ಮೊಬೈಲ್ ಚಾರ್ಜಿಂಗ್ ಇಡುವಾಗ ಈ ಮಾಹಿತಿಯ ಬಗ್ಗೆ ನಿಮಗೆ ತಿಳಿದಿರಲಿ, ಇಲ್ಲಿದೆ ನೋಡಿ ಅಸಲಿ ವಿಚಾರ

ಇಂದು ನಾವೆಲ್ಲಾ ಸ್ಮಾರ್ಟ್ ಯುಗದಲ್ಲಿದ್ದೇವೆ. ಹೀಗಾಗಿ ಪ್ರತಿಯೊಬ್ಬರ ಕೈಯಲ್ಲಿಯೂ ಸ್ಮಾರ್ಟ್ ಫೋನ್ (Smart Phone) ಗಳಿರುತ್ತದೆ. ಮನೋರಂಜನೆಗಾಗಿ ಬಹುತೇಕರು ಸ್ಮಾರ್ಟ್ ಫೋನ್ ಗಳಿಗೆ ಎಡಿಕ್ಟ್ ಆಗಿ ಬಿಟ್ಟಿರುತ್ತಾರೆ. ಈ ಸ್ಮಾರ್ಟ್ ಫೋನ್ ಗಳ ಮೂಲಕ ಆನ್ಲೈನ್ ವಹಿವಾಟುಗಳನ್ನು ಮಾಡಿ ಮುಗಿಸುತ್ತೇವೆ. ಆದರೆ ಕೆಲವರಿಗೆ ಫೋನ್ ಕೈಯಲ್ಲಿ ಇಲ್ಲದೆ ಇದ್ದರೆ ಏನೋ ಕಳೆದುಕೊಂಡ ಭಾವ. ಫೋನ್ ಸ್ವಿಚ್ ಆಫ್ (Switch Off) ಆಗಿ ಬಿಟ್ಟರೆ ಕೇಳುವುದೇ ಬೇಡ.

ಹೀಗಾಗಿ ಸ್ಮಾರ್ಟ್ ಫೋನ್ (Smart Phone) ನಲ್ಲಿ ಸ್ವಲ್ಪ ಚಾರ್ಚ್ ಖಾಲಿಯಾದರೂ ಕೂಡ ಮತ್ತೆ ಮತ್ತೆ ಚಾರ್ಚ್ ಮಾಡುವ ಅಭ್ಯಾಸವನ್ನು ಕೆಲವರು ರೂಢಿಸಿಕೊಂಡಿರುತ್ತಾರೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಪವರ್ ಕಟ್ ಆದರೂ ಪವರ್ ಬ್ಯಾಂಕ್ (Power Bank) ಸೇರಿದಂತೆ ಅನೇಕ ಸೌಲಭ್ಯಗಳು ಇರುವ ಕಾರಣ ಮೊಬೈಲ್ ಚಾರ್ಜ್ (Mobile Charge) ಗೇನು ಕೊರತೆಯಿಲ್ಲ.

ಆದರೆ ಕೆಲವರಿಗೆ ಮೊಬೈಲ್ ಚಾರ್ಚ್ ಎಷ್ಟು ಮಾಡಬೇಕು ಎನ್ನುವ ಬಗ್ಗೆ ಮಾಹಿತಿಯು ಇರುವುದಿಲ್ಲ.ಸ್ಮಾರ್ಟ್‌ಫೋನ್ ಅನ್ನು 100 ಪ್ರತಿಶತದಷ್ಟು ಚಾರ್ಜ್ ಮಾಡುತ್ತಿದ್ದರೆ, ಈ ಲೇಖನವನ್ನು ಓದುವುದು ಮಾಹಿತಿಗಾಗಿ ಬಹಳ ಪ್ರಯೋಜನಕಾರಿಯಾಗಿದೆ. ಸ್ಮಾರ್ಟ್​ಫೋನ್ ಅನ್ನು ಶೇ. 100 ರಷ್ಟು ಚಾರ್ಜ್ ಮಾಡುವುದರಿಂದ ಸಮಸ್ಯೆಗೆ ನೀವೇ ದಾರಿ ಮಾಡಿಕೊಟ್ಟಂತೆಯಾಗುತ್ತದೆ.

ನೂರಕ್ಕೆ ನೂರು ಶೇಕಡಾ ಚಾರ್ಜ್ ಮಾಡುವುದರಿಂದ ಮೊಬೈಲ್ ಫೋನ್ ಹಾಳಾಗಬಹುದು.ಒಂದು ವೇಳೆ ನಿಮ್ಮ ಮೊಬೈಲ್ ಫೋನ್ ಉತ್ತಮವಾಗಿ ಬಾಳಿಕೆ ಬರಬೇಕಾದರೆ 80-20 ಶೇಕಡಾ ಸೂತ್ರವನ್ನು ಬಳಸಿಕೊಂಡರೆ ಮೊಬೈಲ್ ಹಾಳಾಗುವುದನ್ನು ತಪ್ಪಿಸಬಹುದು. ಇಲ್ಲಿ ಮುಖ್ಯವಾಗಿ ಸ್ಮಾರ್ಟ್‌ಫೋನ್‌ನಲ್ಲಿನ ಚಾರ್ಜಿಂಗ್ ಶೇಕಡಾ 20 ಕ್ಕೆ ಇಳಿಯಲು ಬಿಡಬಾರದು.

ಶೇಕಡಾ 20 ರಷ್ಟು ಬ್ಯಾಟರಿ (Battery) ಯಿದ್ದರೆ ಸ್ಮಾರ್ಟ್‌ಫೋನ್ ಅನ್ನು ಚಾರ್ಜ್ ಮಾಡುವುದು ಉತ್ತಮವಾಗಿದೆ. 20 ರಷ್ಟು ಚಾರ್ಜ್ ಇದ್ದು ಮತ್ತೆ ಮತ್ತೆ ಫೋನ್ ಬಳಕೆ ಮಾಡಿದರೆ ಬ್ಯಾಟರಿಯ ಮೇಲೆ ಒತ್ತಡ ಬೀಳುವುದಿಲ್ಲ. ಅದಲ್ಲದೇ, ಕೆಲವರು ಮೊಬೈಲ್ ಚಾರ್ಜ್ ಗೆ ಇಟ್ಟವರು 100 ಪರ್ಸೆಂಟ್ ಚಾರ್ಜ್ ಆಗುವವರೆಗೆ ಮೊಬೈಲ್ ಅನ್ನು ಚಾರ್ಜಿಂಗ್ ನಿಂದ ತೆಗೆಯುವುದೇ ಇಲ್ಲ. ಹೀಗೆ ಮಾಡುವುದರಿಂದ ಬ್ಯಾಟರಿಯ ಮೇಲೆ ಒತ್ತಡ ಉಂಟಾಗುತ್ತದೆ. ಹೀಗಾದಾಗ ಬ್ಯಾಟರಿ ಸ್ಫೋಟಗೊಳ್ಳುವುದಕ್ಕೆ ದಾರಿ ಮಾಡಿಕೊಟ್ಟಂತೆ. ಹೀಗಾಗಿ ಸ್ಮಾರ್ಟ್​ಫೋನನ್ನು ಗರಿಷ್ಠ 80 ಪ್ರತಿಶತದಷ್ಟು ಚಾರ್ಜ್ ಮಾಡುವುದು ಮೊಬೈಲ್ ಸುರಕ್ಷಿತ ದೃಷ್ಟಿಯಿಂದ ಬಹಳ ಉತ್ತಮವಾಗಿದೆ.

Leave a Reply

Your email address will not be published. Required fields are marked *