ಮೊಸರು (Curd) ಬಹುತೇಕರು ಇಷ್ಟಪಟ್ಟು ಸೇವಿಸುವ ಆಹಾರಗಳಲ್ಲಿ ಒಂದು ಈ ಮೊಸರು. ಹಾಲಿನಿಂದ ತಯಾರಿಸಲಾಗುವ ಮೊಸರನ್ನು ಹೆಚ್ಚಿನವರು ಊಟದ ವೇಳೆಯಲ್ಲಿ ಮಿಸ್ ಮಾಡದೇನೆ ಸೇವಿಸುತ್ತಾರೆ. ಈ ಮೊಸರಿನಲ್ಲಿ ಕ್ಯಾಲ್ಸಿಯಂ, ವಿಟಮಿನ್, ಕ್ಯಾಲೊರಿ ಹಾಗೂ ಪ್ರೋಟೀನ್‍ಗಳು ಅಧಿಕವಾಗಿವೆ. ಇದು ಕ್ಯಾಲ್ಸಿಯಂ, ವಿಟಮಿನ್ ಬಿ -2, ವಿಟಮಿನ್ ಬಿ -12, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್’ನಂತ ಹಲವಾರು ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿದೆ.
ಆದರೆ ರಾತ್ರಿಯ ವೇಳೆಯಲ್ಲಿ ಈ ಮೊಸರನ್ನು ಸೇವಿಸಬಾರದು ಹಾಗೂ ಮೊಸರನ್ನು ತಿನ್ನುವುದರಿಂದ ದಪ್ಪಗಾಗುತ್ತಾರೆ ಎಂಬ ತಪ್ಪು ಕಲ್ಪನೆಯಿದೆ. ಅಸ್ತಮಾ, ಕೆಮ್ಮು, ಶೀತ ಮತ್ತು ಇತರ ಉಸಿರಾಟದ ಕಾಯಿಲೆಗಳಿಂದ ಬಳಲುತ್ತಿರುವವರು ರಾತ್ರಿ ವೇಳೆ ಮೊಸರನ್ನು ಸೇವಿಸಬಾರದು. ಆದರೆ, ಈ ಮೊಸರು ಆರೋಗ್ಯಕರ ಕೊಬ್ಬನ್ನು ಹೊಂದಿದ್ದು, ಇದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜನ (Health Benefits) ಗಳು ಹಲವಾರು ಇದ್ದು ಆ ಬಗೆಗಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದು ಕೊಳ್ಳಬಹುದು.

* ಮೊಸರಿನ ನಿಯಮಿತ ಸೇವನೆ ಮಾಡುವುದರಿಂದ ಕೊಲೆಸ್ಟ್ರಾಲ್ ಮಟ್ಟವು ಕಡಿಮೆಯಾಗುತ್ತದೆ. ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
* ಚರ್ಮ (Skin) ದ ಆರೋಗ್ಯ ಹಾಗೂ ತಲೆಹೊಟ್ಟು ಸೇರಿದಂತೆ ಹಲವು ಸಮಸ್ಯೆಗಳು ಶಮನವಾಗುತ್ತದೆ.
* ಮೊಸರು ಸೇವನೆಯು ರಕ್ತದೊತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ಮೊಸರು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
* ಮೊಸರು ಕಾರ್ಸಿನೋಜೆನಿಕ್ ಗುಣಲಕ್ಷಣವಾಗಿದ್ದು, ಈ ಮೊಸರಿನ ದೇಹವನ್ನು ಕರುಳಿನ, ಮೂತ್ರಕೋಶ ಮತ್ತು ಸ್ತನ ಕ್ಯಾನ್ಸರ್ನಿಂದ ರಕ್ಷಿಸುತ್ತದೆ.
* ಪ್ರತಿದಿನ ಮೊಸರು ಸೇವಿಸುವುದರಿಂದ ಇದು ಕರುಳಿನಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ನಾಶಮಾಡಿ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವನ್ನಾಗಿಡುತ್ತದೆ.
* ಈ ಮಲಬದ್ಧತೆ, ಉರಿಯೂತದ ಕರುಳಿನ ಕಾಯಿಲೆ ಸೇರಿದಂತೆ ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ.
* ಮೊಸರಿನ ನಿಯಮಿತ ಸೇವನೆಯಿಂದ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ನಮ್ಮ ದೇಹವನ್ನು ವಿವಿಧ ಸೋಂಕುಗಳಿಂದ ರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
* ಮೊಸರಿನಲ್ಲಿ ಕ್ಯಾಲ್ಸಿಯಂ ಅಧಿಕವಾಗಿದ್ದು, ಮೂಳೆಯ ಆರೋಗ್ಯವನ್ನು ಕಾಪಾಡುತ್ತದೆ.
* ಮೊಸರಿನಲ್ಲಿರುವ ಪ್ರೋಬಯಾಟಿಕ್ ಅಂಶವು ಇರುವುದರಿಂದ ಒತ್ತಡವನ್ನು ಕಡಿಮೆ ಮಾಡಿ ಖಿನ್ನತೆಯ ಸಮಸ್ಯೆಯಿಂದ ದೂರ ಮಾಡುತ್ತದೆ.