ಭಾರತೀಯ ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸ ಹಾಗೂ ವಿಶೇಷತೆಗಳನ್ನು ಒಳಗೊಂಡ ಸ್ಮಾರ್ಟ್ ಫೋನ್ (Smart Phone) ಗಳು ಲಗ್ಗೆ ಇಟ್ಟು ಗ್ರಾಹಕರನ್ನು ಸೆಳೆಯುತ್ತವೆ. ಇನ್ನು ಕಂಪೆನಿಗಳು ಕೂಡ ಸ್ಮಾರ್ಟ್ ಫೋನ್ ಪ್ರಿಯರ ಅಭಿರುಚಿಗೆ ತಕ್ಕಂತೆ ಇರುವ ಸ್ಮಾರ್ಟ್ ಫೋನ್ ಗಳನ್ನು ಪರಿಚಯಿಸುತ್ತಾರೆ. ಈಗಾಗಲೇ ಸಾಕಷ್ಟು ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ ತನ್ನದೇ ಆದ ಬ್ರಾಂಡ್ ಇಮೇಜ್ ಸೃಷ್ಟಿಸಿದ್ದಾರೆ.
ಈಗಾಗಲೇ ಬಹಳ ನಿರೀಕ್ಷೆಯನ್ನು ಹುಟ್ಟಿಸಿದ್ದ ಸ್ಮಾರ್ಟ್ ಫೋನ್ ಈ ಹಾನರ್ 90 5G (Honor 90 5G) ಇದೀಗ ಬಿಡುಗಡೆಯಾಗಿದೆ. ಇದೇ ಸೆಪ್ಟೆಂಬರ್ 18 ರಿಂದ ಮಧ್ಯಾಹ್ನ 12 ಗಂಟೆಗೆ ಹಾನರ್ನ ಅಧಿಕೃತ ವೆಬ್‌ಸೈಟ್ ಮತ್ತು ಅಮೆಜಾನ್ ನಲ್ಲಿ ಖರೀದಿಗೆ ಲಭ್ಯವಿದ್ದು, ಸ್ಮಾರ್ಟ್ ಫೋನ್ ಪ್ರಿಯರು ಈ ಸ್ಮಾರ್ಟ್ ಫೋನ್ ಅನ್ನು ಖರೀದಿ ಮಾಡಬಹುದಾಗಿದೆ. ಹಾಗಾದ್ರೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಹಾನರ್ 90 5G ಸ್ಮಾರ್ಟ್ ಫೋನ್ ನಲ್ಲಿ ಏನೆಲ್ಲಾ ವಿಶೇಷತೆಗಳಿವೆ ಹಾಗೂ ಎಷ್ಟು ಬೆಲೆಗೆ ಲಭ್ಯವಿದೆ ಎನ್ನುವುದನ್ನು ನೀವಿಲ್ಲಿ ತಿಳಿದು ಕೊಳ್ಳಬಹುದು.

ಹಾನರ್ 90 5G ಸ್ಮಾರ್ಟ್ಫೋನ್ (Honor 90 5G Smart Phone) ಒಟ್ಟು ಎರಡು ಸ್ಟೋರೇಜ್ ನಲ್ಲಿ ಎರಡು ಆಯ್ಕೆಗಳನ್ನು ಕಾಣಬಹುದು. ಇದರ 8GB + 256GB ರೂಪಾಂತರಕ್ಕೆ 37,999 ರೂ. ಇದೆ. ಅಂತೆಯೆ 12GB + 512GB ಸ್ಟೋರೇಜ್ ರೂಪಾಂತರದ ಬೆಲೆ 39,999 ರೂ. ಆಗಿದೆ. ಅದಲ್ಲದೆ ಫಸ್ಟ್ ಸೇಲ್ ಪ್ರಯುಕ್ತ ಇ-ಕಾಮರ್ಸ್ ಸೈಟ್ನಲ್ಲಿ 2,000 ರೂ. ಗಳ ವಿನಿಮಯ ರಿಯಾಯಿತಿಯೂ ಲಭ್ಯವಿದೆ.
