ಟ್ರೊಲ್ ವಿಡಿಯೋಗಳಲ್ಲಿ ಪ್ರತಿದಿನ ಕಾಣಿಸಿಕೊಳ್ಳುವ ಈತ ನಿಜಕ್ಕೂ ಯಾರು ಗೊತ್ತಾ? ಕೆಜಿಗಟ್ಟಲೆ ಚಿನ್ನ ಧರಿಸುವ ಈತನ ಬಗ್ಗೆ ತಿಳಿದರೆ ಮೈ ರೋಮ ಎದ್ದು ನಿಲ್ಲುತ್ತದೆ!!

hindustani bahu vikas : ಸಾಮಾಜಿಕ ಜಾಲತಾಣಗಳು ರಾತ್ರಿ ಬೆಳಗಾಗುವುದರೊಳಗೆ ಸಾಕಷ್ಟು ಜನರು ಫೇಮಸ್ ಆಗಿ ಬಿಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳು ಒಂದಷ್ಟು ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಅದರಲ್ಲಿಯೂ ಈ ಲಾಕ್ ಡೌನ್ ಸಮಯದಲ್ಲಿ ಸೆಲೆಬ್ರಿಟಿಯಿಂದ ಜನ ಸಾಮಾನ್ಯರವರೆಗೂ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟಿವ್ ಆಗಿದ್ದರು.

ಟಿಕ್ ಟಾಕ್ ಬಗ್ಗೆ ಎಲ್ಲರಿಗಿ ಗೊತ್ತಿರುತ್ತದೆ. ಬ್ಯಾನ್ ಆಗಿರುವ ಈ ಟಿಕ್ ಟಾಕ್ ಆಪ್ ನಿಂದಾಗಿ ಅನೇಕರು ತಮ್ಮ ಪ್ರತಿಭೆಯನ್ನು ಅನಾವರಣ ಮಾಡಿದ್ದರು. ಕೆಲವರು ತಮ್ಮ ಪ್ರತಿಭೆಯನ್ನು ಒಳ್ಳೆಯ ರೀತಿಯಲ್ಲಿ ಅನಾವರಣ ಮಾಡುವ ಮೂಲಕ ನೇಮ್ ಫೇಮ್ ಗಳಿಸಿಕೊಂಡರೆ, ಇನ್ನು ಕೆಲವರು ಟ್ರೋಲ್ ಗೂ ಗುರಿಯಾದರು. ಕೆಲವರು ತಮಗಿರುವ ನಟನಾ ಸಾಮರ್ಥ್ಯವನ್ನು ಟಿಕ್ ಟಾಕ್ ಮೂಲಕವೇ ಅನಾವರಣಗೊಳಿಸಿದರು.

ಆದರೆ ಈ ವ್ಯಕ್ತಿ ಮಾತ್ರ ಟ್ರೋಲ್ ವಿಡಿಯೋಗಳನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಾರೆ. ಈ ವ್ಯಕ್ತಿ ಯಾರಿರಬಹುದು ಎನ್ನುವ ಪ್ರಶ್ನೆಯೊಂದು ಹುಟ್ಟಿ ಕೊಳ್ಳುವುದು ಸಹಜ. ಇವರ ಹೆಸರು ವಿಕಾಸ್ ಘಾತಕ್, ಇವರನ್ನು ಹಿಂದೂಸ್ತಾನ್ ಭಾವು ಎಂದು ಕೂಡ ಕರೆಯುತ್ತಾರೆ. ಜನಪರ ಹಾಗೂ ದೇಶದ ಪರ ಮಾತನಾಡುತ್ತಾ ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಾರೆ.

hindustani bahu vikas unknown story :

ಹೌದು ಯಾವುದೇ ಭಯವಿಲ್ಲದೇ ಮುಕ್ತವಾಗಿ ತಮ್ಮ ಅಭಿಪ್ರಾಯವನ್ನು ಹೇಳುವ ಇವರು ಖ್ಯಾತಿ ಗಳಿಸಿ ಆರೇಳು ವರ್ಷವೇ ಆಗಿದೆ. ಆದರೆ 2019 ನಂತರ ಇವರು ಟ್ರೋಲ್ ಕಾಣಿಸಿಕೊಳ್ಳಲು ಶುರುವಾದರು. ತದನಂತರದಲ್ಲಿ ಹಿಂದೂಸ್ತಾನ್ ಭಾವು ಎಂದೇ ಫೇಮಸ್ ಆಗಿ ಬಿಟ್ಟರು. ಹೌದು ಲೈವ್ ಬಂದು ದೇಶದಲ್ಲಿನ ಕೆಲವು ವಿಚಾರಗಳನ್ನು ನೇರವಾಗಿ ಹಾಗೂ ಮುಕ್ತವಾಗಿಯೇ ಮಾತನಾಡುತ್ತಿದ್ದರು.

hindustani bhau vikas
hindustani bhau vikas

ಇವರ ರಗಡ್ ಭಾಷೆ ಹಾಗೂ ನೇರ ನುಡಿ ಎಲ್ಲರನ್ನು ಸೆಳೆದಿತ್ತು. ಅದಲ್ಲದೆ ಕಿರುತೆರೆಲೋಕದಲ್ಲಿ ವಿಲನ್ ಪಾತ್ರದಲ್ಲಿ ಹೆಚ್ಚು ಮಿಂಚಿದ್ದ ಇವರು ಬಿಗ್ ಬಾಸ್ ಹಿಂದಿ ಶೋನಲ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟರು. ಇನ್ನು ಸಂಜಯ್ ದತ್ ಅವರ ಅಪ್ಪಟ ಅಭಿಮಾನಿಯಾಗಿದ್ದರು ವಿಕಾಸ್. ಹೀಗಾಗಿ ಮಾತು ನಗು ಹಾಗೂ ನಡೆಯಲ್ಲಿ ನಟ ಸಂಜಯ್ ದತ್ ಅವರನ್ನೇ ಅನುಸರಿಸುತ್ತಾರೆ.

ರಿಲ್ಯಾಕ್ಸ್ ಆಗಲು ಪ್ರತಿದಿನ ನಶೆ ತೆಗೆದುಕೊಳ್ಳುತ್ತಿದ್ದಾರಂತೆ ನಟಿ ವಿನಯ ಪ್ರಸಾದ್ !! ಇವರು ತೆಗೆದುಕೊಳ್ಳುವ ಮಹಾ ನಶೆ ಯಾವುದು ಇಲ್ಲಿದೆ ನೋಡಿ !!!

ನೇರ ನುಡಿ ಹಾಗೂ ತನ್ನ ಕಠೋರವಾದ ಮಾತಿನಿಂದ ವಿಕಾಸ್ ಅವರು ಬದುಕಿಗಾಗಿ ಪತ್ರಿಕೋದ್ಯಮ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡರು. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಇವರ ಚಾನೆಲ್ ಗೆ ಎರಡು ಮಿಲಿಯನ್ ಗೂ ಅಧಿಕ ಸಬ್ ಸ್ಕ್ರಿಬರ್ ಇದ್ದಾರೆ. ಇತ್ತೀಚೆಗಷ್ಟೇ ರುಕ್ಕೋ ಜಾರಾ, ಸಬಾರಾ ಕರೋ ಎನ್ನುವ ವಿಡಿಯೋವೊಂದು ವೈರಲ್ ಆಗಿತ್ತು. ಈಗಾಗಲೇ ವಿಕಾಸ್ ಅವರು ಸಿಕ್ಕಾಪಟ್ಟೆ ಫೇಮಸ್ ಆಗಿದ್ದು, ಇವರ ವಿಡಿಯೋಗಳನ್ನು ನೋಡಲು ಒಂದಷ್ಟು ಅಭಿಮಾನಿ ಬಳಗವೇ ಇದ್ದಾರೆ.

Leave a Reply

Your email address will not be published. Required fields are marked *