ಹಿಟ್ಲರ್ ಕಲ್ಯಾಣ ಧಾರಾವಾಹಿ ಖ್ಯಾತಿಯ ನಟ ದೀಲಿಪ್ ರಾಜ್ ಅವರ ಮುದ್ದಾದ ಕುಟುಂಬ ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ವಿಶೇಷವಾದ ಫೋಟೋ

ಕಿರುತೆರೆ ಹಾಗೂ ಬೆಳ್ಳಿತೆರೆ ಒಂದು ಮಾಯಲೋಕ ಎಂಬುದು ಎಲ್ಲರಿಗೂ ತಿಳಿದೇ ಇದೆ. ಇಲ್ಲಿ ಬದುಕು ಕಟ್ಟಿಕೊಂಡ ಕಲಾವಿದರೆಲ್ಲರಿಗೂ ಕೂಡ ಜೀವನ ಪರ್ಯಂತ ಅವಕಾಶಗಳು ಸಿಗುತ್ತದೆ ಎಂದು ಹೇಳುವುದು ಕಷ್ಟ. ಹೀಗಾಗಿ ಕೆಲವರು ಚಿತ್ರರಂಗದಲ್ಲಿ ಯಶಸ್ಸು ಕಂಡರೆ ಇನ್ನು ಕೆಲವರು ಚಿತ್ರರಂಗದಿಂದ ದೂರ ಸರಿದ್ದಾರೆ. ಇನ್ನು ಅನೇಕರು ಸುದೀರ್ಘ ಬ್ರೇಕ್ ನಂತರ ಮರಳಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ.

ಅದು ಅಲ್ಲದೇ ಕೆಲವರು ಕಲೆಯೇ ಬದುಕು ಸೋತರು ಬಣ್ಣದ ಬದುಕಿನ ಜೊತೆಗಿನ ನಂಟನ್ನು ಮಾತ್ರ ಬಿಟ್ಟಿಲ್ಲ. ಬಣ್ಣದ ಬದುಕಿನಲ್ಲಿ ಸಕ್ರಿಯರಾಗಿರುವವರಲ್ಲಿ ನಟ ದೀಲಿಪ್ ರಾಜ್ (Deelip Raj) ಕೂಡ ಒಬ್ಬರು. ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ದಿಲೀಪ್ ರಾಜ್ ಈಗ ಕಿರುತೆರೆಯಲ್ಲಿ ಸಖತ್​ ಬ್ಯುಸಿಯಾಗಿದ್ದಾರೆ. ‘ಹಿಟ್ಲರ್ ಕಲ್ಯಾಣ’(Hitlar Kalyana) ಧಾರಾವಾಹಿಯ ನಿರ್ಮಾಣದ ಜೊತೆಗೆ ಎಜೆ ಎಂಬ ಪಾತ್ರದ ಮೂಲಕ ಮೆಚ್ಚುಗೆ ಪಡೆದಿದ್ದಾರೆ.

ಅದಲ್ಲದೇ, ‘ಮಹಾನ್ ಕಲಾವಿದ’ (Mahan Kalavida) ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ವಾಪಸ್ಸಾಗಿದ್ದು, ಸಕ್ರಿಯರಾಗಿದ್ದಾರೆ. ಇದೀಗ ದೀಲಿಪ್ ರಾಜ್ ಅವರ ಮುದ್ದಾದ ಫ್ಯಾಮಿಲಿ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಈ ಫೋಟೋದಲ್ಲಿ ದೀಲಿಪ್ ರಾಜ್ ಅವರ ಪತ್ನಿ ಶ್ರೀವಿದ್ಯಾ (Shreevidhya) ಹಾಗೂ ಮುದ್ದಾದ ಇಬ್ಬರೂ ಹೆಣ್ಣು ಮಕ್ಕಳನ್ನು ನೋಡಬಹುದು. ಹಿಟ್ಲರ್ ಕಲ್ಯಾಣ ಖ್ಯಾತಿಯ ದೀಲಿಪ್ ರಾಜ್ ಅವರ ಫ್ಯಾಮಿಲಿ ಫೋಟೋಗೆ ಫ್ಯಾನ್ಸ್ ಗಳಿಂದ ಮೆಚ್ಚುಗೆ ವ್ಯಕ್ತವಾಗಿವೆ.

ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ಎಜೆ ಪಾತ್ರ (AJ Roll) ವನ್ನು ಮಾಡಿ, ಜನಪ್ರಿಯತೆಯನ್ನು ಗಳಿಸಿಕೊಂಡಿದ್ದು ಕಳೆದ ವರ್ಷವೇ ಬೆಳ್ಳಿತೆರೆಗೆ ಮತ್ತೆ ಮರಳಿದ್ದರು. ‘ಮಹಾನ್ ಕಲಾವಿದ’ ಸಿನಿಮಾದಲ್ಲಿ ಒಪ್ಪಿಕೊಂಡಿದ್ದರು. ಈ ಪಾತ್ರದ ಬಗ್ಗೆ ಮಾತನಾಡಿದ್ದ ದಿಲೀಪ್ ರಾಜ್, ‘ಬಹಳ ದಿನಗಳ ನಂತರ ಮತ್ತೆ ಚಿತ್ರವೊಂದರಲ್ಲಿ ನಟಿಸುತ್ತಿದ್ದೇನೆ. ಅಭಯ್ ಚಂದ್ರ ಉತ್ತಮ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಈಗಾಗಲೇ ಎರಡು ಹಂತಗಳ ಚಿತ್ರೀಕರಣ ಮುಗಿದಿದೆ. ಕಲಾವಿದ ಮಾಡುವ ನಟನೆ‌ ಮೊದಲು ನಿರ್ದೇಶಕರಿಗೆ ಮೆಚ್ಚುಗೆಯಾಗಬೇಕು. ನನ್ನ ನಟನೆ ಬಗ್ಗೆ ಮೊದಲು ಅಭಯ್ ಹೇಳಬೇಕು. ನಾನು ಸಹ ಈ ಚಿತ್ರವನ್ನು ನೋಡಲು ಕಾತುರದಿಂದ ಕಾಯುತ್ತಿದ್ದೇನೆ’ ಎಂದಿದ್ದರು.

ಸದ್ಯಕ್ಕೆ ಕನ್ನಡ ಜನಪ್ರಿಯ ಧಾರಾವಾಹಿ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದು, ಈ ನಡುವೆ ಸಬೆಳ್ಳಿತೆರೆಯಲ್ಲಿ ಸಕ್ರಿಯರಾಗಿದ್ದು ಎರಡನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಹಿಟ್ಲರ್ ಕಲ್ಯಾಣ ಧಾರಾವಾಹಿ ಬಳಿಕ ನಟನಿಗೆ ದೊಡ್ಡ ಮಟ್ಟದಲ್ಲಿ ಫ್ಯಾನ್ಸ್ ಬಳಗವು ಸೃಷ್ಟಿಯಾಗಿದೆ. ಸದ್ಯಕ್ಕೆ ಕಿರುತೆರೆ ಹಾಗೂ ಬೆಳ್ಳಿತೆರೆಯ ನಟ ದೀಲಿಪ್ ರಾಜ್ ಅವರಿಗೆ ಬೇಡಿಕೆಯು ಹೆಚ್ಚಾಗಿದ್ದು, ಸಾಲು ಸಾಲು ಅವಕಾಶಗಳು ಬರುತ್ತಿವೆ.

Leave a Reply

Your email address will not be published. Required fields are marked *