ಕೇವಲ 18 ಲಕ್ಷದಲ್ಲಿ ಸುಂದರವಾದ ಇಷ್ಟು ದೊಡ್ಡ ಮನೆಯನ್ನು ಕಟ್ಟಬಹುದು! ನಿಮ್ಮ ಬಜೆಟ್ ಗೆ ಇದು ಹೇಳಿಮಾಡಿಸಿದ ಹಾಗಿದೆ ನೋಡಿ!!

ಮನುಷ್ಯನಿಗೆ ಇರುವ ಆಸೆಯಲ್ಲಿ ಸ್ವಂತ ಮನೆ ಕಟ್ಟಬೇಕು ಎನ್ನುವ ಆಸೆ ಮೊದಲಿದೆ. ಸ್ವಂತ ಮನೆ ಕಟ್ಟಬೇಕು ಸ್ವಂತ ಜಾಗ ಆದರೂ ಇರಬೇಕು ಸ್ವಂತ ಮನೆಯಲ್ಲಿ ವಾಸಿಸಬೇಕು ಎನ್ನುವ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ.  ಹೌದು, ತನ್ನ ಸ್ವಂತ ಗಳಿಕೆಯಲ್ಲಿ ಮನೆಯನ್ನು ಕಟ್ಟಬೇಕೆಂದು ಬಯಸುತ್ತಾರೆ. ಅನೇಕ ಜನರು ದಿನವಿಡೀ ಇದರ ಬಗ್ಗೆ ಯೋಚಿಸುತ್ತಾರೆ, ಮತ್ತು ರಾತ್ರಿಯ ಸಮಯದಲ್ಲಿ, ಅವರು ಅದನ್ನು ತಮ್ಮ ಕನಸಿನಲ್ಲಿ ಮನೆಯಾಗಿ ನೋಡುತ್ತಾರೆ.

ಆದರೆ ಈ ಆಸೆ ಈಡೇರಿಸಿಕೊಳ್ಳಲು ಸಾಧ್ಯ ಆಗುವುದಿಲ್ಲ. ಏಕೆಂದರೆ ಜೀವನದಲ್ಲಿ ನಾವು ಎಷ್ಟೇ ಕಷ್ಟ ಪಟ್ಟು ದುಡಿದರೂ,  ಏನೇ ವ್ಯವಹಾರ ಮಾಡಿದರೂ ಕೂಡ ಎಲ್ಲಾ ಸರಿಯಾಗಿ ಇದ್ದರೂ ಆ ಆಸೆ ಕೆಲವರಿಗೆ ನೆರವೇರುವುದೇ ಇಲ್ಲ. ಆದರೆ ಕೆಲವೇ ಹದಿನೆಂಟು ಲಕ್ಷಕ್ಕೆ ಸುಂದರವಾದ ತಾವಂದುಕೊಂಡ ಹಾಗೆ ಮನೆ ಕಟ್ಟಿ ಕೊಳ್ಳಬಹುದು. ಕನ್ನಡ ಕುವರ ಯು ಟ್ಯೂಬ್ ಚಾನೆಲ್ ನಲ್ಲಿ ಕಡಿಮೆ ಹಣದಲ್ಲಿ ಕನಸಿನ ಮನೆಯನ್ನು ಹೇಗೆ ಕಟ್ಟಿಕೊಳ್ಳಬಹುದು ಎನ್ನುವುದನ್ನು ವಿವರಿಸಲಾಗಿದೆ. 

HOW to build Beautiful house under 20 lakhs

ಕಡಿಮೆ ಬಜೆಟ್ ನಲ್ಲಿ ಮನೆ ಕಟ್ಟಿಸುವ ಪರಿಣಿತ ಆಗಿರುವ ಶಾಮ್ ರವರು ಇತ್ತೀಚಿಗಷ್ಟೇ 18.5 ಲಕ್ಷದಲ್ಲಿ 2 ಬಿ ಎಚ್ ಕೆ ಮನೆಯೊಂದನ್ನು ಕಟ್ಟಿಸಿದ್ದಾರೆ. ಇದಕ್ಕಿಂತ ಕಡಿಮೆ ಬೆಲೆಯಲ್ಲಿ ಕೂಡ ಈಗಾಗಲೇ ಇಂತಹ ಮನೆಯನ್ನು ಕಟ್ಟಿಸಿದ್ದಾರೆ ಆದರೆ ಇದಕ್ಕೆ 18.5 ಲಕ್ಷ ಆಗಲು ನಿಜವಾದ ಕಾರಣ ಏನೆಂದರೆ ನಾಲ್ಕು ಫ್ಲೋರ್ ಗಳನ್ನು ಕೂಡ ಕಟ್ಟಿಸಬಹುದಾದ ಸ್ಟ್ರಾಂಗ್ ಫೌಂಡೇಶನ್ ಅನ್ನು ಹಾಕಿಸಿದ್ದಾರೆ ಇದೇ ಕಾರಣಕ್ಕಾಗಿ ಈ ಮನೆಗೆ 18 ಲಕ್ಷ ರೂಪಾಯಿ ಆಗಿದೆ. ಗ್ರೌಂಡ್ ಫ್ಲೋರ್ ನಲ್ಲಿ ವಾಹನಗಳ ಪಾರ್ಕಿಂಗ್ ಗೆ ವಿಶಾಲವಾದ ಸ್ಥಳವಿದೆ.

