ಕಡಿಮೆ ಬಡ್ಡಿದರ ಗೃಹಸಾಲ ಬೇಕಾದರೆ ಈ ಐದು ಬ್ಯಾಂಕ್ ಗಳು ಬೆಸ್ಟ್, ಇಲ್ಲಿದೆ ನೋಡಿ ಮಾಹಿತಿ

ಮನೆ ಕಟ್ಟುವುದು ಎಲ್ಲರ ಕನಸು. ಆದರೆ ಮನೆ ಕಟ್ಟಲು ಎಷ್ಟು ದುಡ್ಡು ಇದ್ದರೂ ಸಾಲದೇನಿಸುತ್ತದೆ. ಹೆಚ್ಚಿನವರು ಗೃಹಸಾಲ (Home Loan)ಮಾಡಿ ತಮ್ಮ ಇಷ್ಟದ ಮನೆಯನ್ನು ಕಟ್ಟುತ್ತಾರೆ. ಈಗಾಗಲೇ ಸಾಕಷ್ಟು ಬ್ಯಾಂಕ್ ಗಳು ಮನೆ ಕಟ್ಟಲು ಗೃಹಸಾಲವನ್ನು ನೀಡುತ್ತವೆ. ಆದರೆ ದೇಶದ ಈ ಐದು ಬ್ಯಾಂಕ್ ಗಳು ಮಾತ್ರ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲವನ್ನು ನೀಡುವ ಬ್ಯಾಂಕ್ (Bank) ಗಳಾಗಿವೆ. ಹಾಗಾದ್ರೆ ಆ ಐದು ಬ್ಯಾಂಕ್ ಗಳ ಕಂಪ್ಲೀಟ್ ಡೀಟೇಲ್ಸ್ ಈ ಲೇಖನದಲ್ಲಿ ಓದಿ ತಿಳಿದುಕೊಳ್ಳಿ.

ಹೆಚ್ ಡಿ ಎಫ್ ಸಿ ಬ್ಯಾಂಕ್ (HDFC Bank): ಖಾಸಗಿ ವಲಯದ ಬ್ಯಾಂಕ್ ಗಳ ಸಾಲಿಗೆ ಸೇರಿರುವ ಈ ಹೆಚ್ಡಿ ಎಫ್ ಸಿ ಬ್ಯಾಂಕ್ ಕನಿಷ್ಠ ವಾರ್ಷಿಕ ಬಡ್ಡಿದರದಲ್ಲಿ ಗೃಹಸಾಲವನ್ನು ನೀಡುತ್ತವೆ.ಗೃಹ ಸಾಲಕ್ಕೆ 8.50 ರಷ್ಟು ಬಡ್ಡಿದರವಿದ್ದು, ಸಿಬಿಲ್ ಸ್ಕೋರ್ ಮತ್ತು ಸಾಲದ ಅವಧಿಯ ಮೇಲೆ ಈ ಬಡ್ಡಿದರವು ಅನ್ವಯಿಸುತ್ತವೆ. ಕಡಿಮೆ ಸಿಬಿಲ್ ಸ್ಕೋರ್ ಹೊಂದಿರುವವರಿಗೆ, ಶೇ 8.75 ರಿಂದ ಶೇ.8.75 ರಷ್ಟು ಬಡ್ಡಿದರವು ಹೆಚ್ಚಳವಾಗಿದೆ.

ಐಡಿಎಫ್ ಸಿ ಫಸ್ಟ್ ಬ್ಯಾಂಕ್ (IDFC First Bank): ಈ ಐಡಿಎಫ್ ಸಿ ಫಸ್ಟ್ ಬ್ಯಾಂಕ್ ಪ್ರಸ್ತುತ ವಾರ್ಷಿಕ ಬಡ್ಡಿದರ (Interest) ವನ್ನು ಹೊಂದಿದ್ದು, 8.85 ರಿಂದ ಶೇ.8.85ಕ್ಕೆ ಏರಿಕೆಯಾಗಿದೆ ಎನ್ನಲಾಗಿದೆ. ಅಂದರೆ, ವಾರ್ಷಿಕ ಬಡ್ಡಿದರವು 9.25 ರವರೆಗೆ ಇದೆ. ಉದ್ಯೋಗದಲ್ಲಿರುವವರಿಗೆ ಶೇಕಡಾ 8.85 ಮತ್ತು ಸ್ವಯಂ ಉದ್ಯೋಗಿಗಳಿಗೆ ಶೇಕಡಾ 8.85 ರಷ್ಟು ಬಡ್ಡಿದರವಿದ್ದು, 9.25 ರಷ್ಟು ಬಡ್ಡಿದರ ಅನ್ವಯವಾಗುತ್ತದೆ ಎನ್ನಲಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ (State Of India Bank): ಜನಪ್ರಿಯ ಬ್ಯಾಂಕ್ ಗಳ ಸಾಲಿಗೆ ಈ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಬ್ಯಾಂಕ್ ಕೂಡ ಸೇರಿದೆ. ಈ ಎಸ್ ಬಿಐ ಬ್ಯಾಂಕ್ ಗಳು ಗೃಹಸಾಲಕ್ಕೆ ಸಂಬಂಧ ಪಟ್ಟಂತೆ ಕಡಿಮೆ ಬಡ್ಡಿದರ (Interst) ದಲ್ಲಿ ಸಾಲ ಸೌಲಭ್ಯವನ್ನು ನೀಡುತ್ತವೆ. ಈ ಬ್ಯಾಂಕ್ ಪ್ರಸ್ತುತ ವಾರ್ಷಿಕ ಶೇಕಡಾ 8.60 ರಿಂದ ಶೇಕಡಾ 9.45 ರಷ್ಟು ಬಡ್ಡಿದರದಲ್ಲಿ ಗೃಹ ಸಾಲವನ್ನು ನೀಡುತ್ತಿದೆ. ಅದಲ್ಲದೇ 0.17 % ರಷ್ಟು ಸಂಸ್ಕರಣಾ ಶುಲ್ಕವಿದೆ. ಎಸ್ಬಿಐ ಪ್ರಸ್ತುತ ವಿಶೇಷ ಗೃಹ ಸಾಲ ಅಭಿಯಾನದಡಿ ಯಲ್ಲಿ ಗೃಹ ಸಾಲದ ಬಡ್ಡಿಯ ಮೇಲೆ ಶೇಕಡಾ 0.60 ರಿಯಾಯಿತಿಯನ್ನು ಕಾಣಬಹುದು. ಈ ವಿಶೇಷ ಕೊಡುಗೆ ಡಿಸೆಂಬರ್ 31, 2023 ರವರೆಗೆ ಲಭ್ಯವಿರಲಿದ್ದು. ಅದಲ್ಲದೇ ಇಲ್ಲಿ ಮುಖ್ಯವಾಗಿ ಸಿಬಿಲ್ ಸ್ಕೋರ್ ಶೇಕಡಾ 749 ಕ್ಕಿಂತ ಹೆಚ್ಚು ಇದ್ದವರು 8.60 ಬಡ್ಡಿದರದಲ್ಲಿ ಗೃಹಸಾಲವನ್ನು ಪಡೆಯಬಹುದಾಗಿದೆ.

