ನಾಲ್ಕೈದು ಕೋಟಿಯ ಒಡತಿ ಹಿರಿಯ ನಟಿ ಪಂಡರಿ ಬಾಯಿಯವರ ಕೊನೆಯ ದಿನಗಳು ಹೇಗಿತ್ತು ಗೊತ್ತಾ? ನಿಜಕ್ಕೂ ದುರಂತ!!

ಕನ್ನಡ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದ ಕೆಲವು ನಟ ನಟಿಯರನ್ನು ಸಿನಿಪ್ರೇಕ್ಷಕರು ಇವತ್ತಿಗೂ ನೆನಪಿಸಿಕೊಳ್ಳುತ್ತಾರೆ. ಅಂತಹವರ ಸಾಲಿಗೆ ನಟಿ ಪಂಡರಿಬಾಯಿ (Pandari Bai) ಕೂಡ ಸೇರಿಕೊಳ್ಳುತ್ತಾರೆ. ಕನ್ನಡ ಮಾತ್ರವಲ್ಲದೇ ಇತರ ಭಾಷೆಯಲ್ಲೂ ಸೇರಿ ಸರಿಸುಮಾರು 1500ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ 800ಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿದ್ದ ಈ ಹಿರಿಯ ನಟಿಯ ಸಾಧನೆಯೂ ಎಲ್ಲರಿಗೂ ಮಾದರಿಯಾಗುವಂತಹದ್ದು.

ಕನ್ನಡ (Kannada), ತೆಲುಗು (Telugu) , ತಮಿಳು (Tamil), ಹಿಂದಿ (Hindi), ಮಲಯಾಳಂ (Malayalam) ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನಟಿ ಪಂಡರಿಬಾಯಿಯಾವರು 70-80ರ ದಶಕದಲ್ಲಿ ಬಹುಬೇಡಿಕೆಯಲ್ಲಿದ್ದ ನಟಿ. ಆದರೆ ಸಾಲು ಸಾಲು ಅವಕಾಶಗಳನ್ನು ಗಿಟ್ಟಿಸಿಕೊಂಡು ಸಿನಿಮಾರಂಗವನ್ನು ಆಳಿದ ನಟಿಯ ಬದುಕು ಕೊನೆಯ ದಿನಗಳಲ್ಲಿ ಹೇಗಿತ್ತು ಎಂದು ತಿಳಿದರೆ ಅಚ್ಚರಿಯಾಗುತ್ತದೆ.

ಪಂಡರಿ ಬಾಯಿಯವರ ತಂದೆ ಹೆಚ್ಚಾಗಿ ನಾಟಕ, ಹರಿ ಕಥೆಗಳಲ್ಲಿ ಅಭಿನಯಿಸುತ್ತಿದ್ದರು. ಅದರಲ್ಲಿ ಬಂದ ಹಣವನ್ನು ಬಡವರಿಗೆ ದಾನ ಮಾಡಿ, ಅಲ್ಪ ಸ್ವಲ್ಪ ಹಣವನ್ನು ಕುಟುಂಬದ ನಿರ್ವಹಣೆಗೆಂದು ಎತ್ತಿಡುತ್ತಿದ್ದರು. ಬಡತನದ ಕುಟುಂಬದಲ್ಲಿದ್ದ ಹುಟ್ಟಿದ್ದ ಪಂಡರಿ ಬಾಯಿಯವರಿಗೆ ತಂದೆಯಂತೆ ನಾಟಕಗಳಲ್ಲಿ ಸಕ್ರಿಯರಾದರು. ಆದಾದ ಬಳಿಕ ಹಿಂದಿಯ ಸಿನಿಮಾಗಳಲ್ಲಿ ನಟಿಸುವ ಅವಕಾಶವು ಸಿಕ್ಕಿತು. ಹೀಗಾಗಿ ಮದ್ರಾಸ್ (Madras) ಕಡೆಗೆ ತಮ್ಮ ಪಯಣ ಬೆಳೆಸಿದರು.

ಆಮೇಲೆ ಪಂಡರಿ ಬಾಯಿ ಮುಟ್ಟಿದ್ದೆಲ್ಲವು ಚಿನ್ನವೇ, ಸಾಲು ಸಾಲು ಅವಕಾಶಗಳನ್ನು ಪಡೆದುಕೊಂಡ ಅವರು, ಸಿನಿಮಾರಂಗದಲ್ಲಿ ಯಾರು ಕೂಡ ಊಹೆ ಮಾಡದ ಮಟ್ಟಕ್ಕೆ ಬೆಳೆದುನಿಂತರು. ಸಿನಿಮಾರಂಗದಲ್ಲಿ ಬೆಳೆಯುತ್ತ ಹೋದಂತೆಲ್ಲಾ ಹಣವು ಕೂಡ ಇವರ ಕಡೆ ಬಂದಿತು. ಹಣ ಸಂಪಾದನೆ ಮಾಡಿ ಎರಡು ಮೂರು ಎಕರೆಗಳಲ್ಲಿ ಸೈಟ್ ಗಳನ್ನು ಕಟ್ಟಿದ್ದರು. ಅದನ್ನು ತಮ್ಮ ಸಹ ಕಲಾವಿದರುಗಳಿಗೆ ಹಾಗೂ ಸಿನಿಮಾರಂಗದಲ್ಲಿರುವವರಿಗೆ ದಾನವಾಗಿ ಕೊಟ್ಟು ಬಿಟ್ಟರು.

