ಸುಮಾರಾಗಿ ಎಲ್ಲರ ಮನೆಗಳಲ್ಲೂ ಕೂಡ ಬಕೆಟ್ಗಳು ಮಗ್ಗುಗಳು ದಿನ ಕಳೆದು ಹೋದಂತೆ ಅವುಗಳ ಬಣ್ಣವನ್ನ ಬದಲಾಯಿಸುತ್ತದೆ ಅಂದರೆ ಮಾಸುವುದು ಸಹಜ. ಇದರಿಂದ ನಮಗೆ ಅಕ್ಕ ಪಕ್ಕದವರಾಗಲಿ ಅಥವಾ ಯಾರೇ ನೆಂಟರು ಇಷ್ಟರು ಆಗಲಿ ಅತಿಥಿಗಳು ಬಂದರೆ ನಮಗೆ ಸ್ವಲ್ಪ ಮುಜುಗರವನ್ನ ಉಂಟು ಮಾಡುತ್ತದೆ. ಆದರೆ ಬಕೆಟ್ಗಳು ಮಾಸದಂತೆ ನಾವು ಕೆಲವೊಂದು ಸಲಹೆಗಳನ್ನ ಕೊಡುತ್ತೇವೆ ಅದನ್ನು ಪ್ರಯತ್ನಿಸಿ ನೋಡಿ. ಎಷ್ಟು ವರ್ಷವಾದರೂ ಕೂಡ ಬಕೆಟ್ ಗಳು ಮಗ್ಗುಗಳು ಬಣ್ಣವನ್ನು ಬದಲಾಯಿಸುವುದಿಲ್ಲ.
ಒಂದು ಲೋಟ ನೀರಿಗೆ ಸ್ವಲ್ಪ ಬ್ಲೀಚಿಂಗ್ ಪೌಡರ್ ಅನ್ನು ಹಾಕಿ. ನಂತರ ಒಂದು ಬ್ರಷ್ ನಿಂದ ಅದರಲ್ಲಿ ಅದ್ದಿ ಬಕೇಟು ಮತ್ತು ಮಗ್ಗುಗಳನ್ನ ಚೆನ್ನಾಗಿ ಉಜ್ಜಬೇಕು. ಇದರಿಂದ ಮಾಸಿದ ಬಕೆಟ್ ಕೂಡ ಪಳಪಳ ಹೊಳೆಯುತ್ತವೆ. ಉಜ್ಜಿದ ನಂತರ ತಣ್ಣೀರಿನಿಂದ ತೊಳೆಯಿರಿ. ಎಷ್ಟೇ ಹಳೆಯ ಬಕೆಟ್ ಆದ್ರೂ ಕೂಡ ಅದು ಹೊಳೆಯುತ್ತದೆ. ಆದರೆ ನೀವು ಈ ಕೆಲಸವನ್ನ ಮಾಡುವಾಗ ಕೈಗೆ ಏನಾದರೂ ಪ್ರೊಟೆಕ್ಷನ್ ಅನ್ನು ಹಾಕಿಕೊಳ್ಳಿ. ಏಕೆಂದರೆ ಬ್ಲೀಚಿಂಗ್ ಪೌಡರ್ ಸ್ಟ್ರಾಂಗ್ ಇರೋದ್ರಿಂದ ಕೈ ಸುಟ್ಟು ಹೋಗುವ ಸಾಧ್ಯತೆ ಇರುತ್ತದೆ.

ಮತ್ತೊಂದು ಟಿಪ್ಸ್ ಅಂತಂದ್ರೆ ಅಡಿಗೆ ಸೋಡಾ ಮತ್ತು ವಿನಿಗರನ್ನ ಸಮಪ್ರಮಾಣದಲ್ಲಿ ತೆಗೆದುಕೊಂಡು ಒಂದು ಪೇಸ್ಟ್ ಅನ್ನ ತಯಾರಿಸಿ. ನಂತರ ಮಾಸಿದ ಬಕೆಟ್ ಗಳಿಗೆ ಹಾಕಿ ಉಜ್ಜಿ. ಚೆನ್ನಾಗಿ ಉಜ್ಜಿದ ನಂತರ ನೀರಿನಿಂದ ತೊಳೆಯಿರಿ. ಈ ರೀತಿ ನೀವು ವಾರಕ್ಕೆರಡು ಬಾರಿ ಮಾಡುವುದರಿಂದ ಬಕೆಟ್ ಬೇಗನೆ ಮಸುವುದಿಲ್ಲ. ಒಂದು ವೇಳೆ ಮಾಸಿದ್ರೂ ಕೂಡ ಅದು ಮತ್ತೆ ಹೊಳೆಯಲು ಶುರುವಾಗುತ್ತದೆ.
ನೋಡಿ ಸ್ನೇಹಿತರೆ ಖರ್ಚಿಲ್ಲದೆ ಕಡಿಮೆ ಖರ್ಚಿನಲ್ಲಿ ಮನೆಯಲ್ಲೇ ಸಿಗುವ ಅಡಿಗೆ ಮನೆಯಲ್ಲಿ ಸಿಗುವ ವಸ್ತುವಿನಿಂದ ನೀವು ಮನೆಯಲ್ಲಿರುವ ವಸ್ತುವನ್ನ ನೀವು ಸ್ವಚ್ಛವಾಗಿ ಹಾಗೂ ಹೊಸದಾಗಿ ಕಾಣುವಂತೆ ಇಟ್ಟುಕೊಳ್ಳಬಹುದು. ಈ ಟಿಪ್ಸ್ಗಳನ್ನು ನಿಯಮಿತವಾಗಿ ವಾರಕ್ಕೆರಡು ದಿನ ಮಾಡ್ತಾ ಬಂದ್ರೆ ಖಂಡಿತವಾಗ್ಲೂ ನಿಮ್ಮ ಬಕೆಟ್ ಗಳು ಹಾಗೂ ಮಗುಗಳು ಯಾವುದೇ ಪ್ಲಾಸ್ಟಿಕ್ ಐಟಮ್ಸ ಇರಲಿ ಅವು ಮಾಸುವುದಿಲ್ಲ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.