ಮನೆಯ ಬಾಗಿಲಿನಿಂದ ಹಿಡಿದು ಒಳಗೆ ಇರುವ ದೇವರ ಕೋಣೆಯವರೆಗೂ ಕೂಡ ಟೀಕುಡ್ ಅನ್ನು ಬಳಸಲಾಗಿದೆ. ಮನೆಯ ಮೇಲೆ 1500 ಲೀಟರ್ ಕೆಪ್ಯಾಸಿಟಿ ಇರುವಂತಹ ನೀರಿನ ಟ್ಯಾಂಕ್ ಅನ್ನು ಅಳವಡಿಸಲಾಗಿದೆ. ಮನೆಯ ಕಾಮಗಾರಿಯ ಸಂದರ್ಭದಲ್ಲಿ ಸಂಪೂರ್ಣ ಗುಣಮಟ್ಟವುಳ್ಳ ವಸ್ತುಗಳನ್ನು ಬಳಸಲಾಗಿದೆ. ಮನೆಯ ಪಾರ್ಕಿಂಗ್ ಸ್ಲಾಟ್ ನಲ್ಲಿ ಚಿಕ್ಕ ಗಾರ್ಡನ್ ಮಾಡುವಂತಹ ಸ್ಥಳಾವಕಾಶವನ್ನು ಕೂಡ ನಿರ್ಮಾಣ ಮಾಡಲಾಗಿದೆ‌. ಕೇವಲ ಡೋರ್ ಹಾಗೂ ಫ್ರೇಮ್ಗೆ 75,000 ವರೆಗೂ ಖರ್ಚಾಗಿದೆ.

House under 20lakh
House under 20lakh

ಇನ್ನು ಮನೆಯ ಹಾಲ್ 14 ಬೈ 14 ಸೈಜ್ ಅನ್ನು ಹೊಂದಿದೆ. ಇನ್ನು ಮನೆಯ ಒಳಗೆ ಸೊಮಿನಿಯಾ ಟೈಲ್ಸ್ ಅನ್ನು ಬಳಸಲಾಗಿದೆ. ಇನ್ನು ಮನೆಯ ಅಡುಗೆ ಕೋಣೆ ಅಂದರೆ ಕಿಚನ್ 7 ಬೈ 9 ಇದೆ. ಇನ್ನು ಮನೆಯ ದೇವರ ಕೋಣೆನ್ನುವುದು 3 ಬೈ 4 ಇದೆ. ಏಳು ಅಡಿ ಎತ್ತರವು ಇದೆ.

ಇದರ ಒಳಗೆ ಸಂಪೂರ್ಣ ಬಿಳಿ ಬಣ್ಣದ ಟೈಲ್ಸ್ ಅನ್ನು ಬಳಸಲಾಗಿದೆ. ಎಲ್ಲಕ್ಕಿಂತ ವಿಶೇಷ ಎನ್ನುವಂತೆ ಈ ಮನೆಯಲ್ಲಿರುವ ಬಾತ್ರೂಮ್ ನಲ್ಲಿ ಇಂಡಿಯನ್ ಹಾಗೂ ವೆಸ್ಟರ್ನ್ ಶೈಲಿಯ ಎರಡು ಟಾಯ್ಲೆಟ್ ಗಳು ಕೂಡ ಇವೆ. ಇದು ಎರಡು ವರ್ಗದ ಜನರಿಗೆ ಸರಿಹೊಂದುವಂತಹ ಬಾತ್ರೂಮ್ ಆಗಿದೆ ಎಂದು ಹೇಳಬಹುದಾಗಿದೆ.

ಕನಸಿನ ಮನೆ ಕಟ್ಟುಕೊಳ್ಳಬೇಕು ಎಂದುಕೊಂಡವರು ಈ ಕೆಳಗಿನ ವಿಡಿಯೋವನ್ನು ಮಿಸ್ ಮಾಡದೇ ನೋಡಿ. House under 20 lakh

ಇನ್ನು ಒಳಗೆ ರೂಮ್ ಕೂಡ ವಿಶಾಲವಾಗಿದ್ದು ಇಲ್ಲಿ ಕೂಡ ಬೆಳಿ ಟೈಲ್ಸ್ ಗಳನ್ನು ಉಪಯೋಗಿಸಲಾಗಿದ್ದು ಮೇಲೆ ಇತರೆ ವಸ್ತುಗಳನ್ನು ಇಡಲು ಸಜ್ಜೆ ಕೂಡ ನೀಡಲಾಗಿದೆ. ಸದ್ಯಕ್ಕೆ ಮೇಲೆ ಟೆರೇಸ್ ಇದ್ದು ಮುಂದಿನ ದಿನಗಳಲ್ಲಿ ಮೂರರಿಂದ ನಾಲ್ಕು ಫ್ಲೋರ್ ಗಳನ್ನು ಇಲ್ಲಿ ಸುಲಭವಾಗಿ ಕಟ್ಟಬಹುದು ಎಂಬುದಾಗಿ ಶ್ಯಾಮ್ ಭರವಸೆಯನ್ನು ನೀಡುತ್ತಾರೆ. ಒಂದು ವೇಳೆ ಬಜೆಟ್ ನಲ್ಲಿ ಉತ್ತಮ ಮನೆಗಳನ್ನು ಕಟ್ಟಿಸುವ ಇರಾದೆ ನಿಮ್ಮಲ್ಲಿದ್ದರೆ 8660050212 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *