ಭಾರತದ ಪ್ರತಿಯೊಬ್ಬ ನಾಗರಿಕನ ಪ್ರಮುಖ ದಾಖಲೆಯಲ್ಲಿ ಒಂದಾಗಿರುವುದೇ ಈ ಆಧಾರ್ ಕಾರ್ಡ್ (Aadhar Card). ಅದಲ್ಲದೇ, ಆಧಾರ್ ಕಾರ್ಡ್ ಎನ್ನುವ ಪ್ರಮುಖ ದಾಖಲೆಯು ಬ್ಯಾಂಕ್, ಹಣಕಾಸು ಸೇವೆಗಳು, ಪಾಸ್‌ಪೋರ್ಟ್ ಮತ್ತು ಎಲ್ಲಾ ಸರ್ಕಾರಿ ಸೇವೆಗಳು ಸೇರಿದಂತೆ ಇನ್ನಿತ್ತರ ಕೆಲಸಗಳಿಗೆ ಕಡ್ಡಾಯವಾಗಿರಬೇಕು.
ಅದಲ್ಲದೇ ಹುಟ್ಟಿದ ಮಗುವಿಗೂ ಕೂಡ ಆಧಾರ್ ಕಾರ್ಡ್ ಮಾಡಿಸಿಕೊಳ್ಳಲೇಬೇಕು. ಇಲ್ಲಿ ಗಮನಿಸಬೇಕಾದದ್ದು ಏನೆಂದರೆ ಆಧಾರ್ ಕಾರ್ಡ್ ಇಲ್ಲದೇ, ಯಾವ ಮಗುವೂ ಶಾಲೆಗೆ ಪ್ರವೇಶ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಮಗು ಶಾಲೆಗೆ ಹೋಗುವ ಮೊದಲೇ ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ಮಾಡಿಸಿರಲೇಬೇಕು.
ಹುಟ್ಟಿದ ಮಗುವಿಗೆ ಕೂಡ ಈಗ ಆಧಾರ್ ಕಾರ್ಡ್ (Aadhaar Card) ಮಾಡಿಸುವ ಅವಕಾಶವು ಇದೆ.ಈ ಆಧಾರ್ ಕಾರ್ಡ್ ಅನ್ನು ಮಗುವಿಗೆ ಐದು ವರ್ಷ ತುಂಬಿದ ಬಳಿಕವೇ ಅಪ್ಡೇಟ್ಸ್ ಮಾಡಿಸಬೇಕು. ಮುಖ್ಯವಾದ ಸಂಗತಿಯೆಂದರೆ ಜನನ ಪ್ರಮಾಣ ಪತ್ರ (Birth certificate) ದಲ್ಲಿ ಇರುವಂತೆ ಆಧಾರ್ ಕಾರ್ಡ್ ನಲ್ಲಿ ಹೆಸರನ್ನು ನೀಡಬೇಕು. ಆಧಾರ್ ಕಾರ್ಡ್ ಅನ್ನು ಮಾಡಿಸುವ ವೇಳೆಯಲ್ಲಿ ಮಗುವಿನ ಹೆಸರು, ತಂದೆ ತಾಯಿಯ ವಿವರ ಎಲ್ಲಾ ಮಾಹಿತಿಯನ್ನು ಪರಿಶೀಲನೆ ಮಾಡಬೇಕಾಗುತ್ತದೆ.
ಮಗುವಿನ ಆಧಾರ್ ಕಾರ್ಡ್ ಮಾಡಿಸಲು ಜನನ ಪ್ರಮಾಣಪತ್ರ (Birth Certificate) ಅಥವಾ ಶಾಲಾ ಪ್ರಮಾಣಪತ್ರ (School Certificate), ಪ್ಯಾನ್ ಕಾರ್ಡ್ (Pan Card), ಪಾಸ್‌ಪೋರ್ಟ್ (Passport) ಮತ್ತು ಡ್ರೈವಿಂಗ್ ಲೈಸೆನ್ಸ್ (Driving Licence) ನಂತಹ ಸೇರಿದಂತೆ ದಾಖಲೆಗಳು ಇರುವುದು ಕಡ್ಡಾಯವಾಗಿದೆ ಮಗುವಿನ ಪಾಸ್‌ಪೋರ್ಟ್ (Child Passport Photo) ಫೋಟೋವನ್ನು ನೀಡಬೇಕಾಗುತ್ತದೆ.
ಮಗುವಿನ ಆಧಾರ್ ಕಾರ್ಡ್ ಮಾಡಿಸಲು ಜನ್ ಸುವಿಧಾ ಕೇಂದ್ರ (Jan Suvidhaa Centre) ಕ್ಕೆ ಹೋಗಬೇಕು. ಈ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಬೇಕು. ಈ ಫಾರ್ಮ್ ನಲ್ಲಿ ಮಗುವಿನ ಹೆಸರು, ಹುಟ್ಟಿದ ದಿನಾಂಕ, ವಿಳಾಸ ಇತ್ಯಾದಿ ವಿವರಗಳನ್ನು ಭರ್ತಿ ಮಾಡಬೇಕು. ಆಧಾರ್ ಕಾರ್ಡ್ ಅಪ್ಡೇಟ್ ಮಾಡಿದ ಬಳಿಕ ಕೆಲವೇ ದಿನಗಳಲ್ಲಿ ಈ ಆಧಾರ್ ಕಾರ್ಡ್ ಕೈ ಸೇರುತ್ತದೆ. ಒಟ್ಟಿನಲ್ಲಿ ಮಗುವಿನ ಆಧಾರ್ ಕಾರ್ಡ್ ಮಾಡಿಸಲು ಈ ಮಾಹಿತಿಯು ಪ್ರಯೋಜನಕಾರಿಯಾಗುವುದರಲ್ಲಿ ಎರಡು ಮಾತಿಲ್ಲ.