ಖರೀದಿಯ ಸಮಯದಲ್ಲಿ ಐಸಿಐಸಿಐ (ICICI) ಮತ್ತು ಎಸ್‌ಬಿಐ ಕಾರ್ಡ್ (SBI Card) ಗಳಿದ್ದರೆ 3,000 ರೂ. ಗಳ ಹೆಚ್ಚುವರಿ ತ್ವರಿತ ರಿಯಾಯಿತಿಯೂಯೂ ದೊರೆಯಲಿದೆ. ಹಾನರ್ 90 5G ಸ್ಮಾರ್ಟ್ಫೋನ್ ನಲ್ಲಿ ಏನೆಲ್ಲಾ ವಿಶೇಷತೇಗಳಿರಲಿದೆ ಎಂದು ಹೇಳುವುದಾದರೆ 1.5K (2664 x 1200 ಪಿಕ್ಸೆಲ್‌ಗಳು) ರೆಸಲ್ಯೂಶನ್‌ನೊಂದಿಗೆ 6.7-ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದೆ. 120Hz ವರೆಗೆ ರಿಫ್ರೆಶ್ ದರವನ್ನು ಮತ್ತು 1,600 nits ನ ಗರಿಷ್ಠ ಬ್ರೈಟ್ನೆಸ್ ಅನ್ನು ನೀಡುತ್ತದೆ.
ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 7 Gen 1 SoC ಯಿಂದ Adreno 644 GPU ನೊಂದಿಗೆ ಜೋಡಿಸಲ್ಪಟ್ಟಿದೆ, 12GB ಯ LPDDR5 RAM ಮತ್ತು 256GB ವರೆಗಿನ UFS 3.1 ಅಂತರ್ಗತ ಸಂಗ್ರಹಣೆ ಸಾಮರ್ಥ್ಯವನ್ನು ಕಾಣಬಹುದು.ಈ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ 13-ಆಧಾರಿತ ಮ್ಯಾಜಿಕ್ ಓಎಸ್ 7.1 ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಫೋನ್ ಹಾನರ್ ಇಮೇಜ್ ಎಂಜಿನ್ ಬೆಂಬಲದೊಂದಿಗೆ 200-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್‌ನೊಂದಿಗೆ 12-ಮೆಗಾಪಿಕ್ಸೆಲ್ ಸಂವೇದಕ ಮತ್ತು ಎಲ್‌ಇಡಿ ಫ್ಲ್ಯಾಷ್ ಯೂನಿಟ್ ಜೊತೆಗೆ ಮ್ಯಾಕ್ರೋ ಲೆನ್ಸ್‌ನೊಂದಿಗೆ 2-ಮೆಗಾಪಿಕ್ಸೆಲ್ ಸಂವೇದಕವನ್ನು ಕಾಣಬಹುದು.
ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 50-ಮೆಗಾಪಿಕ್ಸೆಲ್ ಸಂವೇದಕವನ್ನು ಡಿಸ್ ಪ್ಲೇಯ ಮೇಲ್ಭಾಗದ ಮಧ್ಯದಲ್ಲಿ ಜೋಡಿಸಲಾದ ಪಂಚ್-ಹೋಲ್ ಸ್ಲಾಟ್‌ನಲ್ಲಿದೆ. ಹಾನರ್ 90 5G ಫೋನ್ ಚಾರ್ಜಿಂಗ್ ವಿಚಾರಕ್ಕೆ ಬರುವುದಾದರೆ 66W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಅನ್ನು ಹೊಂದಿದೆ. 5G, 4G LTE, ಡ್ಯುಯಲ್-ಬ್ಯಾಂಡ್ Wi-Fi, ಬ್ಲೂಟೂತ್ 5.2, NFC, GPS ಮತ್ತು USB ಟೈಪ್-C ಸಂಪರ್ಕವನ್ನು ಬೆಂಬಲಿಸಲಿದ್ದು ನೋಡುವುದಕ್ಕೆ ಆಕರ್ಷಕಾವಾಗಿದೆ. ಡೈಮಂಡ್ ಸಿಲ್ವರ್, ಎಮರಾಲ್ಡ್ ಗ್ರೀನ್ ಮತ್ತು ಮಿಡ್ನೈಟ್ ಬ್ಲಾಕ್ ಬಣ್ಣಗಳಲ್ಲಿ ಗ್ರಾಹಕರಿಗೆ ಲಭ್ಯವಿರಲಿದೆ.