ಅಪ್ಪನ ಸಹಾಯ ಮನೋಭಾವವು ಪಂಡರಿಬಾಯಿಯವರಿಗೂ ಬಂದಿತ್ತು. ಅದಲ್ಲದೆ, ಮನೆಯ ಕಾಂಪೌಂಡ್ ಒಳಗೆನೇ ಶ್ರೀ ಪಾಂಡುರಂಗ ಸ್ವಾಮಿ ದೇವಸ್ಥಾನ (Shree Panduranga Swami Temple) ವನ್ನು ಕಟ್ಟಿಸಿದ್ದರು. ಸಿನಿಮಾಗಳಲ್ಲಿ ನಟಿಸಿ ಐದು ಕೋಟಿಗೂ ಅಧಿಕ ಹಣವನ್ನು ಸಂಪಾದನೆ ಮಾಡಿದ್ದ ನಟಿ ಪಂಡರಿಬಾಯಿ ವೈವಾಹಿಕ ಜೀವನದ ಆಯ್ಕೆಯಲ್ಲಿ ಎಡವಿದರು ಎನ್ನಬಹುದು.

50 ವಯಸ್ಸಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಇವರು ಮದುವೆಯಾಗಿ ಮೂರು ಮಕ್ಕಳಿದ್ದ ಪಿಎಚ್ ರಾಮರಾವ್ (P.H Rama Rao) ಅವರ ಜೊತೆಗೆ ಹೊಸ ಬದುಕು ಆರಂಭಿಸಿದರು. ಆದರೆ ಪತಿಯ ಮೊದಲ ಹೆಂಡತಿ ಹಾಗೂ ಮಕ್ಕಳ ಜವಾಬ್ದಾರಿ ಎಲ್ಲವೂ ಇವರ ಮೇಲೆಯೇ ಬಿದ್ದಿತು. ಕೊನೆಗೆ ಸಿನಿಮಾದಲ್ಲಿ ನಟಿಸುತ್ತಿದ್ದ ಇವರು ನಿರ್ಮಾಣಕ್ಕೆ ಕೈ ಹಾಕುವ ಕೆಲಸ ಮಾಡಿದರು. ಸಿನಿಮಾ ನಿರ್ಮಾಣದಿಂದ ತಮ್ಮ ಆಸ್ತಿಯನ್ನು ಕಳೆದುಕೊಂಡರು.

ಹೀಗಿರುವಾಗ ಇವರ ಪಾಲಿಗೆ ಮತ್ತೆ ವಿ-ಧಿಯೂ ಮುನಿಯಿತು. ಆ-ಕ್ಸಿಡೆಂಟ್ ಯಿಂದಾಗಿ ಪಂಡರಿ ಬಾಯಿಯವರ ಎಡಗೈಗೆ ಭಾರಿ ಪೆಟ್ಟು ಬಿದ್ದಿತು. ಹೀಗಾಗಿ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿಗೆ ತಲುಪಿ ಬಿಟ್ಟರು. ಆದರೆ ಅವರನ್ನು ಕಾಳಜಿ ವಹಿಸಲು ಯಾರು ಕೂಡ ಮುಂದೆ ಬರಲಿಲ್ಲ. ಕೊನೆಗೆ ಒಂದು ಕಾಲದಲ್ಲಿ ನಾಲ್ಕೈದು ಕೋಟಿಯ ಒಡತಿಯಾಗಿ ಮೆರೆದಿದ್ದ ಪಂಡರಿ ಬಾಯಿಯವರ ಕೊನೆಯ ದಿನಗಳು ಬಹಳ ಕಷ್ಟಕರವಾಗಿತ್ತು. ಯಾರು ಇವರನ್ನು ನೋಡಿಕೊಳ್ಳಲು ಮುಂದೆ ಬಾರದ ಪರಿಸ್ಥಿತಿಗೆ ಬಂದು ತಲುಪಿದ್ದರು ಎನ್ನುವುದು ನಿಜಕ್ಕೂ ವಿಪರ್ಯಾಸ.

Leave a Reply

Your email address will not be published. Required fields are marked *