ಕೊಟಕ್ ಮಹೀಂದ್ರಾ ಬ್ಯಾಂಕ್‌ (Kotak Mahindra Bank): ಕೊಟಕ್ ಮಹೀಂದ್ರಾ ಬ್ಯಾಂಕ್‌ ಕೂಡ ಖಾಸಗಿ ವಲಯದ ಬ್ಯಾಂಕುಗಳಲ್ಲಿ ಒಂದು. ಈ ಬ್ಯಾಂಕ್ ನಲ್ಲಿಯು ಸಾಲದ ಬಡ್ಡಿದರವು ಪ್ರಸ್ತುತ ವಾರ್ಷಿಕ ಬಡ್ಡಿದರವನ್ನು ಹೊಂದಿದೆ. ಸಾಲದ ಮೇಲಿನ ಬಡ್ಡಿದರವು 8.75 ರಿಂದ ಶೇ.8.75 ಕ್ಕೆ ಏರಿಕೆಯಾಗಿದ್ದು, ಸದ್ಯಕ್ಕೆ 9.35 ರಷ್ಟು ಬಡ್ಡಿ ವಿಧಿಸಲಾಗುತ್ತದೆ ಎನ್ನಲಾಗಿದೆ. ಹೆಚ್ಚಿನ ಸಿಬಿಲ್ ಸ್ಕೋರ್ ಹೊಂದಿರುವವರು 8.75 ಬಡ್ಡಿದರದಲ್ಲಿ ಸಾಲವನ್ನು ಪಡೆಯಬಹುದು. ಆದರೆ ಈ ಸಿಬಿಲ್ ಸ್ಕೋರ್ ಕಡಿಮೆ ಹೊಂದಿದ್ದರೆ ಬಡ್ಡಿದರವು ಶೇಕಡಾ 9.4 ರವರೆಗೆ ಆಗಿರುತ್ತದೆ ಎನ್ನಲಾಗಿದೆ.

ಐಸಿಐಸಿಐ ಬ್ಯಾಂಕ್ (ICICI Bank): ಖಾಸಗಿ ವಲಯದ ಬ್ಯಾಂಕ್ ಗಳಲ್ಲಿ ಒಂದಾಗಿರುವ ಈ ಐಸಿಐಸಿಐ ಪ್ರಸ್ತುತ ವಾರ್ಷಿಕ ಬಡ್ಡಿದರದಲ್ಲಿ ಗೃಹಸಾಲವನ್ನು ನೀಡುತ್ತವೆ. ಆದರೆ ಇದೀಗ ಗೃಹಸಾಲದ ಮೇಲಿನ ಬಡ್ಡಿದರವು 9.25 ರಿಂದ ಶೇ.9.25 ಕ್ಕೆ ಏರಿಕೆಯಾಗಿದೆ. ಇಲ್ಲಿ ಮುಖ್ಯವಾಗಿ ಸಿಬಿಲ್ ಸ್ಕೋರ್ 750 ಕ್ಕಿಂತ ಹೆಚ್ಚಿದ್ದರೆ, ಬಡ್ಡಿದರವು ಶೇಕಡಾ 9 ಕ್ಕಿಂತ ಕಡಿಮೆಯಿರುತ್ತದೆ. ಸಿಬಿಲ್ ಸ್ಕೋರ್ 750 ಕ್ಕಿಂತ ಕಡಿಮೆಯಿದ್ದರೆ, ಬಡ್ಡಿದರವು ಶೇಕಡಾ 9.25 ರಷ್ಟು ಇರುತ್ತವೆ. ಹೀಗಾಗಿ ಬಡ್ಡಿದರಗಳು ಸಿಬಿಲ್ ಸ್ಕೋರ್ ಮತ್ತು ಸಾಲದ ಅವಧಿಯನ್ನು ಅವಲಂಬಿಸಿರುತ್ತದೆ ಎನ್ನಲಾಗಿದೆ.

Leave a Reply

Your email address will not be published. Required fields are marked *