಗಿರುವಾಗ ಪಾಲರ್ ಸ್ವಾಮಿ ಹ-ತ್ಯೆಯಾಗಿತ್ತು.
ಇತ್ತ ಪಾಲಾರ್ ಸ್ವಾಮಿಯನ್ನು ಕೊಂ-ದ ಎರಡನೇ ಪತ್ನಿ ನೇತ್ರಾ ಮಾದನಾಯಕನಹಳ್ಳಿ ಠಾಣೆಗೆ ತೆರಳಿ ಶರಣಾಗಿದ್ದಳು. ಆ ಪಾಲಾರ್ ಸ್ವಾಮಿಯು ವಿದೇಶಿ ಪುರುಷರನ್ನು ಜೊತೆಗೆ ಒಳ್ಳೆಯ ಸಂಬಂಧ ಹೊಂದಲು ಆಕೆಗೆ ಕಿರುಕುಳ ನೀಡುತ್ತಿದ್ದನು ಎನ್ನಲಾಗಿತ್ತು. ಪ-ರಪುರುಷರ ಜೊತೆಗೆ ಮಲಗಲು ಹೇಳುತ್ತಿದ್ದನು.
ಹಾಗಾಗಿ ಪತಿಯನ್ನು ಕೊಂ-ದಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಳು. ಇದೇ ವೇಳೆ ಮೊದಲ ಪತ್ನಿಯೂ, ತಮ್ಮ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆಂಬ ಕೋಪದಿಂದ ನೇತ್ರಾಳು ಪತಿಯನ್ನು ಕೊ-ಲೆ ಮಾಡಿದ್ದಾಳೆ ಎಂದು ಆರೋಪಿಸಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.