ದಿನಾಂಕ ಮತ್ತು ಸಮಯದ ಮೇಲೆ ಹುಟ್ಟಿದ ಮಗುವಿಗೆ ಹೆಸರನ್ನು ಆಯ್ಕೆ ಮಾಡುವುದು ಹೇಗೆ ಗೊತ್ತಾ? ಇಲ್ಲಿದೆ ನೋಡಿ ಶಾಸ್ತ್ರದ ಬಗ್ಗೆ ಮಾಹಿತಿ!!

ಪ್ರತಿಯೊಬ್ಬ ವ್ಯಕ್ತಿಯನ್ನು ಗುರುತಿಸುವುದು ಹೆಸರಿ (Name) ನಿಂದಲೇ. ಹೀಗಾಗಿ ಪ್ರತಿಯೊಬ್ಬರಿಗೂ ಕೂಡ ಹೆಸರು ಎನ್ನುವುದು ಬಹಳ ಮುಖ್ಯವಾಗಿರುತ್ತದೆ. ಹೀಗಾಗು ಹುಟ್ಟಿದ ನವಜಾತ ಶಿಶುವಿಗೆ ಯಾವ ಹೆಸರು ಇಡಬೇಕು ಎಂದು ತಂದೆ ತಾಯಿಯರು (Parents) ಯೋಚಿಸುತ್ತಾರೆ.

ಜಾತಕದ ಪ್ರಕಾರವಾಗಿ ಯಾವ ಅಕ್ಷರದ ಹೆಸರು ಇಟ್ಟರೆ ಒಳ್ಳೆಯದು ಹಾಗೂ ಹೆಸರಿನ ಅರ್ಥವನ್ನು ಈ ಎಲ್ಲವನ್ನು ಅರಿತುಕೊಂಡೇ ಹೆಸರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇಲ್ಲಿ ಮುಖ್ಯವಾಗಿ ಏನೆಂದರೆ ಹುಟ್ಟಿದ ದಿನಾಂಕ (Date of Birth) ಮತ್ತು ಸಮಯದ (Time) ಆಧಾರದ ಮೇಲೆ ಮಗುವಿನ ಹೆಸರುಗಳನ್ನು ಆಯ್ಕೆ ಮಾಡುವುದೇ ಹೆಚ್ಚು. ಆದರೆ ಹೆಸರಿನ ಆಯ್ಕೆ ಪ್ರಕ್ರಿಯೆಯೂ ಹೇಗಿರುತ್ತದೆ ಎನ್ನುವುದನ್ನು ನೀವಿಲ್ಲಿ ತಿಳಿದುಕೊಳ್ಳಬಹುದು.

ಹುಟ್ಟಿದ ಶಿಶುವಿನ ನಿಖರವಾದ ಜನ್ಮ ದಿನಾಂಕ ಮತ್ತು ಸಮಯವು ವೈಯಕ್ತಿಕ ಜಾತಕವನ್ನು ರೂಪಿಸುವಲ್ಲಿ ಸಹಾಯ ಮಾಡುತ್ತದೆ. ಈ ವೇಳೆಯಲ್ಲಿ ಜ್ಯೋತಿಷಿಗಳು ಗ್ರಹಗಳ ಸ್ಥಾನಗಳು, ರಾಶಿ ಮತ್ತು ಇತರ ಅಂಶಗಳನ್ನು ವಿಶ್ಲೇಷಿಸಿ ಯಾವ ಅಕ್ಷರದಲ್ಲಿ ಹೆಸರು ಇಟ್ಟರೆ ಒಳ್ಳೆಯದು ಎಂದು ಸುಚಿಸುತ್ತಾರೆ.

ಜ್ಯೋತಿಷ್ಯದಲ್ಲಿ ಸಂಖ್ಯಾಶಾಸ್ತ್ರವು ಸಂಖ್ಯೆಗಳಿಗೆ ನಿರ್ದಿಷ್ಟ ಕಂಪನಗಳನ್ನು ನಿಗದಿಪಡಿಸುತ್ತದೆ. ಪ್ರತಿಯೊಂದು ಅಕ್ಷರವು ಒಂದು ಸಂಖ್ಯೆಗೆ ಅನುರೂಪವಾಗಿರುವ ಕಾರಣ ಯಾವ ಅಕ್ಷರದಲ್ಲಿ ಹೆಸರನ್ನು ಆಯ್ಕೆ ಮಾಡಿದರೆ ಆ ಹೆಸರಿಗೆ ಶಕ್ತಿಗೆ ಕೊಡುಗೆ ನೀಡುತ್ತದೆ. ಮಗುವಿಗೆ ಯಾವ ಅಕ್ಷರಗಳು ಮತ್ತು ಸಂಖ್ಯೆಗಳು ಅನುಕೂಲಕರವಾಗಿವೆ ಎಂಬುದನ್ನು ನಿರ್ಧಾರ ಮಾಡಲಾಗುತ್ತದೆ.

ಸಾಮರಸ್ಯದ ಶಬ್ದಗಳನ್ನು ಹೊಂದಿರುವ ಹೆಸರುಗಳು ವ್ಯಕ್ತಿಯ ಶಕ್ತಿ ಮತ್ತು ಕೆಲಸ ಕಾರ್ಯಗಳಲ್ಲಿ ಪ್ರಭಾವ ಬೀರುವುದು ಹೆಚ್ಚು. ಹೀಗಾಗಿ ಹೆಸರು ಕೇಳುವುದಕ್ಕೆ ಹಾಗೂ ಕರೆಯುವುದಕ್ಕೆ ಹಿತಕರವಾಗಿರುವುದು ಉತ್ತಮ. ಅದಲ್ಲದೆ,ಜ್ಯೋತಿಷ್ಯಕ್ಕೆ ಪೂರಕವಾದ ಹೆಸರಿನೊಂದಿಗೆ ಬೆಳೆದರೆ, ಅದು ಆ ಮಗುವಿನ ಸ್ವಯಂ ಅಭಿವ್ಯಕ್ತಿ, ಸಂಬಂಧಗಳು ಮತ್ತು ಜೀವನ ಅನುಭವಗಳನ್ನು ಹೆಚ್ಚಿಸುತ್ತದೆ. ಮಗುವಿನ ಸಾಮರ್ಥ್ಯದೊಂದಿಗೆ ಹೊಂದಿಕೆಯಾಗುವ ಹೆಸರನ್ನು ಇಟ್ಟರೆ ಭವಿಷ್ಯಕ್ಕೂ ಕೂಡ ಉತ್ತಮವಾಗಿರಲಿದೆ.

Leave a Reply

Your email address will not be published. Required fields are marked *