ದೇವಾಲಯದಲ್ಲಿ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡುವ ವೇಳೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡೋದು ಯಾಕೆ ಗೊತ್ತಾ? ಇಲ್ಲಿದೆ ನೋಡಿ ಮಹತ್ವಕಾರಿ ಮಾಹಿತಿ

ಭಾರತೀಯರಾದ ದೇವರುಗಳ ವಿಶೇಷವಾದ ನಂಬಿಕೆಯನ್ನು ಹೊಂದಿವರಾಗಿದ್ದು, ಹೀಗಾಗಿ ಪುಣ್ಯ ಕ್ಷೇತ್ರ (Historical Temple) ಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿರುತ್ತೇವೆ. ಭಾರತದಲ್ಲಿ ಈಗಾಗಲೇ ಅನೇಕ ಪ್ರಸಿದ್ಧವಾದ ದೇವಾಲಯಗಳಿವೆ. ಇನ್ನೊಂದೆಡೆ ಎಲ್ಲರೂ ಕೂಡ ನಿರೀಕ್ಷೆಯಿಂದ ಕಾದು ಕುಳಿತಿರುವ ರಾಮ ಮಂದಿರ (Rama Mandir) ಉದ್ಘಾಟನೆಗೆ ಕೆಲವೇ ದಿನಗಳು ಬಾಕಿಯಿವೆ.

ದಶಕಗಳ ಕನಸು ಈ ರಾಮ ಮಂದಿರ ನಿರ್ಮಾಣವು ಇದೀಗ ಅಂತಿಮ ಹಂತಕ್ಕೆ ಬಂದು ತಲುಪಿದೆ. ಇದೇ ಜನವರಿ 22 ರಂದು ಅಯೋಧ್ಯೆ (Ayodhye) ಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುವುದು. ಹಾಗಾದ್ರೆ ಈ ಪ್ರಾಣ ಪ್ರತಿಷ್ಠೆಯ ವಿಶೇಷತೆಗಳು ಹಾಗೂ ಪ್ರಾಮುಖ್ಯತೆಯ ಕುರಿತು ಹಲವರಿಗೆ ಮಾಹಿತಿಯಿಲ್ಲ. ಆ ಎಲ್ಲಾ ಕುತೂಹಲಕಾರಿ ಸಂಗತಿಗಳು ಈ ಲೇಖನದಲ್ಲಿದೆ.

ಪ್ರಾಣ ಪ್ರತಿಷ್ಠೆಯಲ್ಲಿ ಮುಖ್ಯವಾದ ಅಂಶವೇನೆಂದರೆ, ಈ ಕಾರ್ಯವು ಆಗುವ ಮೊದಲು ಯಾವುದೇ ವಿಗ್ರಹವನ್ನು ಪೂಜೆಗೆ ಯೋಗ್ಯವೆಂದು ಪರಿಗಣಿಸಲಾಗುವುದಿಲ್ಲ. ಪ್ರಾಣ ಪ್ರತಿಷ್ಠೆಯ ಮೂಲಕ, ವಿಗ್ರಹವನ್ನು ಜೀವಶಕ್ತಿಯನ್ನು ತುಂಬಿ ದೇವತೆಯನ್ನಾಗಿ ಮಾಡಲಾಗುತ್ತದೆ. ಆ ಬಳಿಕವಷ್ಟೇ ವಿಗ್ರಹ ರೂಪದಲ್ಲಿ ಇರುವ ದೇವತೆಗಳನ್ನು ವಿಧಿ ವಿಧಾನಗಳೊಂದಿಗೆ ಪೂಜಿಸಲಾಗುವುದು.

ಪ್ರಾಣ ಪ್ರತಿಷ್ಠಾಪನೆ ಬಳಿಕವಷ್ಟೇ ಆ ವಿಗ್ರಹಗಳಿಗೆ ಶಕ್ತಿ ಬರುತ್ತದೆ. ಆ ಬಳಿಕ ವಿಗ್ರಹವು ದೇವರಾಗಿ ರೂಪು ತಾಳುವುದು ಎನ್ನಲಾಗುತ್ತದೆ. ಈ ಪ್ರತಿಷ್ಠಾಪನೆಯ ವೇಳೆಯಲ್ಲಿ ವಿಗ್ರಹವನ್ನು ವಿವಿಧ ಪವಿತ್ರ ನದಿಗಳ ನೀರಿನಿಂದ ಸ್ನಾನ ಮಾಡಿಸಿ, ಮೂರ್ತಿಯನ್ನು ಶುಭ್ರವಾದ ಬಟ್ಟೆಯಿಂದ ಒರೆಸಿ ಹೊಸ ಬಟ್ಟೆಗಳನ್ನು ತೊಡಿಸಲಾಗುತ್ತದೆ.

ಆ ಬಳಿಕ ವಿಗ್ರಹವನ್ನು ಶುದ್ಧ ಸ್ಥಳದಲ್ಲಿ ಇರಿಸಿ, ಶ್ರೀಗಂಧವನ್ನು ದೇವರ ಮೂರ್ತಿಗೆ ಹಚ್ಚಲಾಗುವುದು. ಆ ಬಳಿಕ ಬೀಜ ಮಂತ್ರಗಳನ್ನು ಪಠಿಸಿವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಲಾಗುತ್ತದೆ. ಕೊನೆಗೆ ವಿಗ್ರಹಕ್ಕೆ ಆರತಿ ಮಾಡಿ ಬಂದ ಭಕ್ತಾಧಿಗಳಿಗೆ ಪ್ರಸಾದವನ್ನು ವಿತರಿಸಲಾಗುತ್ತದೆ.

ಶ್ರೀರಾಮನು ಅಭಿಜಿತ್‌ ಮುಹೂರ್ತದಲ್ಲಿ ಜನಿಸಿದ್ದು, ಇದೇ ಜನವರಿ 22ರ ಅಭಿಜಿತ್ ಮುಹೂರ್ತವು ಬೆಳಗ್ಗೆ 11:51 ರಿಂದ ಮಧ್ಯಾಹ್ನ 12:33 ರವರೆಗೆ ಇರಲಿದೆ. ಹೀಗಾಗಿ ಅದೇ ಸಮಯದಲ್ಲಿ ರಾಮ ಮಂದಿರದಲ್ಲಿ ವಿಗ್ರಹಗಳ ಪ್ರಾಣ ಪ್ರತಿಷ್ಠಾಪನೆಯನ್ನು ಮಾಡಲಾಗುವುದು. ಈ ಎಲ್ಲಾ ಕಾರಣದಿಂದಾಗಿ ದೇವಸ್ಥಾನಗಳಲ್ಲಿ ಪ್ರಾಣ ಪ್ರತಿಷ್ಠಾಪನೆ ಎನ್ನುವುದು ಮಹತ್ವಕಾರಿ ಅಂಶವಾಗಿದೆ ಎಂದು ಹೇಳಬಹುದು.

Leave a Reply

Your email address will not be published. Required fields are marked *