ರಾಧಾ ರಮಣ ಧಾರಾವಾಹಿ ಖ್ಯಾತಿಯ ನಟಿ ಕಾವ್ಯಾ ಗೌಡರವರ ಸೀಮಂತ ಶಾಸ್ತ್ರವು ಹೇಗಿತ್ತು? ಇಲ್ಲಿದೆ ನೋಡಿ ಝಲಕ್

ಕನ್ನಡ ಕಿರುತೆರೆ ಲೋಕದಲ್ಲಿ ಗುರುತಿಸಿಕೊಂಡಿರುವ ರಾಧಾ ರಮಣ (Radha Ramana) ಧಾರಾವಾಹಿಯ ಖ್ಯಾತಿಯ ನಟಿ ಕಾವ್ಯಾ ಗೌಡ (Kavya Gowda) ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕಿರುತೆರೆ ಲೋಕದಲ್ಲಿ ಗುರುತಿಸಿಕೊಂಡಿದ್ದ ನಟಿ ಕಾವ್ಯಾಗೌಡ ಕಳೆದ ತಿಂಗಳಷ್ಟೆ ತಾಯಿಯಾಗುತ್ತಿರುವ ಸುದ್ದಿಯನ್ನು ಹಂಚಿಕೊಂಡಿದ್ದರು.

ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ನಟಿ ಕಾವ್ಯಾ ಗೌಡ, ಕಳೆದ ತಿಂಗಳಷ್ಟೇ ಇಬ್ಬರಿದ್ದವರು ಮೂವರಾಗುತ್ತಿದ್ದೇವೆ ಎಂದು ಹೇಳಿಕೊಂಡಿದ್ದರು. ಬೇಬಿ ಬಂಪ್‌ ಫೋಟೋಶೂಟ್‌ ಶೇರ್ ಮಾಡಿಕೊಂಡು ಫ್ಯಾನ್ಸ್ ಗಳನ್ನು ಖುಷಿ ಪಡಿಸಿದ್ದರು. ಆದರೆ ಇದೀಗ, ನಟಿ ಕಾವ್ಯಾ ಗೌಡರವರ ಸೀಮಂತ ಶಾಸ್ತ್ರದ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ.

ಕಳೆದ ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ಕಾವ್ಯಾ ಗೌಡ ಸೀಮಂತ ಕಾರ್ಯಕ್ರಮ ಬೆಂಗಳೂರಿ (Banglore) ನಲ್ಲಿ ಆಪ್ತರು, ಕುಟುಂಬಸ್ಥರ ಸಮ್ಮುಖದಲ್ಲಿ‌ ಸೀಮಂತ ಕಾರ್ಯಕ್ರಮ ನಡೆದಿದೆ. ಸೀಮಂತ ಕಾರ್ಯಕ್ರಮದಲ್ಲಿ ನಾಟುಲೈಟ್ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದಾರೆ.

2021ರಲ್ಲಿ ಉದ್ಯಮಿ ಸೋಮಶೇಖರ್ (Somashekhar) ಜೊತೆ ಕಾವ್ಯಾ ಮದುವೆಯಾಗಿದ್ದು ತಮ್ಮ ಬದುಕಿಗೆ ಹೊಸ ಕಂದಮ್ಮನನ್ನು ಬರಮಾಡಿಕೊಳ್ಳುವ ಸಂಭ್ರಮದಲ್ಲಿದ್ದಾರೆ. ನಟಿ ಕಾವ್ಯಾ ಗೌಡರವರ ವೃತ್ತಿ ಜೀವನದ ಹಿನ್ನಲೆಯನ್ನು ಗಮನಿಸಿದರೆ ಜೀ ಕನ್ನಡದಲ್ಲಿ 2015ರಲ್ಲಿ ಪ್ರಸಾರವಾಗುತ್ತಿದ್ದ ಶುಭ ವಿವಾಹ (Shubha Vivaha) ಧಾರಾವಾಹಿ ಮೂಲಕ ತೆರೆ ಮೇಲೆ ಕಾಣಿಸಿಕೊಂಡರು.

ಆ ಬಳಿಕ ಅದಾದ ರಾಧಾ ರಮಣ (Radha Ramana) ಧಾರಾವಾಹಿಯಲ್ಲಿ ನಟಿಸಿ ಜನಪ್ರಿಯತೆಯನ್ನು ಗಳಿಸಿಕೊಂಡರು. ಬಕಾಸುರ (Bakasura) ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಯತ್ತ ಹೆಜ್ಜೆ ಹಾಕಿದ್ದು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತ ಫ್ಯಾನ್ಸ್ ಗಳ ಸಂಪರ್ಕದಲ್ಲಿದ್ದಾರೆ.

Leave a Reply

Your email address will not be published. Required fields are marked *