ಸೊಸೆಯ ಸಾ ವಿನ ಸುದ್ದಿ ಕೇಳಿ ಅತ್ತೆಗೆ ಹೃದಯಘಾ ತ. ಮಂಡ್ಯದಲ್ಲಿ ಮನಕಲಕುವ ಘಟನೆ.

ಈಗಿನ ಕಾಲದಲ್ಲಿ ಅತ್ತೆ ಸೊಸೆಯರು ಹಾವು ಮುಂಗುಸಿ ತರ ಜಗಳ ಆಡುವುದು ಹೆಚ್ಚು. ಅತ್ತೆ ಸೊಸೆಯರು ತಾಯಿ ಮಗಳು ತರ ಇರುವುದು ತುಂಬಾ ವಿರಳ. ಮಂಡ್ಯದಲ್ಲಿ ಸೊಸೆ ಸಾ ವನ್ನಪ್ಪಿದ್ದ ಸುದ್ದಿ ಕೇಳಿ ಅತ್ತೆಗೆ ಹೃದಯಘಾ ತವಾಗಿದೆ. ಇದಕ್ಕೂ ಈ ಘಟನೆಯನ್ನು ಕೇಳಿದರೆ ಆ ಅತ್ತೆ ಸೊಸೆಯ ಮಧ್ಯ ಎಂತಹ ಸಂಬಂಧ ಇರಬಹುದು ಎಂದು ನಮಗೆಲ್ಲ ಯೋಚನೆ ಬರುತ್ತೆ.

ಮಂಡ್ಯದ ನಾಗಮಂಗಲ ತಾಲೂಕಿನ ಕಾಡು ಅಂಕನಹಳ್ಳಿ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ.ಸೊಸೆಯ ಹೆಸರು ಸುಶೀಲ . ಸುಶೀಲಾ ಗೆ ಎರಡು ಜನ ಮಕ್ಕಳಿದ್ದರೂ ಮತ್ತು 40ನೇ ವಯಸ್ಸಿನಿಂದಲೇ ಅನಾರೋಗ್ಯದಿಂದ ಬಳಲುತ್ತಿದ್ದಳು. ಹುಚ್ಚಮ್ಮ ಗೆ ಐದು ಜನ ಗಂಡು ಮಕ್ಕಳು ಎರಡನೇ ಗಂಡು ಮಗುವಿನ ಹೆಂಡತಿಯೇ ಸುಶೀಲಾ.

ಬದುಕಿದ್ದಾಗ ಸುಶೀಲ ಮತ್ತು ಹುಚ್ಚಮ್ಮ ಊರಿಗೆಲ್ಲ ಮಾದರಿಯಾಗಿದ್ದರು. ಇಬ್ಬರೂ ಕೂಡ ತಾಯಿ ಮಗಳಂತೆ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದರು. ನವೆಂಬರ್ 23ರ ಸಂಜೆ ಸುಶೀಲ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಕೊನೆ ಉಸಿರು ಎಳೆದಿದ್ದಾಳೆ.. ಈ ವಿಷಯ ಮನೆ ಮುಟ್ಟುತ್ತಿದ್ದಂತೆ ಅತ್ತೆ ಹುಚ್ಚಮ್ಮಗೆ ನೋವನ್ನು ತಡೆದುಕೊಳ್ಳಲಾಗಲಿಲ್ಲ ಆಕೆ ಕೂಡ ಕಣ್ಣು ಮುಚ್ಚಿದ್ದಾಳೆ.

ಊರಿಗೆಲ್ಲ ಈ ದಿನ ನೀರವ ಮೌನವಾಗಿತ್ತು. ಕೊನೆಗೆ ಮತ್ತೆ ಸೊಸೆ ಇಬ್ಬರನ್ನು ಒಂದೇ ಜಾಗದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದೆ. ಕೆಲವೊಮ್ಮೆ ಸಂಬಂಧಗಳು ಚೆನ್ನಾಗಿದ್ದಾಗ ದೇವರಿಗೆ ಅದು ಇಷ್ಟವಾಗುವುದಿಲ್ಲವಾ.. ಏನು? ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತೆ..

Leave a Reply

Your email address will not be published. Required fields are marked *