ಹೌದು, ಅರಿಶಿನ ಪುಡಿಯನ್ನು ಈ ರೀತಿ ಮಾಡಿಟ್ಟರೆ ಬಹಳ ದಿನಗಳ ಕಾಲ ಕೆಡುವುದಿಲ್ಲ. ಮಾರ್ಕೆಟಿನಿಂದ ತಂದ ಪರಿಶೀಲಪುಡಿಗಿಂತ ಮನೆಯಲ್ಲಿ ಮಾಡಿದ ಅರಿಶಿನಪುಡಿ ಹೆಚ್ಚು ಕಾಲ ಬಾಳಿಕೆಗೆ ಬರುತ್ತದೆ. ಏಕೆಂದರೆ ಹೊರಗಡೆಯಿಂದ ತರುವ ಅರಿಶಿನಪುಡಿ ಒರಿಜಿನಲ್ ಇರುತ್ತೋ ಇಲ್ಲವೋ ಗೊತ್ತಾಗೋದಿಲ್ಲ. ಅದಕ್ಕೆ ಮನೆಯಲ್ಲಿ ಮಾಡಿದ ಅರಿಶಿನ ಪುಡಿಯನ್ನು ಉಪಯೋಗಿಸುವುದು ಸೂಕ್ತ. ಹಾಗಾದ್ರೆ ಈ ಅರಿಶಿಣ ಪುಡಿಯನ್ನು ಬಾಳಿಕೆ ಬರೋ ತರ ಹೇಗೆ ಶೇಖರಿಸಿಡುವುದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.
ಮನೆಯಲ್ಲೇ ನಾವು ಅರಿಶಿನ ಪುಡಿಯನ್ನು ಮಾಡಬಹುದಾಗಿದೆ. ಅದು ಒಂದು ವರ್ಷದವರೆಗೆ ಸಂಗ್ರಹಣೆ ಮಾಡಿದರೂ ಕೆಡುವುದಿಲ್ಲ. ಹಾಗಾದರೆ ಅರಿಶಿನ ಪುಡಿಯನ್ನು ಮನೆಯಲ್ಲೇ ಮಾಡುವುದು ಹೇಗೆ ಅಂತ ಮೊದಲು ತಿಳಿದುಕೊಳ್ಳೋಣ. ಮಾರುಕಟ್ಟೆಯಿಂದ ತಂದ ಅರಿಶಿಣದ ಕೊಂಬನ ಸ್ವಚ್ಛ ಮಾಡಿಕೊಳ್ಳಿ ನಂತರ ಇದಕ್ಕೆ ಸ್ವಲ್ಪ ಬಿಸಿ ನೀರನ್ನ ಹಾಕಿ ಮುಚ್ಚಿಡಬೇಕು. ಒಂದೆರಡು ದಿನ ಹಾಗೆ ಮುಚ್ಚಿಡಬೇಕು ಅದು ನೀರಿನಲ್ಲಿ ನೆನೆದು ಮೃದುವಾಗುತ್ತದೆ.

ಸುಮಾರು ಒಂದು 8 ರಿಂದ 10 ಗಂಟೆಗಳ ಕಾಲವಾದರೂ ನೀರಿನಲ್ಲಿ ನೆನೆಸಬೇಕು ಇದರಿಂದ ತುಂಬಾ ಮೃದುವಾಗುತ್ತದೆ. ಆನಂತರ ನೀರಿನಿಂದ ಅರಿಶಿಣ ಕೊಂಬನ್ನು ತೆಗೆದು ಒಂದು ಒಣ ಬಟ್ಟೆಯಲ್ಲಿ ಒರೆಸಿಕೊಳ್ಳಬೇಕು. ನಂತರ ಅರಿಶಿನ ಕೊಂಬನ್ನು ಸಣ್ಣ ಸಣ್ಣ ಪೀಸ್ ಗಳಾಗಿ ಮಾಡಿಕೊಳ್ಳಬೇಕು.. ಬಿಸಿಲಿನಲ್ಲಿ ಒಂದು ಎರಡು ದಿನಗಳ ಕಾಲ ಒಣ ಹಾಕಬೇಕು. ಸುಮಾರು ಒಣಗಿದ ನಂತರ ಅದನ್ನು ಮಿಕ್ಸಿ ಜಾರಿಗೆ ಹಾಕಿ ಪೌಡರ್ ಮಾಡಿಕೊಳ್ಳಿ.
ನಂತರ ಆ ಪೌಡರ್ ಅನ್ನು ಕೂಡ ಮತ್ತೆ ಬಿಸಿಲಿನಲ್ಲಿ ಚೆನ್ನಾಗಿ ಒಂದು ನಾಲ್ಕು ಐದು ಬಿಸಿಲು ಒಣಗಿಸಬೇಕು. ಆನಂತರ ಸಾಣಿಗೆಯಲ್ಲಿ ಜರಡಿ ಹಿಡಿಯಬೇಕು. ಕಸಕಡ್ಡಿಗಳು ಮೇಲೆ ತೇಲುತ್ತವೆ ಕೆಳಗಡೆ ಪೌಡರ್ ಬೀಳುತ್ತದೆ. ಆ ತರತರಿಯಾದ ಅರಿಶಿಣವನ್ನು ಮತ್ತೆ ಮಿಕ್ಸಿಗೆ ಹಾಕಿ ರುಬ್ಬಿಕೊಂಡು ಮತ್ತೆ ಜರಡಿ ಹಿಡಿಯಬೇಕು. ಆಗ ಮೃದುವಾದ ಪೌಡರ್ ಕೆಳಗಡೆ ಬೀಳುತ್ತದೆ. ಹೀಗೆ ತಯಾರಾದ ಅರಸಿನ ಪುಡಿಯನ್ನು ನೀವು ಒಂದು ಗಾಜಿನ ಬಾಟಲಲ್ಲಿ ಅಥವಾ ಗಾಜಿನ ಡಬ್ಬದಲ್ಲಿ ಇರಿಸಬೇಕು.
ಸ್ನೇಹಿತರೆ ನೆನಪಿಡಿ,ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಡಬ್ಬದಲ್ಲಿ ಅರಿಶಿನ ಪುಡಿಯನ್ನು ಇಡಬಾರದು ಗಾಜಿನ ಡಬ್ಬದಲ್ಲಿ ಇಟ್ಟರೆ ಹೆಚ್ಚು ದಿನ ಬಾಳಿಕೆ ಬರುತ್ತದೆ. ಈ ರೀತಿ ಮಾಡುವುದರಿಂದ ಒಂದು ವರ್ಷ ಅಲ್ಲ ಎರಡು ವರ್ಷ ಆದ್ರೂ ಅರಿಶಿಣ ಪುಡಿ ಹಾಳಾಗುವುದಿಲ್ಲ. ಈ ರೀತಿಯಲ್ಲಿ ನಾವು ಸುಲಭವಾಗಿ ಮನೆಯಲ್ಲೇ ಅರಿಶಿನ ಪುಡಿಯನ್ನು ಮಾಡಿಟ್ಟುಕೊಂಡು ಕೆಡದ ಹಾಗೆ ಸಂಸ್ಕರಿಸಿ ಇಟ್ಟುಕೊಳ್ಳಬಹುದು. ಸ್ನೇಹಿತರೆ ಮತ್ತೊಂದು ಹೊಸ ವಿಚಾರದೊಂದಿಗೆ ಭೇಟಿಯಾಗೋಣ ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.
