ಎಪಿಎಲ್ ಕಾರ್ಡ್ ಹಾಗೂ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ರೇಷನ್ ಕಾರ್ಡನ್ನು ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದೆ. ಎರಡು ತಿಂಗಳ ಹಿಂದೆ ಅವಕಾಶ ನೀಡಲಾಗಿತ್ತು ಆದರೆ ಕೆಲವೊಂದು ಕಾರಣಗಳಿಂದ ಅರ್ಧಕ್ಕೆ ನಿಂತುಹೋಗಿತ್ತು. ಆದರೆ ಇದೀಗ ಮತ್ತೆ ತೆರವುಗೊಳಿಸಲಾಗಿದೆ.
ಈಗ ಎರಡು ತಿಂಗಳದ ಹಿಂದೆ ಅರ್ಜಿ ಸಲ್ಲಿಸಲು ಆಹಾರ ಇಲಾಖೆಯು ಅವಕಾಶವನ್ನು ನೀಡಿತ್ತು. ಆದರೆ ಕೆಲವೊಂದು ಸಮಸ್ಯೆಗಳ ಕಾರಣದಿಂದಾಗಿ ಅಲ್ಲೇ ಸ್ಥಗಿತಗೊಂಡಿತ್ತು. ಈಗ ಮತ್ತೆ ಅವಕಾಶವನ್ನು ನೀಡಲಾಗುತ್ತಿದೆ. ಸುಮಾರು 53 ಸಾವಿರ ಅರ್ಜಿಗಳು ಸಲ್ಲಿಕೆ ಆಗಿದ್ದವು. ಅದರಲ್ಲಿ ಕೆಲವು ಮನೆಯೊಡತಿಯ ಹೆಸರು ಬದಲಾವಣೆ ಮತ್ತೆ ಕೆಲವು ನಿಧನವರಾದ ಹೆಸರನ್ನು ತೆಗೆದುಹಾಕುವುದು ಈತರ ಅರ್ಜಿಗಳು ಬಂದಿದ್ದವು.

ಈ ಅರ್ಜಿ ಸ್ಟೇಟಸ್ಅನ್ನ ನೀವು ನಿಮ್ಮ ಮೊಬೈಲ್ ನಲ್ಲಿ ನೋಡಿಕೊಳ್ಳಬಹುದು ಮತ್ತೆ ಎಲ್ಲಿಯೂ ಹೋಗೋ ಅವಶ್ಯಕತೆ ಇರುವುದಿಲ್ಲ ನೀವು ಮನೆಯಲ್ಲೇ ನಿಮ್ಮ ಮೊಬೈಲ್ ಮೂಲಕ ಈ ಸ್ಟೇಟಸ್ ಅನ್ನ ನೋಡಿಕೊಳ್ಳಬಹುದು. www.ahar.kar.in ಈ ವೆಬ್ಸೈಟ್ನ ಮೂಲಕ ನೀವು ನಿಮ್ಮ ಮಾಹಿತಿಯನ್ನು ಪಡೆದುಕೊಳ್ಳಬಹುದು.
ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿದಾಗ ನಿಮಗೆ ಇ -ಸ್ಥಿತಿ ಅನ್ನೋ ಒಂದು ಆಪ್ಷನ್ ಬರುತ್ತೆ ಅದರ ಮೇಲೆ ನೀವು ಕ್ಲಿಕ್ ಮಾಡಬೇಕು. ಅಲ್ಲಿ ನಿಮಗೆ ಮೂರು ಆಪ್ಷನ್ ಬರುತ್ತೆ. ಹೊಸ ಹಾಗೂ ಹಾಲಿ ಚೀಟಿ ಸ್ಥಿತಿ, ತಿದ್ದುಪಡಿ ವಿನಂತಿ ಸ್ಥಿತಿ ಹಾಗೂ ಡಿ ಬಿ ಸ್ಥಿತಿ ಎಂಬ ಆಯ್ಕೆಗಳು ಬರುತ್ತವೆ. ಅಲ್ಲಿ ನೀವು ತಿದ್ದುಪಡಿ ವಿನಂತಿ ಸ್ಥಿತಿಯ ಮೇಲೆ ಕ್ಲಿಕ್ ಮಾಡಿ. ಆಮೇಲೆ ನಿಮ್ಮ ಜಿಲ್ಲೆ ಯಾವುದು ಅಂತ ಸೆಲೆಕ್ಟ್ ಮಾಡಬೇಕಾಗುತ್ತೆ.
ಅಲ್ಲಿ ನಿಮಗೆ ಮತ್ತೊಂದು ಪೇಜ್ ಓಪನ್ ಆಗುತ್ತೆ. ಅಲ್ಲಿ ಪಡಿತರ ಚೀಟಿ ಬದಲಾವಣೆಗೆ ಕೋರಿಕೆ ಎನ್ನುವ ಒಂದು ಆಪ್ಷನ್ ಬರುತ್ತೆ ಅಲ್ಲಿ ನೀವು ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ಎಂಟ್ರಿ ಮಾಡಿ. ನಂತರ ನೆಕ್ಸ್ಟ್ ಆಪ್ಷನ್ ಬರುತ್ತೆ. ನೆಕ್ಸ್ಟ್ ಗೋ ಅನ್ನೋ ಆಪ್ಷನ್ ಕ್ಲಿಕ್ ಮಾಡಿದಾಗ ನಿಮಗೆ ಎಲ್ಲ ಮಾಹಿತಿಗಳು ದೊರೆಯುತ್ತವೆ.
ಈ ತಿದ್ದುಪಡಿ ಮಾಡಿ ಮೂರು ತಿಂಗಳ ನಂತರ ನಿಮಗೆ ಗ್ರಹಲಕ್ಷ್ಮಿ ಯೋಜನೆಯ ಹಣ ಬರುತ್ತದೆ ಎಂದು ಸರ್ಕಾರ ತಿಳಿಸಿದೆ. ಏಕೆಂದರೆ ಅಲ್ಲಿ ಮೂರು ವೆಬ್ಸೈಟ್ ಗಳಲ್ಲಿ ನಿಮ್ಮ ಡೀಟೇಲ್ಸ್ ಅನ್ನ ನಮೂದಿಸಬೇಕಾಗುತ್ತದೆ. ಈಗ ಒಟ್ಟು 3,18, ಅರ್ಜಿಗಳು ಬಂದಿದ್ದು ಎಲ್ಲವನ್ನು ಪರಿಶೀಲಿಸಬೇಕಾಗಿದೆ. ಹಾಗೆಯೇ 93,000 ಅರ್ಜಿಗಳನ್ನ ತಿರಸ್ಕರಿಸಲಾಗಿದೆ.ನೀವು ಹಾಕಿದ ಅರ್ಜಿಯಲ್ಲಿ ಏನಾದರೂ ತಪ್ಪು ಮಾಹಿತಿಯನ್ನು ಹಾಕಿದರೆ ಅರ್ಜಿಯು ರಿಜೆಕ್ಟ್ ಆಗುತ್ತದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.
