ಗಂಡ ಗೆಳತಿಯೊಂದಿಗೆ ರೋಮ್ಯಾನ್ಸ್ ಮಾಡುತ್ತಿರುವಾಗಲೇ ಹೆಂಡತಿಗೆ ವಿಡಿಯೋ ಕಾಲ್ ಮಾಡುತ್ತಿದ್ದ.. ರೊಚ್ಚಿಗೆದ್ದ ಪತ್ನಿ ಅಪ್ರಾಪ್ತ ಮಗಳೊಂದಿಗೆ ಸೇರಿ ಪತಿಯನ್ನು ಏನು ಮಾಡಿದ್ದಾಳೆ ನೋಡಿ!!!

Husband video calling wie with girl friend : ಇತ್ತೀಚೆಗಿನ ದಿನಗಳಲ್ಲಿ ಸಂಬಂಧಗಳು ತನ್ನ ಮೌಲ್ಯವನ್ನು ಕಳೆದುಕೊಂಡು ಬಿಟ್ಟಿದೆ. ಹೀಗಾಗಿ ದಿನಬೆಳಗಾಗದರೆ ಕೊ-ಲೆ ಸೇರಿದಂತೆ ಆತ್ಯಾ- ಚಾರ ಸೇರಿದಂತೆ ಇನ್ನಿತ್ತರ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆದರೆ ಇದೀಗ ತಾಯಿ ಮಗಳು ಸೇರಿಕೊಂಡು ಮಾಡಿದ ಕೆಲಸದ ಬಗ್ಗೆ ತಿಳಿದರೆ ಶಾಕ್ ಆಗುವುದು ಪಕ್ಕಾ. ಹೌದು, ಕೋಪಗೊಂಡ ಪತ್ನಿ ತನ್ನ ಅಪ್ರಾಪ್ತ ಮಗಳ ಜೊತೆ ಸೇರಿ ಪತಿಯನ್ನು ಬರ್ಬರವಾಗಿ ಹ-ತ್ಯೆ ಮಾಡಿದ್ದಾಳೆ.

ಗಾಜಿಯಾಬಾದ್‌ನ ಮಧುಬನ್ ಬಾಪುಧಾಮ್ ಪೊಲೀಸ್ ಠಾಣೆ ವ್ಯಾಪ್ತಿಯ ಸಂಜಯ್ ನಗರ ಪ್ರದೇಶದಲ್ಲಿ ಈ ಪ್ರಕರಣವವು ಬೆಳಕಿಗೆ ಬಂದಿದೆ. ಪೊಲೀಸರ ವಿಚಾರಣೆ ವೇಳೆ ಆರೋಪಿ ಪತ್ನಿಶಾಲು, ತನ್ನ ಪತಿ ಅಮಿತ್ ವರ್ಮಾ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಗಿ ತಿಳಿಸಿದ್ದಾಳೆ. ಈ ವಿಚಾರವಾಗಿ ಅವರ ನಡುವೆ ಆಗಾಗ ಜಗಳ ನಡೆಯುತ್ತಿತ್ತು.

ಅಮಿತ್ ತನ್ನ ಗೆಳತಿಯೊಂದಿಗೆ ಚೆಲ್ಲಾಟವಾಡುತ್ತಿದ್ದ ವೇಳೆಯಲ್ಲಿ ತನ್ನ ಹೆಂಡತಿಗೆ ವೀಡಿಯೊ ಕರೆಗಳನ್ನು ಮಾಡುತ್ತಿದ್ದ ಎನ್ನಲಾಗಿದೆ. ಅದಲ್ಲದೇ ಸಂಜಯ್ ನಗರ ಸೆಕ್ಟರ್ -23 ರ ಎಂ-ಬ್ಲಾಕ್ ನಿವಾಸಿ 40 ವರ್ಷದ ಆಭರಣ ವ್ಯಾಪಾರಿ ಅಮಿತ್ ವರ್ಮಾ ಅವರ ತಲೆಯ ಮೇಲೆ ಭಾರವಾದ ವಸ್ತುವಿನಿಂದ ಹ-ಲ್ಲೆ ನಡೆಸಲಾಗಿದೆ. ಭಾನುವಾರ ಮುಂಜಾನೆ ಅಮಿತ್ ಅವರ ಕಾರಿನಲ್ಲಿ ಶ-ವವು ಬಿದ್ದಿತ್ತು.

ಕಾರಿನೊಳಗೆ ಮತ್ತು ಅಪರಾಧ ನಡೆದ ಸ್ಥಳದಲ್ಲಿ ರ-ಕ್ತದ ಕುರುಹುಗಳು ಕಂಡುಬಂದಿವೆ. ಪೊಲೀಸರು ಶ-ವವನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.ಪೊಲೀಸರ ಪ್ರಕಾರ, ಅಮಿತ್ ವರ್ಮಾ ಶನಿವಾರ ರಾತ್ರಿ ಸಹರಾನ್‌ಪುರಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಮಧುಬನ್ ಬಾಪುಧಾಮ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಾಗನಾರ್ ಕಾರು ಕಮಲ ನೆಹರು ನಗರದ ರಸ್ತೆಯಲ್ಲಿ ನಿಂತಿರುವುದು ಪತ್ತೆಯಾಗಿದೆ.

ಭಾನುವಾರ ಮುಂಜಾನೆ 4 ಗಂಟೆಗೆ ಪೊಲೀಸರು ಗಸ್ತು ತಿರುಗಲು ಹೋದಾಗ ಕಾರನ್ನು ಗಮನಿಸಿದರು. ಕಾರಿನೊಳಗೆ ಯುವಕನೊಬ್ಬ ಶ-ವವಾಗಿ ಪತ್ತೆಯಾಗಿದ್ದು, ಆತನನ್ನು ಅಮಿತ್ ವರ್ಮಾ ಎಂದು ಗುರುತಿಸಲಾಗಿದೆ. ಈ ಅಮಿತ್ ವರ್ಮಾ ಅವರ ತಲೆಗೆ ಭಾರವಾದ ವಸ್ತುವಿನಿಂದ ಹೊಡೆದು ಕೊ-ಲೆ ಮಾಡಲಾಗಿದೆ. ಕಾರಿನಲ್ಲಿ ರಕ್ತದ ಕಲೆಗಳೂ ಪತ್ತೆಯಾಗಿವೆ. ಪೊಲೀಸರು ಶ-ವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಈ ಪ್ರಾಥಮಿಕ ತನಿಖೆಯಲ್ಲಿ ಮೃ-ತನಿಗೆ ಬೇರೆ ಮಹಿಳೆಗೆ ಸಂಬಂಧವಿರುವುದು ಪೊಲೀಸರಿಗೆ ತಿಳಿದು ಬಂದಿದೆ. ಪೊಲೀಸರು ಮೃ-ತನ ಪತ್ನಿಯನ್ನು ವಿಚಾರಣೆ ನಡೆಸಿದಾಗ ಆಕೆಯ ಮಾತಿನಲ್ಲಿ ವೈರುಧ್ಯ ಕಂಡು ಬಂದಿತು. ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆಕೆಯು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಪತಿಯೂ ಅಕ್ರಮ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಆಕೆ ಪತಿಯ ಕೊ-ಲೆ ಮಾಡಿದ್ದಾಳೆ.

ಅದಲ್ಲದೇ, ಮನೆಯಲ್ಲಿ ಪತಿಯ ಕಥೆ ಮುಗಿಸಿ ಬಳಿಕ ಶ- ವವನ್ನು ಕಾರಿನಲ್ಲಿ ಹಾಕಿಕೊಂಡು, ಹೇಳಲಾಗದ ಸ್ಥಿತಿಯಲ್ಲಿ ಶ-ವವನ್ನು ಬಿಟ್ಟು ಹೋಗಿದ್ದಾಳೆ ಎಂದು ಹೇಳಲಾಗುತ್ತಿದೆ. ಕೊ-ಲೆಯ ಕುರುಹುಗಳನ್ನು ಮರೆಮಾಚಲು ಪತ್ನಿ ಮತ್ತು ಮಗಳು ರಕ್ತಸಿಕ್ತ ಹಾಸಿಗೆಯನ್ನು ತೊಳೆದು ರಾತ್ರಿ ಟೇರೆಸಿನ ಮೇಲೆ ಒಣಗಿಸಿ ಮನೆಯ ಮೆಟ್ಟಿಲುಗಳನ್ನೂ ತೊಳೆದಿದ್ದರು ಎನ್ನಲಾಗಿದೆ. ಮಗಳ ಜೊತೆಗೆ ಸೇರಿ ಪತ್ನಿ ಜೀವ ತೆಗೆದ ಆರೋಪಿಯೂ ಕೊನೆಗೂ ಸಿಕ್ಕಿ ಬಿದ್ದಿದ್ದಾಳೆ.

Leave a Reply

Your email address will not be published. Required fields are marked *