ಭಾರತದಲ್ಲಿ ಶೇಕಡಾ 10ರಷ್ಟು ಮಹಿಳೆಯರು ತಮ್ಮ ಗಂಡನನ್ನು ಹೊ ಡೆಯುತ್ತಾರೆ.ಇದರ ವಿರುದ್ಧ ಹೋರಾಡಲು ಗಂಡಸರಿಗೆ ಯಾವುದಾದರೂ ಕಾನೂನು ಇದೆಯೇ!! ಕಾನೂನು ಇದರ ಬಗ್ಗೆ ಏನು ಹೇಳುತ್ತೆ ನೋಡಿ !!!

Husband and wife interesting census : ಸತಿ ಪತಿಯ ನಡುವಿನ ಕಲಹ, ಜಗಳಗಳು ಅದೇನಿದ್ದರೂ ಉಂಡು ಮಲಗುವ ತನಕ ಎನ್ನುವ ಗಾದೆವೊಂದಿತ್ತು. ಆದರೆ ಇದೀಗ ಕಾಲ ಬದಲಾಗಿದೆ, ಸತಿಪತಿ ಜಗಳವು ವಿಪರೀತವಾಗಿ ಕೊನೆಗೆ ಬೇಡದ ಘಟನೆಗಳಿಗೆ ಎಡೆ ಮಾಡಿಕೊಡುವ ಸಂಭವವೇ ಹೆಚ್ಚು. ಆದರೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 5 ಅಂಕಿಅಂಶಗಳ ಪ್ರಕಾರ ಕೆಲವು ಮಾಹಿತಿಗಳು ಹೊರ ಬಿದ್ದಿದೆ.

18 ರಿಂದ 49 ವರ್ಷ ವಯಸ್ಸಿನ 10 ಪ್ರತಿಶತದಷ್ಟು ಮಹಿಳೆಯರು ತಮ್ಮ ಗಂಡನ ಮೇಲೆ ಒಂದಲ್ಲ ಒಂದು ಬಾರಿ ಕೈ ಎತ್ತಿದ್ದಾರೆ. ಅದೂ ಕೂಡ ಪತಿ ತನ್ನ ಮೇಲೆ ಯಾವುದೇ ರೀತಿಯ ಹಿಂಸೆ ನೀಡದಿದ್ದಾಗ ಕೈ ಎತ್ತಿದ್ದಾರೆ. ಅದಲ್ಲದೇ, ವಿನಾಕಾರಣ ಶೇ.10ರಷ್ಟು ಮಹಿಳೆಯರು ತಮ್ಮ ಪತಿಯನ್ನು ಥಳಿಸಿದ್ದಾರೆ.ಈ ಸಮೀಕ್ಷೆಯ ಸಮಯದಲ್ಲಿ ಸಿಕ್ಕ ಮಾಹಿತಿಯ ಪ್ರಕಾರ, 11 ಪ್ರತಿಶತದಷ್ಟು ಮಹಿಳೆಯರು ಕಳೆದ ಒಂದು ವರ್ಷದಲ್ಲಿ ತಮ್ಮ ಗಂಡನೊಂದಿಗೆ ದೌ-ರ್ಜನ್ಯ ಎಸಗಿದ್ದಾರೆ.

ತಮ್ಮ ಗಂಡನೊಂದಿಗೆ ದೌರ್ಜನ್ಯ ಎಸಗುವ ಮಹಿಳೆಯರ ಸಂಖ್ಯೆಯಲ್ಲಿ ವಯಸ್ಸಾಗಿರುವ ಮಹಿಳೆಯರೇ ಹೆಚ್ಚು. ಹೌದು, 18 ರಿಂದ 19 ವರ್ಷ ವಯಸ್ಸಿನ ಮಹಿಳೆಯರಲ್ಲಿ ಶೇಕಡಾ 1 ಕ್ಕಿಂತ ಕಡಿಮೆ ಜನರು ತಮ್ಮ ಗಂಡನ ಮೇಲೆ ದೌ-ರ್ಜನ್ಯ ಎಸಗಿದ್ದಾರೆ. ಆದರೆ, 20 ರಿಂದ 24 ವರ್ಷ ವಯಸ್ಸಿನ ಸುಮಾರು 3 ಪ್ರತಿಶತ ಮಹಿಳೆಯರು ತಮ್ಮ ಗಂಡನ ಮೇಲೆ ದೌ-ರ್ಜನ್ಯ ಎಸಗಿದ್ದಾರೆ. ಇನ್ನು, 20 ರಿಂದ 24 ವರ್ಷ ವಯಸ್ಸಿನ ಸುಮಾರು 3 ಪ್ರತಿಶತ ಮಹಿಳೆಯರು ತಮ್ಮ ಗಂಡನ ಮೇಲೆ ದೌ-ರ್ಜನ್ಯ ಎಸಗಿದ್ದಾರೆ.

ಅದಲ್ಲದೇ, 25 ರಿಂದ 29 ವರ್ಷ ವಯಸ್ಸಿನ 3.4%, 30 ರಿಂದ 39 ವರ್ಷ ವಯಸ್ಸಿನ 3.9%, ಮತ್ತು 40 ರಿಂದ 49 ವರ್ಷ ವಯಸ್ಸಿನ 3.7% ಮಹಿಳೆಯರು ತಮ್ಮ ಗಂಡನ ಮೇಲೆ ದೌರ್ಜನ್ಯ ಎಸೆಗಿದ್ದಾರೆ ಎನ್ನಲಾಗಿದೆ. ಅಂಕಿಅಂಶಗಳ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಮಹಿಳೆಯರು ತಮ್ಮ ಗಂಡನೊಂದಿಗೆ ನಗರ ಪ್ರದೇಶಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಹಿಂಸೆ ಮಾಡುತ್ತಾರೆ. ನಗರ ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರು 3.3% ರಷ್ಟಿದ್ದರೆ ಗ್ರಾಮೀಣ ಪ್ರದೇಶಗಳಲ್ಲಿನ ಮಹಿಳೆಯರು 3.7% ಎನ್ನಲಾಗಿದೆ.

ಪತಿ ಪತ್ನಿಯ ಮೇಲೆ ಹ-ಲ್ಲೆ ನಡೆಸಲಿ ಅಥವಾ ಪತ್ನಿ ಪತಿ ಮೇಲೆ ಹಲ್ಲೆ ನಡೆಸಲಿ ಎರಡೂ ಪ್ರಕರಣಗಳು ಅಪರಾಧವೇ. ಆದರೆ ಪತ್ನಿಯರು ಕೌಟುಂಬಿಕ ದೌ-ರ್ಜನ್ಯ ಕಾನೂನನ್ನು ಹೇಗೆ ಹೊಂದುತ್ತಾರೆ, ಅದೇ ಕಾನೂನು ಗಂಡಸರಿಗೆ ಇಲ್ಲ. ಈ ಹಿಂದೆ ಜೂನ್‌ನಲ್ಲಿ ಪತಿ-ಪತ್ನಿಯರ ಇಂತಹ ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ಮದ್ರಾಸ್ ಹೈಕೋರ್ಟ್ ಮಹತ್ವದ ಅಭಿಪ್ರಾಯವನ್ನು ನೀಡಿತ್ತು.

ಪತ್ನಿಯ ವಿರುದ್ಧ ಪ್ರಕರಣ ದಾಖಲಿಸಲು ಪತಿಗೆ ಕೌಟುಂಬಿಕ ದೌ-ರ್ಜನ್ಯದಂತಹ ಕಾನೂನು ಇಲ್ಲದಿರುವುದು ವಿಷಾದನೀಯ ಎಂದು ಹೈಕೋರ್ಟ್ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು. ಕೌಟುಂಬಿಕ ದೌ-ರ್ಜನ್ಯದಿಂದ ರಕ್ಷಣೆ ನೀಡುವ ಕಾನೂನು ಪತ್ನಿಯರಿಗೆ ಮಾತ್ರವೇ ಹೊರತು ಪತಿಗಳಿಗೆ ಅಲ್ಲ. ಹಾಗಾಗಿ ಹೆಂಡತಿ ತನ್ನ ಪತಿಯನ್ನು ಹೊಡೆಯುತ್ತಿದ್ದರೆ, ಅಂತಹ ಪ್ರಕರಣಗಳು ದೊಡ್ಡ ಮಟ್ಟದಲ್ಲಿ ಸುದ್ದಿ ಯಾಗುವುದೇ ಇಲ್ಲ.ಅಷ್ಟೇ ಅಲ್ಲದೇ ಹಿಂ- ಸೆ ಎನಿಸಿಕೊಳ್ಳುವುದೇ ಇಲ್ಲ ಎನ್ನುವುದು ನಿಜಕ್ಕೂ ವಿಪರ್ಯಾಸ.

Leave a Reply

Your email address will not be published. Required fields are marked *