ಕನ್ನಡ ಬಿಗ್ ಬಾಸ್ ಸೀಸನ್ 10 ರಲ್ಲಿ ಅತೀ ಹೆಚ್ಚು ಫ್ಯಾನ್ಸ್ ಫಾಲ್ಲೋರ್ಸ್ ಹೊಂದಿರುವ ಸ್ಪರ್ಧಿ ಯಾರು ಗೊತ್ತಾ? ಇವರೇ ನೋಡಿ!!

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss) ಮುಕ್ತಾಯದಹಂತಕ್ಕೆ ಬಂದು ತಲುಪಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ವಿನ್ನರ್ ಯಾರು ಆಗ್ತಾರೆ ಎನ್ನುವುದಕ್ಕೆ ತೆರೆ ಬೀಳಲಿದೆ. ಆದರೆ ಬಿಗ್ ಬಾಸ್ ಪ್ರೇಕ್ಷಕರಲ್ಲಿ ಈ ಬಾರಿಯ ವಿನ್ನರ್ ಯಾರಾಗಬಹುದು ಎನ್ನುವ ಕುತೂಹಲವು ಸಹಜವಾಗಿಯೇ ಇದೆ.

ಇದಕ್ಕೆ ಕಾರಣ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳ ನಡುವೆ ಇರುವ ಪೈಪೋಟಿ. ಅದಲ್ಲದೇ ಇತ್ತ ಬಿಗ್ ಬಾಸ್ ಪ್ರಿಯರು ತಮ್ಮ ನೆಚ್ಚಿನ ಸ್ಪರ್ಧಿಗಳನ್ನು ವೋಟ್ ಮಾಡಿ ಗೆಲುವಿನತ್ತ ಸಾಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹಾಗಾದ್ರೆ ಈ ಬಾರಿ ಅತೀ ಹೆಚ್ಚು ಫಾಲ್ಲೋರ್ಸ್ ಯಾರು ಎನ್ನುವುದರ ಮಾಹಿತಿಯನ್ನು ಈ ಲೇಖನದಲ್ಲಿ ಓದಿ ತಿಳಿದುಕೊಳ್ಳಿ.

ಈ ಬಾರಿಯ ಕನ್ನಡ ಬಿಗ್ ಬಾಸ್ ಸೀಸನ್ 10 (Kannada Bigg Boss Sisan 10) ಹ್ಯಾಪಿ ಬಿಗ್ ಬಾಸ್ ಎನ್ನುವ ಟ್ಯಾಗ್ ಲೈನ್ ನೊಂದಿಗೆ ಆರಂಭವಾಗಿತ್ತು. ಆದರೆ ಹ್ಯಾಪಿ ಬಿಗ್ ಬಾಸ್ ಬದಲು ಮನೆಯಲ್ಲಿ ಗಲಾಟೆ, ಅಳು ಬೇಜಾರು ಇದೇ ತುಂಬಿಕೊಂಡಿದೆ ಎನ್ನುವುದು ತಿಳಿದಿರುವ ವಿಚಾರ. ಆದರೆ ಕೆಲ ಸ್ಪರ್ಧಿಗಳು ಈ ಎಲ್ಲಾ ಸವಾಲುಗಳ ನಡುವೆಯು ಬೆಸ್ಟ್ ಎನಿಸುವಂತಹ ಪೈಪೋಟಿ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ಕಾರ್ತಿಕ್ ಮಹೇಶ್ (Karthik Mahesh) , ಸಂಗೀತಾ ಶೃಂಗೇರಿ (Sangeetha Shrungeri) ಮತ್ತು ಡ್ರೋನ್ ಪ್ರತಾಪ್ (Drone Prathap) ಈ ಮೂವರ ನಡುವೆ ಪೈಪೋಟಿ ಇದ್ದಂತೆ ಕಾಣಿಸುತ್ತಿದೆ. ಇದರಲ್ಲಿ ಒಬ್ಬರು ಹೆಚ್ಚು ಫ್ಯಾನ್ಸ್ ಫಾಲ್ಲೋರ್ಸ್ ಅನ್ನು ಹೊಂದಿದ್ದಾರೆ. ನಟಿ ಸಂಗೀತಾ ಈ ಹಿಂದೆ ಮಾಡಿದ್ದ ತಪ್ಪಿನಿಂದಾಗಿ ಸುಮಾರು 13 ಸಾವಿರದಷ್ಟು ಫಾಲೋವರ್ಸ್’ನ್ನು ಕಳೆದುಕೊಂಡಿದ್ದರು. ಆ ಬಳಿಕ ಮತ್ತೆ ವೀಕ್ಷಕರ ಪ್ರೀತಿಯನ್ನು ಸಂಪಾದನೆ ಮಾಡಿಕೊಂಡರು.

ಇನ್ನು, ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ವೇಳೆ ಡ್ರೋನ್ ಪ್ರತಾಪ್ ಬಗ್ಗೆ ವೀಕ್ಷಕರು ಅವರ ಮೇಲೆ ಬೇರೆಯದ್ದೆ ಅಭಿಪ್ರಾಯವನ್ನು ಹೊಂದಿದ್ದರು. ಬರುಬರುತ್ತಾ ಡ್ರೋನ್ ಪ್ರತಾಪ್ ಮೇಲೆ ಇದ್ದ ಅಭಿಪ್ರಾಯವು ಬದಲಾಗಿ ಅವರ ಪಾಲಿಗೆ ದೊಡ್ಡ ಸಂಖ್ಯೆಯಲ್ಲಿ ಹುಟ್ಟಿಕೊಂಡರು. ಸದ್ಯಕ್ಕೆ ಡ್ರೋನ್ ಪ್ರತಾಪ್ ಅವರಿಗೆ ಬೆಂಬಲ ನೀಡುವ ದೊಡ್ಡ ಅಭಿಮಾನಿ ಬಳಗವೇ ಇದ್ದು, ವಿನ್ನರ್ ಪಟ್ಟ ಡ್ರೋನ್ ಗೆ ಸಿಗಲಿ ಎನ್ನುತ್ತಿದ್ದಾರೆ.

ಇತ್ತ ಕಾರ್ತಿಕ್ ಮಹೇಶ್ ಕೂಡ ಬಿಗ್ ಬಾಸ್ ಮನೆಯಲ್ಲಿರುವ ಸ್ಟ್ರಾಂಗ್ ಸ್ಪರ್ಧಿಗಳಲ್ಲಿ ಒಬ್ಬರು. ಪ್ರಾರಂಭದಿಂದಲೂ ಚೆನ್ನಾಗಿ ಆಡಿಕೊಂಡು ಬಂದು ಇದೀಗ ಈ ಬಾರಿಯ ವಿನ್ನರ್ ಇವರೇ ಆಗಬಹುದಾ ಎನ್ನುವುದನ್ನು ಅನೇಕರ ಮನಸ್ಸಿನಲ್ಲಿ ಮೂಡಿಸಿದ್ದಾರೆ. ಸಂಗೀತ, ಪ್ರತಾಪ್ ಹಾಗೂ ಕಾರ್ತಿಕ್ ನಾಮಿನೇಟ್ ಆಗಿ ಹಾಟ್ ಸೀಟ್’ನಲ್ಲಿದ್ದಾಗ ಹೆಚ್ಚು ವೋಟ್ ಕಾರ್ತಿಕ್ ಅವರಿಗೆ ಬಂದಿದೆ. ತಮ್ಮ ಆಟದ ಮೂಲಕವೇ ಅತೀ ಅಚ್ಚುಮೆಚ್ಚು ಸ್ಪರ್ಧಿ ಎನಿಸಿಕೊಂಡಿದ್ದಾರೆ. ಈ ಮೂವರಲ್ಲಿ ಕಾರ್ತಿಕ್ ಮಹೇಶ್ ಅವರೇ ಅತಿ ಹೆಚ್ಚು ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *