ರೇಷನ್ ಕಾರ್ಡ್ ನಲ್ಲಿ ನಿಮ್ಮ ಕುಟುಂಬದ ಹೆಸರನ್ನು ಸೇರಿಸುವುದು ಅಥವ ಬದಲಾಯಿಸುವುದು ಹೇಗೆ ಗೊತ್ತಾ? ಈ ರೀತಿಯಲ್ಲಿ ಸುಲಭವಾಗಿ ಸೇರಿಸಿಕೊಳ್ಳಬಹುದು ನೋಡಿ!!

ರಾಜ್ಯ ಸರ್ಕಾರದಿಂದ ರೇಷನ್ ಕಾರ್ಡ್ ತಿದ್ದುಪಡಿಗೆ ಇನ್ನೂ ಮೂರು ದಿನಗಳ ಕಾಲ ವಿಸ್ತರಣೆಯನ್ನು ಮುಂದೂಡಿದೆ. ಹೌದು ಮೊದಲು ನೀಡಿದ್ದ ಅವಕಾಶದಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಅಲ್ಲಿಗೆ ಸ್ಥಗಿತಗೊಂಡಿತ್ತು. ರಾಜ್ಯ ಸರ್ಕಾರ ಈಗ ಫಲಾನುಭವಿಗಳಿಗೆ ಮತ್ತೆ ಮೂರು ದಿನದ ಅವಕಾಶವನ್ನು ವಿಸ್ತರಿಸಿದ್ದು ಈ ಸಮಯದಲ್ಲಿ ಫಲಾನುಭವಿಗಳು ತಮ್ಮ ಪಡಿತರ ಚೀಟಿಯಲ್ಲಿ ತಿದ್ದುಪಡಿಯನ್ನು ಮಾಡಬೇಕಾಗಿದೆ.

ಈಗ ನೀವು ಮಾಡಬೇಕಾದದ್ದು ಇಷ್ಟೇ, ಗ್ರಹಲಕ್ಷ್ಮಿ ಹಣವಾಗಲಿ ಅನ್ನಭಾಗ್ಯ ಹಣವಾಗಲಿ ಯಾರು ಸ್ವೀಕರಿಸಲು ಅರ್ಹರಾಗಿರುತ್ತಾರೋ ಅಂದರೆ ನಿಮ್ಮ ಯಾರ ಹೆಸರಿಗೆ ಯಾರ ಖಾತೆಗೆ ಹಣವು ಜಮಾವಣೆ ಆಗಬೇಕು ಅಂತಹವರ ಹೆಸರನ್ನು ಮನೆಯ ಮುಖ್ಯಸ್ಥರನ್ನಾಗಿ ರೇಶನ್ ಕಾರ್ಡ್ ನಲ್ಲಿ ಸೇರಿಸಬೇಕು. ಏನೋ ಹೊಸದಾಗಿ ಮದುವೆಯಾದವರು ಹಾಗೂ ಚಿಕ್ಕ ಮಕ್ಕಳಿದ್ದವರು ಹೀಗೆ ರೇಷನ್ ಕಾರ್ಡಿನಲ್ಲಿ ನೋಂದಾಯಿಸಿಕೊಳ್ಳಬೇಕು.

ಇನ್ನು ಮರಣ ಹೊಂದಿದವರಲ್ಲಿ ಅವರ ಹೆಸರನ್ನು ರೇಷನ್ ಕಾರ್ಡ್ ನಿಂದ ತೆಗೆಯಬೇಕು. ಈ ರೀತಿ ಮಾಡುವುದರಿಂದ ಮಾತ್ರ ನೀವು ಗೃಹಲಕ್ಷ್ಮಿ ಯೋಜನೆಯ ಅಥವಾ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ಆಗಲು ಸಾಧ್ಯವಿದೆ. ಈ ಕೆಲಸವನ್ನು ಮಾಡಲು ನೀವು ನಿಮ್ಮ ಹತ್ತಿರವಿರುವ ಆಹಾರ ಕಚೇರಿಗೆ ಭೇಟಿ ನೀಡಬೇಕು.

ಅವರು ನಿಮಗೆ ಒಂದು ಫಾರ್ಮ್ ನೀಡುತ್ತಾರೆ ಆ ಫಾರ್ಮ್ ನಲ್ಲಿ ಎಲ್ಲಾ ದಾಖಲಾತಿಗಳನ್ನು ದಾಖಲಿಸಬೇಕು. ಅಧಿಕಾರಿಗಳು ನಿಮ್ಮ ದಾಖಲಾತಿಗಳನ್ನ ಪರಿಶೀಲಿಸಿ ನಿಮಗೆ ಹೊಸ ಪಡಿತರ ಚೀಟಿಯನ್ನು ಕೊಡುತ್ತಾರೆ. ಈ ರೀತಿಯಾಗಿ ನಿಮಗೆ ತಿಳಿಯದೆ ಇರುವ ಕೆಲಸವನ್ನು ನೀವು ನಿಮ್ಮ ಹತ್ತಿರದ ಕಚೇರಿಗೆ ಹೋಗಿ ಸುಲಭವಾಗಿ ಮಾಡಿಕೊಳ್ಳಬಹುದಾಗಿದೆ

ಇನ್ನು ನೀವು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವುದಾದರೆ, ಆಹಾರ ವೆಬ್ಸೈಟ್ ಗೆ ಭೇಟಿ ನೀಡಿ, ಲಾಗಿನ್ ಆಗಬೇಕು ಅಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಬೇಕಾಗುತ್ತದೆ. ನಂತರ ನೀವು ಯಾರ ಹೆಸರನ್ನು ಸೇರಿಸಬೇಕು ಅವರ ಹೆಸರನ್ನ ಅಲ್ಲಿ ಭರ್ತಿ ಮಾಡಬೇಕು. ಅಲ್ಲಿ ಕೇಳುವ ಎಲ್ಲ ದಾಖಲೆಗಳನ್ನು ಸೇರಿಸಬೇಕು. ನಂತರ ಸಬ್ಮಿಟ್ ಬಟನ್ ಅನ್ನು ಒತ್ತಿ. ನಂತರ ನಿಮಗೆ ನೋಂದಣಿ ಸಂಖ್ಯೆ ನಿಮ್ಮ ಮೊಬೈಲ್ ಗೆ ಬರುತ್ತದೆ. ಎಲ್ಲ ಮಾಹಿತಿಗಳು ಸರಿಯಾಗಿದ್ದಲ್ಲಿ ನಿಮಗೆ ಹೊಸ ರೇಷನ್ ಕಾರ್ಡನ್ನು ಕಳುಹಿಸಲಾಗುತ್ತದೆ. ಕಚೇರಿಯು ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ತೆರೆದಿರುತ್ತದೆ ಅಷ್ಟರಲ್ಲಿ ನಿಮ್ಮ ಪಡಿತರ ಚೀಟಿ ತಿದ್ದುಪಡಿಯನ್ನ ಮಾಡಿಕೊಳ್ಳಬಹುದು. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *