ಧಮ್ ಇದ್ರೆ ತಡಿಲಿ ಎಂದು ಸಿಎಂ ಸಿದ್ದರಾಮಯ್ಯರಿಗೆ ಸವಾಲು ಹಾಕಿದ ಹಿಂದೂ ಫೈರ್ ಬ್ರಾಂಡ್ ಅನಂತ್ ಕುಮಾರ್ ಹೆಗಡೆ, ಖಡಕ್ ಆಗಿ ಏನು ಹೇಳಿದ್ರು ಗೊತ್ತಾ?..

ರಾಜ್ಯದ ರಾಜಕಾರಣಿದಲ್ಲಿ ಒಂದು ಪಕ್ಷದವರು ಮತ್ತೊಂದು ಪಕ್ಷದವರು ಆರೋಪ ಪ್ರತ್ಯಾರೋಪಗಳನ್ನು ಮಾಡುವುದು ಹೊಸದೇನಲ್ಲ. ಆದರೆ ಸದ್ಯಕ್ಕೆ ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧ ಪಟ್ಟಂತೆ ಚಟುವಟಿಕೆಗಳು ಬಹಳ ಜೋರಾಗಿದೆ. ಅದಲ್ಲದೇ, ಈ ಬಾರಿ ಯಾರು ಯಾವೆಲ್ಲಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬಹುದು ಎನ್ನುವ ಚರ್ಚೆಗಳು ನಡೆಯುತ್ತಿವೆ.

ಹೀಗಿರುವಾಗ ಇಷ್ಟು ದಿನಗಳ ಮರೆಯಲ್ಲಿ ಇದ್ದ ಹಾಲಿ ಸಂಸದ ಹಿಂದೂ ಫೈರ್ ಬ್ರಾಂಡ್ ಅನಂತ್ ಕುಮಾರ್ ಹೆಗಡೆ (Ananth Kumar Hegade) ಏಕಾಏಕಿ ಪ್ರತ್ಯಕ್ಷವಾಗಿದ್ದಾರೆ. ಅದಲ್ಲದೇ, ಉತ್ತರಕನ್ನಡ (Uttara kannada) ಲೋಕಸಭಾ ಕ್ಷೇತ್ರದಿಂದ ಯಾರು ಸ್ಪರ್ಧೆ ಮಾಡುತ್ತಾರೆ ಎನ್ನುವ ಚರ್ಚೆಗಳು ಜೋರಾಗಿದೆ.

ಆದರೆ ಚುನಾವಣೆಯಲ್ಲಿ ಅನಂತ್ ಕುಮಾರ್ ಹೆಗಡೆಯವರಿಗೆ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗುತ್ತಿದ್ದು, ಹೀಗಿರುವಾಗ ಸಿಎಂ ಸಿದ್ದರಾಮಯ್ಯನವರಿಗೆ ನೇರ ನೇರವಾಗಿ ಸವಾಲು ಹಾಕಿದ್ದಾರೆ. ಶಿರಸಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅನಂತ್ ಕುಮಾರ್ ಹೆಗಡೆ, “ಸಿದ್ದರಾಮಯ್ಯನವರಿಗೆ ಧಂ ಇದ್ರೆ ಹಿಂದೂ ರಾಷ್ಟ್ರ ಆಗೋದನ್ನ ತಡೆಯಲಿ ಎಂದು ಬಿಜೆಪಿ ಸಂಸದ ಅನಂತ್​ ಕುಮಾರ್​ ಹೆಗಡೆ ಸವಾಲು” ಹಾಕಿದ್ದಾರೆ.

“ಅಲ್ಪಸಂಖ್ಯಾತರ ಮತವಿಲ್ಲದೆ ಕಾಂಗ್ರೆಸ್ ಉಳಿಯುವುದಿಲ್ಲ. ಕಾಂಗ್ರೆಸ್ ಎಂದಿಗೂ ಬಹುಮತದ ರಾಜಕಾರಣಕ್ಕೆ ಒಲವು ತೋರಿಲ್ಲ. ಅದು ಸದಾ ಹುಚ್ಚಾಟದ ರಾಜಕಾರಣ ಮಾಡುತ್ತಿದೆ ಎಂದರು. ಟಿಪ್ಪು ಸುಲ್ತಾನ್ ಈ ರಾಜ್ಯವನ್ನು ಸಾಂಸ್ಕೃತಿಕವಾಗಿ ಮತ್ತು ಸಾಮಾಜಿಕವಾಗಿ ಹಾಳು ಮಾಡಿದ್ದು, ಜನ ಆತನನ್ನು ತಿರಸ್ಕರಿಸಿದ್ದಾರೆ. ಟಿಪ್ಪು ಹೆಸರಿನಲ್ಲಿ ಕಾಂಗ್ರೆಸ್ ರಾಜಕೀಯ ಮಾಡಿದರೆ, ಮುಂದೆ ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾಂಗ್ರೆಸ್ ನಾಯಕರು ಯೋಚಿಸಬೇಕು” ಎಂದಿದ್ದಾರೆ.

ಹಿಜಾಬಿನ ಬಗ್ಗೆ ಪ್ರತಿಕ್ರಿಯೆನೀಡಿದ ಅವರು, “ಯಾರು ಬೇಕಾದರೂ ಯಾವ ಡ್ರೆಸ್ ಹಾಕಿಕೊಳ್ಳಬಹುದು ಎಂಬ ಸಿದ್ದರಾಮಯ್ಯನವರ ಹೇಳಿಕೆ ಭವಿಷ್ಯದಲ್ಲಿ ಅಪಾಯಕಾರಿ ಬೆಳವಣಿಗೆಗಳಿಗೆ ಕಾರಣವಾಗಲಿದೆ. ಅವರಿಗೆ ಹಿಜಾಬ್ ಧರಿಸಲು ಅವಕಾಶ ನೀಡಿದರೆ, ನಮ್ಮ ಜನರು ಕೇಸರಿ ಶಾಲುಗಳನ್ನು ಧರಿಸುತ್ತಾರೆ. ಸರ್ಕಾರವು ಒಂದು ನಿರ್ದಿಷ್ಟ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಬೇಕು, ಆದರೆ ಸಿಎಂ ಅದನ್ನು ಮೀರುತ್ತಿದ್ದಾರೆ, ಸಿದ್ದರಾಮಯ್ಯನವರಿಗೆ ಛಲವಿದ್ದರೆ ಈ ದೇಶ ಹಿಂದೂ ರಾಷ್ಟ್ರವಾಗುವುದನ್ನು ತಡೆಯಲು ಪ್ರಯತ್ನಿಸಲಿ”ಎಂದಿದ್ದಾರೆ.

ಅಷ್ಟೇ ಅಲ್ಲದೇ, “ಈ ಸರ್ಕಾರ ಹೆಚ್ಚು ದಿನ ಇರಲ್ಲ ಸಿದ್ದರಾಮಯ್ಯನವರ ಸರ್ಕಾರ ಹೆಚ್ಚು ಕಾಲ ಉಳಿಯುವುದಿಲ್ಲ. ಕರ್ನಾಟಕದಲ್ಲಿ ಹಿಂದೂ ವಿರೋಧಿ ಸರ್ಕಾರ ಇರಲು ಸಾಧ್ಯವಿಲ್ಲ. ಮುಸಲ್ಮಾನರ ಹಿತಾಸಕ್ತಿ ಮುಂದಿಟ್ಟುಕೊಂಡು ಕಾಂಗ್ರೆಸ್ ಉಳಿಯಬೇಕು ಮತ್ತು ಮತ ಪಡೆಯಬೇಕು ಎಂದಾದರೆ ಇಂತಹ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ, ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಬರಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *