ಬದುಕಿನಲ್ಲಿ ಎಲ್ಲಾ ಸಂಬಂಧಗಳು ಬಹಳ ಮುಖ್ಯವೇ. ಆದರೆ ಬದುಕಿನಲ್ಲಿ ಸಾಗುತ್ತಿರುವಾಗ ಕೆಲವೊಂದಷ್ಟು ಜನರು ಪರಿಚಯವಾಗುತ್ತಾರೆ, ಸ್ನೇಹ ಸಂಬಂಧವನ್ನು ಹೊಂಡುತ್ತಾರೆ. ಈ ವೇಳೆ ಇಂತಹ ಸಂಬಂಧಗಳು ಬದುಕಿಗೆ ಹಿತವೆನಿಸುತ್ತದೆ ನಿಜ, ಆದರೆ ಗುರುತತು ಪರಿಚಯವಿಲ್ಲದೇ ಇರುವ ವ್ಯಕ್ತಿಯನ್ನು ನಂಬುವಾಗ ಸಾವಿರ ಬಾರಿ ಯೋಚನೆ ಮಾಡಬೇಕಾಗುತ್ತದೆ. ಒಂದು ವೇಳೆ ಆತುರದಿಂದ ಏನಾದರೂ ವ್ಯಕ್ತಿಯ ಬಗ್ಗೆ ಯೋಚನೆ ಮಾಡದೇನೇ ಹತ್ತಿರವಾಗುವುದು ಒಳ್ಳೆಯದಲ್ಲ.
ಮೂರನೇ ವ್ಯಕ್ತಿಯ ಪರಿಚಯ ಸುಖವಾದ ಸಂಸಾರವನ್ನೇ ದಿಕ್ಕು ತಪ್ಪಿಸಿಬಿಡುತ್ತದೆ. ಈಗಾಗಲೇ ಇಂತಹ ಸಾಕಷ್ಟು ಘಟನೆಗಳು ನಮ್ಮ ಸುತ್ತ ಮುತ್ತಲಲ್ಲಿಯೇ ನಡೆದಿದೆ. ತ್ರಿಶೂರ್‌ನ ಕೊರಟ್ಟಿಯಲ್ಲಿ ಅತ್ತೆಯ ಸ್ನೇಹಿತ ಯುವತಿಯ ಮೇಲೆ ಅಮಾನುಷವಾಗಿ ಹ-ಲ್ಲೆ ನಡೆಸಿದ್ದು, ಈ ಯುವತಿ ಗಂಭೀರವಾಗಿ ಗಾಯಗೊಂಡಿದ್ದರು. ಹಲ್ಲೆಗೊಳಗಾದ ಯುವತಿಯನ್ನು ಪೆರುಂಬವೂರ್‌ನ ಎಂಎಸ್ ವೈಷ್ಣವಿ ಎಂದು ಗುರುತಿಸಲಾಗಿತ್ತು. ಅಂತಿಮ ವರ್ಷದ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ವೈಷ್ಣವಿ ಅಂಗಮಾಲಿಯ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಈ ವೈಷ್ಣವಿಯು ಈ ಘಟನೆ ನಡೆಯುವ ಆರು ತಿಂಗಳ ಹಿಂದೆ ಕೊರಟ್ಟಿಯ ಪಾಲಪ್ಪಲ್ಲಿ ಮೋಝಿಕುಲಂ ಮೂಲದ ಮುಖೇಶ್ ಅವರನ್ನು ವಿವಾಹವಾಗಿದ್ದರು. ಆದರೆ ಅತ್ತೆಗೆ ಬೇರೆ ವ್ಯಕ್ತಿಯ ಜೊತೆಗೆ ಸಂಬಂಧವಿತ್ತು. ಈ ಸಂಬಂಧವನ್ನು ಬಯಲಿಗೆಳೆದಾಗ ಅತ್ತೆಯ ಸ್ನೇಹಿತ ತನ್ನ ಮೇಲೆ ಹ-ಲ್ಲೆ ನಡೆಸಿದ್ದಾಗಿ ಆಕೆ ಹೇಳಿದ್ದಳು. ಅತ್ತೆಯ ಜೊತೆಗೆ ಸಂಬಂಧ ಹೊಂದಿರುವ ವ್ಯಕ್ತಿಯು ತಮ್ಮ ಮನೆಯಿಂದ ಮೂರು ಕಿಲೋಮೀಟರ್ ದೂರದಲ್ಲಿ ವಾಸಿಸುತ್ತಿದ್ದಾರೆ.
ಒಂದು ದಿನ ಈ ಯುವತಿಯು ಆತನನ್ನು ತನ್ನ ಮನೆಗೆ ಪ್ರವೇಶಿಸದಂತೆ ತಡೆಯಲು ಯತ್ನಿಸಿದ್ದಳು. ಭಾನುವಾರ ರಾತ್ರಿ ನೆರೆಮನೆಯವರೊಂದಿಗೆ ಮಾತನಾಡುತ್ತಿದ್ದಾಗ ಆಕೆಯ ಮುಖಕ್ಕೆ ಹೊ-ಡೆದಿದ್ದನು. ಆಕೆಯ ಪತಿಯ ಮೇಲೆ ಕೂಡ ಹ-ಲ್ಲೆ ಮಾಡಲು ಮುಂದಾಗಿದ್ದು, ಪತಿಯು ತಕ್ಷಣವೇ ನೆರೆಹೊರೆಯವರಿಗೆ ಕರೆ ಮಾಡಿದ್ದನು. ನೆರೆಹೊರೆಯವರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಆಸ್ಪತ್ರೆಗೆ ಬಂದಿದ್ದರು. ಆ ವ್ಯಕ್ತಿಯು ತಲೆಮರೆಸಿಕೊಂಡಿದ್ದರಿಂದ ಬಂಧಿಸಲು ಸಾಧ್ಯವಾಗಲಿಲ್ಲ.
ಇತ್ತ ವೈಷ್ಣವಿ ಪತಿ ಮುಖೇಶ್ ಪೊಲೀಸರಿಗೆ ದೂ-ರು ನೀಡಿದ್ದರು. ಅತ್ತೆ ಮತ್ತು ಗಂಡನ ಸಹೋದರರು ತನಗೆ ಹಿಂ-ಸೆ ನೀಡುತ್ತಿದ್ದರು. ಮದುವೆಯಾದ ದಿನದಿಂದಲೂ ಅತ್ತೆ ಕಿ-ರುಕುಳ ನೀಡುತ್ತಿದ್ದರು.ಪತಿ ಕೆಲಸಕ್ಕೆ ಹೋದ ನಂತರ ಆಕೆಯನ್ನು ರೂಮಿನಲ್ಲಿ ಕೂಡಿ ಹಾಕುತ್ತಿದ್ದರು. ಆಹಾರವನ್ನೂ ನೀಡುತ್ತಿರಲಿಲ್ಲ, ಶೌಚಾಲಯದ ನೀರು ಕುಡಿಯುತ್ತಿದ್ದೆ ಎಂದು ಹೇಳಿದ್ದಳು. ಇತ್ತ ಮುಕೇಶ್ ತಮ್ಮ ಪತ್ನಿ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಎಲ್ಲವನ್ನೂ ಬಹಿರಂಗಪಡಿಸಿದ್ದರು.